ಸಂಸದ ಪ್ರಜ್ವಲ್ ಬಂಧನಕ್ಕೆ ಆಗ್ರಹಿಸಿ ಮೇ ೩೦ರಂದು ಹಾಸನ ಚಲೋ…
ಚನ್ನರಾಯಪಟ್ಟಣ : ಪೆನ್‌ಡೈವ್ ಪ್ರಕರಣ ಕುರಿತಂತೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಶೀಘ್ರವೇ ಬಂಧಿಸುವಂತೆ ಒತ್ತಾಯಿಸಲು ಮೇ ೩೦ರಂದು ಹಾಸನ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯುಸಿ ಮುಖಂಡ ಗೊಲ್ಲರಹೊಸಹಳ್ಳಿ ಮಂಜುನಾಥ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಚನ್ನರಾಯಪಟ್ಟಣ ತಾಲೂಕಿ ನಿಂದ ಕನಿಷ್ಠ ೫೦೦ ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವರು ಎಂದ ಅವರು, ರಾಜ್ಯದ ನಾನಾ ಭಾಗಗಳಿಂದ ಸುಮಾರು ೧೦ ಸಾವಿರ ಮಂದಿ ಸೇರುವ ನಿರೀಕ್ಷೆ ಯಿದ್ದು, ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ನಡೆಸಿ ಡಿಸಿ ಕಚೇರಿ ಎದುರು ಸಭೆ ನಡೆಸಲಾಗುವುದು ಎಂದರು.
ಕಾನೂನಿನ ಕಣ್ಣು ತಪ್ಪಿಸುವ ಪ್ರಯತ್ನವಾಗುತ್ತಿದೆ ಎಂಬ ಆತಂಕ ಎದುರಾಗಿದ್ದು ಈ ಕುರಿತಂತೆ ಎಚ್ಚರ ವಹಿಸುವಂತೆ ಆಗ್ರಹಿಸಲಾಗು ವುದು. ಕೇಂದ್ರ ಸರ್ಕಾರವೂ ಆರೋಪಿಯ ವಿರುದ್ಧ ಕಠಿಣ ಕ್ರಮಕ್ಕೆ ಹಾಗೂ ಪ್ರಜ್ವಲ್ ರೇವಣ್ಣರನ್ನು ಸ್ವದೇಶಕ್ಕೆ ವಾಪಸ್ ಕರೆಸಲು ರಾಜ್ಯ ಸರ್ಕಾರಕ್ಕೆ ನೆರವಾಗಬೇಕು ಎಂದರು.
ಪ್ರಮುಖರಾದ ಮಂಜುನಾಥ್, ಉತ್ತೇನಹಳ್ಳಿ ಚಂದ್ರು, ಕೆಎನ್ ನಾಗೇಶ್, ಸಿ.ಜಿ.ರವಿ, ಮಾಳೇನಹಳ್ಳಿ ಹರೀಶ್, ಕಲ್ಕೆರೆ ವಾಸುದೇವ್, ಪೋತನಹಳ್ಳಿ ಕರಿಯಪ್ಪ,ರವಿ, ತೇಜಸ್ ಇನ್ನಿತರರಿದ್ದರು.