ರೇಡಿಯೋ ಶಿವಮೊಗ್ಗದಲ್ಲಿ ಜ.4ರಿಂದ ಪ್ರತಿ ಗುರುವಾರ ಆರೋಗ್ಯ ಸರಣಿ ವಿಶೇಷ ಕಾರ್‍ಯಕ್ರಮ…
ಶಿವಮೊಗ್ಗ: ನಗರದ ಪ್ರತಿಷ್ಠಿತ ಸುಬ್ಬಯ್ಯ ಮೆಡಿಕಲ್ ಕಾಲೇಜ್ ಮತ್ತು ಮ್ಯಾಕ್ಸ್ ಆಸ್ಪತ್ರೆ ಸಹ ಯೋಗದಲ್ಲಿ ರೇಡಿಯೋ ಶಿವಮೊಗ್ಗ ಸಮುದಾಯ ಬಾನುಲಿಯಲ್ಲಿ ಆರೋಗ್ಯ ಸರಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸುಬ್ಬಯ್ಯ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಹಾಗೂ ಖ್ಯಾತ ವೈದ್ಯರಾದ ಡಾ| ವಿನಾಯಕ್ ಅವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಸಮುದಾಯ ಬಾನುಲಿಯ ಆರೋಗ್ಯ ಸರಣಿಯಲ್ಲಿ ಜ.೪ರ ನಾಳೆಯಿಂದ ಒಂದು ವರ್ಷ ಕಾಲ ಪ್ರತಿ ಗುರುವಾರ ಸಂಜೆ ೫.೩೦ರಿಂದ ೬ಗಂಟೆಯವರೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದ್ದು, ಮೊದಲ ಸರಣಿಯಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ| ನಾಗೇಂದ್ರ ಅವರು ಆಸ್ಪತ್ರೆಯಲ್ಲಿ ಲಭ್ಯವಿರುವ ಸೇವೆಗಳ ಕುರಿತು ಮಾಹಿತಿ ನೀಡಲಿದ್ದಾರೆ. ನಂತರದ ಸರಣಿಗಳಲ್ಲಿ ಆಸ್ಪತ್ರೆಯ ವಿವಿಧ ವಿಭಾಗಗಳ ತಜ್ಞ ವೈದ್ಯರು ಭಾಗವಹಿಸಿ ಮಾತನಾಡಲಿದ್ದಾರೆ ಎಂದರು.
ಈ ಸರಣಿಯಲ್ಲಿ ಮನುಷ್ಯನ ಶರೀರದ ವಿವಿಧ ಅವಯವಗಳ, ವಿಭಾಗವಾರು ವಿಷಯ ತಜ್ಞರು ಮಾತನಾಡಲಿದ್ದು, ಪ್ರತಿಯೊಬ್ಬರ ಸಮಗ್ರ ಆರೋಗ್ಯದಿಂದ ಸರ್ವಾಂ ಗೀಣ ಸಮಾಜದ ಪ್ರಗತಿ ಸಾಧ್ಯ ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಈ ಆರೋಗ್ಯ ಸರಣಿಯು ಮಲೆನಾಡಿನ ಪ್ರತಿಯೊಬ್ಬರನ್ನು ತಲುಪಬೇಕಿದೆ. ರೇಡಿಯೋ ಶಿವಮೊಗ್ಗ ೯೦೮ ಎಫ್‌ಎಂ ಸಮುದಾಯ ಬಾನುಲಿ ದಿನ ೨೪ ಗಂಟೆಯೂ ಪ್ರಸಾರವಾ ಗುತ್ತಿದ್ದು, ರೇಡಿಯೋ ಶಿವಮೊಗ್ಗ ಆಪ್‌ನ್ನು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಸ್ಟೋರ್‌ನಿಂದ ಡೌನ್‌ಲ್ರೊ ಮಾಡಿಕೊಂಡು ಆಲಿ ಸಬಹುದಾಗಿದೆ ಎಂದು ರೇಡಿ ಯೋ ಶಿವಮೊಗ್ಗದ ಗುರುಪ್ರಸಾದ್ ಅವರು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಖ್ಯಾತ ವೈದ್ಯರಾದ ಡಾ| ವಿಕ್ರಮ್ ಕುಮಾ ರ್, ಡಾ| ಸುಜಿತ್ ಹಾಲಪ್ಪ, ಡಾ| ಕಮಲ್ ಪಾಂಡ್ಯ ಉಪಸ್ಥಿತರಿದ್ದರು.