ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಕುಡಿಯುವ ನೀರಿಗೆ ಹಾಹಾಕಾರ: ನಗರಸಭೆಯಲ್ಲಿ ಕಾವೇರಿದ ಚರ್ಚೆ; ಧರಣಿ

Share Below Link

ಭದ್ರಾವತಿ:ನಗರ ಮಧ್ಯ ಭಾಗ ದಲ್ಲಿ ಭದ್ರಾ ನದಿ ಹರಿಯುತ್ತಿದ್ದರೂ ಬೇಸಿಗೆ ಕಾಲದಲ್ಲಿ ಎಂದಿನಂತೆ ಮಾ ಮೂಲಿಯಾಗಿ ನೀರಿನ ಸಮಸ್ಯೆ ಬಗ್ಗೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕಾವೇರಿದ ಚರ್ಚೆ ಧರಣಿ ನಡೆದಿದೆ.
ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಪ್ರಾರಂಭದಲ್ಲಿ ಸದಸ್ಯರುಗ ಳಾದ ವಿ.ಕದಿರೇಶ್, ಅನುಪಮ ಚನ್ನೇಶ್, ಶಶಿಕಲಾ ನಾರಾಯ ಣಪ್ಪ, ಬಿ.ಕೆ.ಮೋಹನ್, ಮತ್ತಿತ ರರು ತಮ್ಮ ಭಾಗಗಳಲ್ಲಿ ಕುಡಿ ಯುವ ನೀರಿನ ಸಮಸ್ಯೆ ಬಗ್ಗೆ ಹಲ ವಾರು ಭಾರಿ ದೂರೂ ನೀಡಿದರೂ ಸಭೆಯಲ್ಲಿ ಚರ್ಚೆ ನಡೆಸಿದರೂ ಯಾವುದೆ ಪ್ರಯೋಜನ ಇಲ್ಲ ವಾಗಿದೆ. ಇದರಿಂದ ಜನರ ಪ್ರಶ್ನೆ ಗಳಿಗೆ ಉತ್ತರಿಸುವುದು ಕಷವ್ಟಾಗಿದೆ ಎಂದು ಆರೋಪಿಸಿದರು.
ಅಲ್ಲದೆ ನೀರಿನ ವಿಭಾಗದಲ್ಲಿ ಅಗತ್ಯಕ್ಕಿಂತ ಹೆಚ್ಚಿದನ ಸಿಬ್ಬಂದಿಗಳು ಇಂಜೀನೀಯರ್‌ಗಳು ಇದ್ದರೂ ಅವರುಗಳು ಸರಿಯಾಗಿ ಕರ್ತವ್ಯ ನಿಭಾಯಿಸುತ್ತಿಲ್ಲ. ಇವರ ಬೇಜ ವಾಬ್ದಾರಿಯ ಪರಿಣಾಮ ಜನರು ತ್ರೀವ ತೊಂದರೆ ಅನುಭವಿಸುವ ಂತಾಗಿದೆ. ನಗರಸಭೆಯಲ್ಲಿ ಕುಡಿ ಯುವ ನೀರಿನ ವ್ಯವಸ್ಥೆ ನೋಡಿ ದರೆ ದಿನಕ್ಕೆ ಎರಡು ಭಾರಿ ಸಮರ್ಪ ಕವಾಗಿ ಯಾವುದೆ ತೊಂದರೆ ಇಲ್ಲದೆ ನೀರು ಪೊರೈಕೆ ಮಾಡಬ ಹುದು. ಆದರೆ ಒಂದು ಬಾರಿಯೂ ಸಮರ್ಪಕವಾಗಿ ನೀರು ಕೊಡಲು ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಯುಕ್ತ ಮನುಕುಮಾರ್ ಮಾತನಾಡಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮೂರು ತಿಂಗಳ ಕಾಲಾವಕಾಶ ಕೊಡಿ ಸಮ ರ್ಪಕವಾಗಿ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗು ವುದು ಎಂದು ಉತ್ತರ ನೀಡಿದಾಗಿ ಸದಸ್ಯರುಗಳು ಅದಕ್ಕೆ ಅಸಮಾ ಧಾನ ವ್ಯಕ್ತಪಡಿಸಿದರು, ಕದಿರೇಶ್ ಚನ್ನಪ್ಪ ಸೇರಿದಂತೆ ಇತರರು ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಬೇರೆ ಪ್ರತ್ಯೇಕ ಸಭೆ ಕರೆಯಿರಿ ಆಗ ವಿವಿರವಾಗಿ ಚರ್ಚಿಸಿ ಪರಿ ಹಾರವನ್ನು ಕಂಡುಕೊಳ್ಳಬೇಕು ಇಲ್ಲದಿದ್ದರೆ ಇದಕ್ಕೆ ಪರಿಹಾರ ಸಿಗುವುದಿಲ್ಲ ಎಂದರು.
ಮೋಹನ್ ಮಾತನಾಡಿ ಈ ವಿಭಾಗದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಸರಿಯಾಗಿ ಕೆಲಸ ಮಾಡದೆ ಸುತ್ತಾಡುತ್ತಾ ನಿಗದಿತ ಕೆಲಸವನ್ನು ಬಿಟ್ಟು ಬೇರೆ ಎ ಹಾಗು ಸ್ವಂತ ಕೆಲಸ ಕಾರ್ಯಗಳನ್ನು ಮಾಡುತ್ತಾ ಕಾಲಾಹರಣ ಮಾಡು ತ್ತಾರೆ. ನೀರು ಬಿಟ್ಟ ವಾರ್ಡ್‌ನಲ್ಲಿ ಸಿಬ್ಬಂದಿಗಳು ಓಡಾಡುವುದಿಲ್ಲ. ಓಡಾಡಿದರೆ ನೀರಿನ ಸಮಸ್ಯೆ ಏನು ಎಂಬುದು ತಿಳಿಯುತ್ತದೆ ಎಂದರು. ಬೇವಾಬ್ದಾರಿ ತೋರುವ ಇಂತಹ ಸಿಬ್ಭಂದಿಗಳ ಮೇಲೆ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.


