ಅತಿಥಿ ಉಪನ್ಯಾಸಕರ ಪ್ರತಿಭಟನೆ…
ಶಿವಮೊಗ್ಗ: ೨೦೨೨-೨೩ನೇ ಸಾಲಿಗೆ ಆಯ್ಕೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಶೈಕ್ಷಣಿಕ ಅವಧಿ ಮಧ್ಯದಲ್ಲಿ ಕರ್ತವ್ಯದಿಂದ ಬಿಡುಗಡೆಗೊಳಿಸದೆ ಸೇವೆಯಲ್ಲಿ ಮುಂದುವರಿಸುವಂತೆ ಆಗ್ರಹಿಸಿ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ, ಬೆಂಗಳೂರು ವತಿಯಿಂದ ಪ್ರಾದೇಶಿಕ ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ ಶಿವಮೊಗ್ಗ ಇವರ ಮೂಲಕ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಜೆಡಿ ಕಚೇರಿ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ದಾವಣಗೆರೆ ವಿವಿ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗಳಲ್ಲಿ ೨೩-೨೪ನೇ ಸಾಲಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ವಿವಿ ಶೈಕ್ಷಣಿಕ ವೇಳಾಪಟ್ಟಿಯು ೮-೭- ೨೦೨೩ಕ್ಕೆ ಮುಕ್ತಾಯವಾಗಲಿದ್ದು, ಶೈಕ್ಷಣಿಕೆ ಅವಧಿಪೂರ್ವದಲ್ಲಿ ಅತಿಥಿ ಉಪ ನ್ಯಾಸಕರನ್ನು ಸೇವೆಯಿಂದ ಬಿಡು ಗಡೆ ಮಾಡದಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಅತಿಥಿ ಉಪನ್ಯಾಸಕರ ಸೇವೆ ಯನ್ನು ೧೨ ತಿಂಗಳು ಅಗತ್ಯ ಸೇವೆ ಎಂದು ಪರಿಗಣಿಸಿ ಸೇವೆಯಲ್ಲಿ ಮುಂದುವರಿಸಿ ಸಕಾಕ್ಕೆ ಗೌರವ ಧನ ವೇತನ ನೀಡಬೇಕು. ಅವೈ eನಿಕ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಶೈಕ್ಷಣಿಕ ಹಿತದೃಷ್ಟಿಯಿ ಂದ ರದ್ದುಪಡಿಸಬೇಕು. ಅತಿಥಿ ಉಪನ್ಯಾಸಕರ ಸೇವೆಯನ್ನು ಕರ್ನಾ ಟಕ ನಾಗರಿಕ ಸೇವಾ ನಿಯಮ ೧೯೭೭ ನಿಯಮ ೧೪ರ ಅಡಿಯಲ್ಲಿ ಸೇವೆಯಲ್ಲಿ ವಿಲೀನಗೊಳಿಸ ಬೇಕು.
ಅತಿಥಿ ಉಪನ್ಯಾಸಕರ ಸೇವೆಯನ್ನು ಖಾಯಂಗೊಳಿಸುವ ಸಂಬಂಧ ಪ್ರಸ್ತುತ ರಾಜ್ಯಸರ್ಕಾರ ಚುನಾವಣಾ ಪ್ರನಾಳಿಕೆಯಲ್ಲಿ ಸೇರಿಸಿರುವು ದನ್ನು ಅತಿಥಿ ಉಪನ್ಯಾಸಕರ ಪರವಾಗಿ ರಾಜ್ಯ ಸಮನ್ವಯ ಸಮಿತಿ ಅಭಿನಂದನೆ ಸಲ್ಲಿಸುತ್ತಿದ್ದು, ಅತಿಥಿ ಉಪನ್ಯಾಸಕರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಡಾ. ಸೋಮಶೇಖರ್ ಶಿಮೊಗ್ಗಿ ಹೆಚ್. ಶಂಕರ್ ನಾಯ್ಕ, ರಾಜೇಶ್‌ಕು ಮಾರ್ ಕೆ. ದಾವಣಗೆರೆ, ಹಳದಪ್ಪ, ಡಾ.ಪ್ರಶಾಂತಶರ್ಮ, ವಿನಾಯಕ, ಗಾಯತ್ರಮ್ಮ ಜಿ.ಸಿ, ಪು?ಲತಾ, ಜಿ.ಆರ್.ಝಾನ್ಸಿ, ರಂಗನಾಥನಾಯ್ಕ, ಶಕೀಲ್, ಡಾ.ಧನಂಜಯ ಮೂರ್ತಿ, ಕರಿಬ ಸಪ್ಪ, ನವೀನ್ ಇನ್ನಿತರರಿದ್ದರು.