ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಆರೋಗ್ಯ- ದಂತ – ನೇತ್ರ ತಪಾಸಣಾ ಶಿಬಿರ…

Share Below Link

ಶಿವಮೊಗ್ಗ: ಮನುಷ್ಯನ ದೇಹದಲ್ಲಿ ಒಂದು ಸದೃಢ ಹೃದಯ ದೇವರು ನೀಡಿದ್ದು, ಒಂದು ದಿನಕ್ಕೆ ಒಂದುಲಕ್ಷ ಬಾರಿ ಬಡಿಯುತ್ತದೆ. ಏಳು ಸಾವಿರ ಲೀಟರ್ ರಕ್ತವನ್ನುಪಂಪ್ ಮಾಡು ತ್ತದೆ. ಆದರೂ ಆ ವ್ಯಕ್ತಿಗೆ ತಿಳಿಯು ವುದೇ ಇಲ್ಲ. ಪ್ರಪಂಚದಲ್ಲಿ ೭ ಮಿಲಿಯನ್ ಜನರು ಇದ್ದರು. ಅವರಲ್ಲಿ ವ್ಯತ್ಯಸಗಳು ಇದೆ. ಅಂದರೇ, ಈ ದೇವರು ಕೊಟ್ಟ ದೇಹವನ್ನು ಎಲ್ಲರೂ ರಕ್ಷಿಸುವುದು ಅಗತ್ಯವಿದೆ ಎಂದು ಸರ್ಜಿ ಆಸ್ಪತ್ರೆಯ ಸರ್ಜಿ ಪೌಂಡೆಶನ್‌ನ ಅಧ್ಯಕ್ಷರಾದ ಡಾ. ಧನಂಜಯ್ ಸರ್ಜಿ ಹೇಳಿzರೆ.


ಅವರು ಇಂದು ನಗರದ ಆಚರ್‍ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಶಿವಮೊಗ್ಗ ಇದರ ಐಕ್ಯೂಎಸಿ ವಿಭಾಗ ಎನ್‌ಎಸ್‌ಎಸ್ ವಿಭಾಗ, ರೆಡ್‌ಕ್ರಾಸ್, ಸರ್ಜಿ ಪೌಂಡೇಷನ್ ಮತ್ತು ಶಂಕರ ಕಣ್ಣಿನ ಆಸ್ಪತ್ರ ಇವರ ಸಂಯುಕ್ತಾಶ್ರಯ ದಲ್ಲಿ ಕಾಲೇಜಿನ ಚಂದನ ಸಭಾಂ ಗಣದಲ್ಲಿ ಆರೋಗ್ಯ ತಪಾಸಣೆ, ದಂತ ತಪಾಸಣೆ, ನೇತ್ರ ತಪಾಸಣೆ ಮತ್ತು ರಕ್ತ ತಪಾಸಣ ಹಾಗೂ ನೇತ್ರಾದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಗವಂತ ಮಾನವನಿಗೆ ಅಮೂಲ್ಯವಾದ ಎರಡು ಕಣ್ಣು, ಎರಡು ಕಿವಿ ಕೈ ಕಾಲು ಕಿಡ್ನಿ ಶ್ವಾಸಕೋಶ ಎಲ್ಲವನ್ನು ಎರಡು ನೀಡಿ ಒಂದೇ ಹೃದಯವನ್ನು ನೀಡಿzನೆ. ಆ ಹೃದಯ ಭೌತಿಕ ವಾಗಿ ಆರೋಗ್ಯಪೂರ್ಣವಾಗಿರ ಬೇಕು. ಜೊತೆಗೆ ಭಾವನ್ಮಾತಕವಾಗಿ ಇರಬೇಕು. ಇನ್ನೊಬ್ಬರ ಕಷ್ಟಗಳಿಗೆ ಮಿಡಿಯುವ ರೀತಿಯಲ್ಲಿ ಹೃದಯ ಇರಬೇಕು. ಕೊಡುವು ದನ್ನು ನಾವು ಕಲಿಯಬೇಕು. ಇನ್ನೊಬ್ಬರ ಕಷ್ಟಗಳಿಗೆ ಕಣ್ಣೀರು ಮಿಡಿಯುವ ವ್ಯಕ್ತಿತ್ವ ಇರಬೇಕು ಆಗ ಮಾತ್ರ ಪರಿಪೂರ್ಣ ಮನು ಷ್ಯನಾಗಲು ಸಾಧ್ಯ ಎಂದರು.
ಮನುಷ್ಯ ಬದುಕಲು ಶುದ್ಧ ನೀರು, ಗಾಳಿ ಮತ್ತು ಆಹಾರ ಬೇಕೇ ಬೇಕು. ನಾವು ಸೇವಿಸುವ ನೀರಿನಲ್ಲಿ ಶೇ.೭೬ ಕಲುಷಿತ ನೀರು ಇದೆ. ದೇಶದಲ್ಲಿ ಮೂರು ಮುಕ್ಕಾಲು ಕೋಟಿ ಜನ ನೀರಿನಿಂದ ಉಂಟಾ ಗುವ ಸೋಂಕಿನಿಂದ ಬಳುತ್ತಿzರೆ. ವರ್ಷಕ್ಕೆ ೧೫ ಲಕ್ಷ ಮಕ್ಕಳು ಅತಿಸಾರ ವಾಂತಿಬೇದಿಯಿಂದ ಸಾಯುತ್ತಿ zರೆ. ನೀರನ್ನು ಶೋಧಿಸಿ ಕುಡಿ ಯಬೇಕು. ಪಾನಿಪೂರಿ ಮತ್ತು ಗೋಬಿಮಂಜೂರಿ ಮೊದಲಾದ ರಸ್ತೆಯ ಬದಿಯ ತಿಂಡಿಗಳಿಂದ ಆರೋಗ್ಯದ ಮೇಲೆ ಪರಿಣಾಮ ವಾಗುತ್ತದೆ. ಮಾಂಸಹಾರ ತಿನ್ನು ವವರು ವರ್ಷಕ್ಕೊಮ್ಮೆ ಜಂತು ಹುಳು ಔಷಧಿಯನ್ನು ಸೇವಿಸಲೇ ಬೇಕು. ಜಂತುಹುಳುಗಳು ಮೆದು ಲಿಗೆ ಹೋದರೆ, ಪಿಡ್ಸ್‌ನಂತಹ ಖಾಯಿಲೆ ಬರುತ್ತದೆ. ಮತ್ತು ಮೆದುಳು ಹಾಳಾಗುತ್ತದೆ. ಪ್ರತಿ ೮ ಜನರಲ್ಲಿ ಒಬ್ಬರು ಅಶುದ್ಧ ಗಾಳಿಯಿಂದ ಸಾಯುತ್ತಾರೆ. ಅದು ಶ್ವಾಸಕೋಶಕ್ಕೆ ಹಾನಿ ಮಾಡುತ್ತದೆ. ಸಿಗರೇಟ್, ತಂಬಾಕು ಸೇವಿಸಬಾ ರದು, ಒಳ್ಳೆಯ ಗಾಳಿಯ ಸೇವನೆ ಮಾಡಬೇಕಾದರೆ ಮರಗಳನ್ನು ಬೆಳೆಸಬೇಕು ಎಂದರು.


