ಬಯಲುಸೀಮೆ ಪ್ರದೇಶ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಹೆಚ್.ಬಿ ಮಂಜಪ್ಪಅವರಿಂದ ಅಧಿಕಾರ ಸ್ವೀಕಾರ…
ಚಿತ್ರದುರ್ಗ : ದಾವಣಗೆರೆ ಜಿ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ ಮಂಜಪ್ಪಅವರು ಬಯಲುಸೀಮೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.
ನಂತರ ಸಭೆಯನ್ನು ಉzಶಿಸಿ ಮಾತನಾಡಿದ ಅವರು, ಮಂಡಳಿ ಯಿಂದ ರೈತರಿಗೆ ಸಾರ್ವಜನಿಕ ಅರ್ಹ ಫಲಾನುಭವಿಗಳಿಗೆ ಇರುವ ಸೌಲಭ್ಯಗಳ ಕಲ್ಪಿಸುವುದಾಗಿ ತಿಳಿಸಿದರು.

ಕಳೆದ ಹತ್ತು ವರ್ಷಗಳಿಂದ ಜಿ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷ ಹೇಳಿದ ಕೆಲಸಗಳ ಮಾಡಿಕೊಂಡು ಬಂದಿದ್ದು ತಾಳಿದವನು – ಬಾಳಿಯಾನು ಎಂಬಂತೆ ಪಕ್ಷವು ನಂಬಿಕೆಯಿಂದ ಜವಾಬ್ದಾರಿಯ ಕಾರ್ಯವನ್ನು ನೀಡಿದೆ ಎಂದರು.
ಸಭೆಯಲ್ಲಿ ಹೊನ್ನಾಳಿ ಶಾಸಕ ಶಾಂತನಗೌಡರು, ಜಗಳೂರು ಶಾಸಕ ಡಿ. ದೇವೇಂದ್ರಪ್ಪ, ಮಾಜಿ ಸಚಿವ ಹೆಚ್. ಆಂಜನೇಯ ರವರು ಸಭೆಯಲ್ಲಿ ಮಾತನಾಡಿ ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು.
ಜಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಶೀರ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಶಿವನಗೌಡ, ಹೊನ್ನಾಳಿ ಪಕ್ಷದ ಮುಖಂಡರಾದ ಬಸವನಗೌಡ ಗದುಗೆಶ್, ಆರ್. ನಾಗಪ್ಪ ,ಮಂಡಳಿ ಕಾರ್ಯದರ್ಶಿ ಕೃಷ್ಣ ನಾಯ್ಕ್ , ಚಿತ್ರದುರ್ಗ ಜಿ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳು ಇದ್ದರು.