ಕುಡಿಯುವ ನೀರಿನ ಮಹತ್ವ ಗೋತ್ತಿಲ್ಲದ ಜನರು ಅನಾವಶ್ಯಕ ವಾಗಿ ನೀರನ್ನು ಪೋಲು ಮಾಡುತ್ತಿ zರೆ. ಎಷ್ಟು ಬೇಕೋ ಅಷ್ಟು ನೀರ ನ್ನು ಉಪಯೋಗಿಸಿ ನಲ್ಲಿಯನ್ನು ಬಂದ್ ಮಾಡಿದರೆ ಬೇರೆಯವರಿಗೆ ಅನುಕೂಲವಾಗುತ್ತದೆ. ಇನ್ನು ಬೀದಿ ನಲ್ಲಿಗಳ ಟ್ಯಾಪ್‌ಗಳನ್ನು ಮುರಿದು ಹಾಕಿ ನೀರು ಅನಾವಶ್ಯ ಕವಾಗಿ ಪೋಲಾಗುವಂತೆ ಮಾಡು ತ್ತಾರೆ. ಇದರ ಪರಿಣಾಮ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ನೀರು ಪೊರೈಕೆ ನಲ್ಲಿಗೆ ಮೀಟರ್ ಅಳವಡಿ ಸಿದರೆ ಅನಾವಶ್ಯಕವಾಗಿ ನೀರು ಪೋಲಾಗುವುದನ್ನು ತಪ್ಪಿಸಬ ಹುದು. ಆಗ ಜನರು ತಮಗೆ ಎಷ್ಟು ಬೇಕೋ ಅಷು ನೀರನ್ನು ಮಾತ್ರ ಬಳಸುತ್ತಾರೆ. ಆಗ ನೀರಿನ ಸಮಸ್ಯೆ ತಪ್ಪಿ ಎಲ್ಲರಿಗೂ ನೀರು ಸಿಗುತ್ತದೆ ಎಂದರು.


ನಗರಸಭೆಯ ಸಭೆಯಲ್ಲಿ ನಗರದ ಸಮಸ್ಯೆಗಳ ಬಗ್ಗೆ ಮಾತ ನಾಡಲು ಎ ಸಸ್ಯರುಗಳಿಗೆ ಅವಕಾಶ ಸಿಗಬೇಕು. ಕೇವಲ ಕೆಲವು ಸದಸ್ಯರುಗಳು ಮಾತ್ರ ಮಾತನಾ ಡುತ್ತಾರೆ ಉಳಿದ ಸದಸ್ಯರುಗಳಿಗೆ ಅವಕಾಶ ಸಿಗುವುದಿಲ್ಲ. ನಂತರ ಸಭೆ ಮುಕ್ತಾಯ ಆಗುತ್ತದೆ ಎಂದು ಕೆಲ ಸದಸ್ಯರುಗಳು ಆರೋಪ ಮಾಡಿ ದರೆ, ನಮ್ಮ ವಾರ್ಡಿನ ಸಮಸ್ಯೆಯ ಬಗ್ಗೆ ಮಾತನಾಡುವುದು ಹೇಗೆ ಸಮಸ್ಯೆಗಳನ್ನು ಕೇಳುವವರು ಯಾರು. ಕೇವಲ ಕಾಫಿ ಟೀ ಕುಡಿ ಯಲು ಸಭೆಗೆ ಬರಬೇಕಾ ಎಂದು ಲೇವಡಿ ಮಾಡಿದರು. ಈ ಎ ಗೊಂದಲಗಳ ನಡುವೆ ಎಂದಿನಂತೆ ಸಭೆಯ ಎ ಅಜೆಂಡಾಗಳನ್ನು ಓದಿ ಮುಗಿಸಿರು.
ಉಪಾಧ್ಯಕ್ಷೆ ಸರ್ವಮಂಗಳ, ಸ್ಥಾಯಿ ಸಮಿತಿ ಅಧ್ಯಕ್ಷ ಸುದೀಪ್ ಉಪಸ್ಥಿತರಿದ್ದರು.