ಒಂದು ಕಾರು ೨೬ ಸಾವಿರ ಮೈಲು ಚಾಲನೆ ಮಾಡಿದಾಗ ಆಗುವ ವಾಯು ಮಾಲಿನ್ಯ ಸರಿ ಮಾಡಲು ಒಂದು ಎಕರೆ ಕಾಡು ಬೇಕು. ಕೋಟ್ಯಾಂತರ ವಾಹನ ಗಳು ಓಡುಡಾವಾಗ ಎಷ್ಟು ಅಶುದ್ಧ ಗಾಳಿಯನ್ನು ನಾವು ಸೇವಿಸುತ್ತೇವೆ ಎಂಬುದನ್ನು ಮನಗಂಡು ಪ್ರತಿದಿನ ಶ್ವಾಸಕೋಶದ ಸಾಂಧ್ರತೆಯನ್ನು ಹೆಚ್ಚಿಸಲು ದೀರ್ಘ ಉಸಿರಾಟ ಯೋಗವನ್ನು ಮಾಡಲೇಬೇಕು. ಶುದ್ಧವಾದ ಗಾಳಿ, ಶುದ್ಧ ನೀರು, ಶುದ್ಧ ಆಹಾರ ಮೂರರ ಸೇವನೆ ಯಿಂದ ಮಾತ್ರ ಮನುಷ್ಯ ಆರೋಗ್ಯವಾಗಿ ಇರಲಿ ಸಾಧ್ಯ. ನಮ್ಮ ಆರೋಗ್ಯ ನಮ್ಮ ಭವಿಷ್ಯ ನಮ್ಮದೇ ಕೈಯಲಿ ಇದೆ. ಇರುವುದೊಂದೇ ಹೃದಯ ಚೆನ್ನಾಗಿ ನೋಡಿಕೊಳ್ಳಿ ಎಂದರು.
ಮುಖ್ಯ ಅತಿಥಿಗಳಾಗಿ ರೋ. ವಿಜಯ್‌ಕುಮಾರ್, ಡಾ. ಸವಿನಯ,ಡಾ. ಸ್ಪೂರ್ತಿ, ಡಾ. ದೀಪ ಭಾಗವಹಿಸಿದ್ದರು. ಅಧ್ಯಕ್ಷತೆ ಯನ್ನು ಪ್ರಾಂಶುಪಾಲರಾದ ಮಮತಾ ಪಿ.ಆರ್. ವಹಿಸಿದ್ದರು. ಪ್ರೊ.ಎಸ್. ಜಗದೀಶ್ ಕಾರ್ಯ ಕ್ರಮಾಧಿಕಾರಿ ಪೊ. ಕೆ.ಎನ್. ನಾಗರಾಜು, ಪ್ರೊ.ಮಂಜುನಾಥ್ ಮತ್ತಿತರರು ಇದ್ದರು.