ತಾಜಾ ಸುದ್ದಿ

ಮೋದಿ ಅವರ ನಾಯಕತ್ವದಲ್ಲಿ ೨೦೪೭ಕ್ಕೆ ವಿಕಸಿತ ಭಾರತ ನಿರ್ಮಾಣ ಗ್ಯಾರಂಟಿ…

Share Below Link

ಭದ್ರಾವತಿ : ದೇಶದ ಪ್ರಧಾನ ಸೇವಕ ಎಂದು ತನ್ನನ್ನು ತಾನು ಕರೆದು ಕೊಂಡ ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತವು ಸುಭದ್ರವಾಗಿದೆ. ಆ ಮೂಲಕ ಮೋದಿ ಕೇವಲ ಭಾರತದ ನಾಯಕರಲ್ಲ ನಿಜವಾದ ಅರ್ಥದಲ್ಲಿ ವಿಶ್ವ ನಾಯಕ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ತಿಳಿಸಿದರು.


ಮೋದಿಯವರ ೭೫ನೇ ಹುಟ್ಟ ಹಬ್ಬದ ನಿಮಿತ್ತ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಪ್ರಭುದ್ದರ ಗೋಷ್ಠಿಯಲ್ಲಿ ಪಾಲ್ಗೊಂಡು ನವ ಭಾರತದ ಆರ್ಥಿಕ ಸುಧಾರಣೆಗಳು ಎಂಬ ವಿಷಯ ಕುರಿತು ಸಭೆ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಜನ್ಮ ದಿನಾಚರಣೆಯನ್ನು ಸಂಭ್ರಮಾಚರಣೆ ಎಂದು ಮಾಡದೆ ಸಮಾಜ ಸೇವಾ ಕಾರ್ಯ ಚಟುವಟಿಕೆಗಳ ಮೂಲಕ ಆಚರಣೆ ಮಾಡಬೇಕು ಎಂದು ಹೇಳುವ ನಿಜ ಅರ್ಥದಲ್ಲಿ ಆದರ್ಶ ನಾಯಕ ರಾದರು. ಆಮದು ಕಡಿಮೆ ಇದ್ದು ರಫ್ತು ಹೆಚ್ಚಿದ್ದರೆ ಆರ್ಥಿಕ ಬಲ ಬರುತ್ತದೆ. ಆ ಕಾರಣ ಸ್ವಾಭಿಮಾನ ಭಾರತ ನಿರ್ಮಾಣಕ್ಕಾಗಿ ಆತ್ಮ ನಿರ್ಭರ ಭಾರತ, ಮೇಕ್ ಇನ್ ಇಂಡಿಯಾ ಯೋಜನೆಗಳ ಮೂಲಕ ದೇಶದ ಆರ್ಥಿಕತೆಗೆ ಹೊಸ ರೂಪ ನೀಡಿದರು. ಕಳೆದ ಒಂದು ದಶಕದ ಹಿಂದೆ ದೇಶ ದಿವಾಳಿ ಆಗುವ ಪರಿಸ್ಥಿತಿಯಲ್ಲಿತ್ತು. ಆದರೆ ಇಂದು ವಿಶ್ವದ ಬಲಿಷ್ಟ ರಾಷ್ಟ್ರವಾಗಿದೆ. ಜಗತಿಕ ಮಟ್ಟದಲ್ಲಿ ಸ್ಪರ್ಧೆ ಒಡ್ಡುವ ಸವಾಲು ಹಾಕುವ ಪರಿಸ್ಥಿತಿಯಲ್ಲಿದೆ. ಇದರ ಜೊತೆಗೆ ದೇಶದ ೨೫ ಕೋಟಿ ನಾಗರೀಕರು ಬಡತನದ ರೇಖೆಯಿಂದ ಮೇಲೆ ಬಂದಿzರೆ ಎಂದರು.


ರಾಜ್ಯದ ಅಭಿವೃಧ್ಧಿಗೆ ಹಿಂದಿನ ಸರ್ಕಾರದಲ್ಲಿ ಕೇವಲ ೫೩ ಸಾವಿರ ಕೋಟಿ ರೂಗಳ ಅನುದಾನ ನೀಡಿದ್ದರೆ, ಬಿಜೆಪಿ ಅವಧಿಯಲ್ಲಿ ೫.೪೫ ಸಾವಿರ ಕೋಟಿ ರೂ ನೀಡಿದೆ. ವಿವಿಧ ಯೋಜನೆಗಳಿಗೆ ೧.೪೫ ಲಕ್ಷ ಕೋಟಿ ನೀಡಿದ್ದರೆ, ಈಗ ೫.೪೫ ಲಕ್ಷ ಕೋಟಿ ನೀಡಿದೆ ಎಂದರು. ಇಷ್ಟೇ ನೀಡಿದ್ದರೂ ಕೇಂದ್ರದಿಂದ ಯಾವುದೆ ರೀತಿಯ ಅನುದಾನ ಬಂದಿಲ್ಲ ಎಂದು ಆರೋಪ ಮಾಡಲಾಗುತ್ತಿದೆ. ಇದು ಸರಿಯಲ್ಲ ಕೇವಲ ರಾಜಕೀಯಕ್ಕೋಸ್ಕರ ಆರೋಪ ಮಾಡುವುದು ಸರಿಯಲ್ಲ ಎಂದರು.
ಇಂತಹ ಅಭಿವೃಧ್ಧಿ ಕಾರ್ಯ ಹಾಗು ಯೋಜನೆಗಳ ಮೂಲಕ ಎ ಕ್ಷೇತ್ರಗಳಲ್ಲಿ ಆಗಿರುವ ಬದಲಾವಣೆಯಿಂದ ಭಾರತವು ೨೦೪೭ಕ್ಕೆ ವಿಕಸಿತ ಭಾರತ ನಿರ್ಮಾಣ ಆಗುವುದರಲ್ಲಿ ಯಾವುದೆ ಅನುಮಾನ ಇಲ್ಲ ಎಂದರು.
ಬಿಜೆಪಿ ಜಿ ಅಧ್ಯಕ್ಷ ಎನ್.ಎ. ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಕೆ.ಹೆಚ್.ತೀರ್ಥಯ್ಯ, ಜಿ.ಧರ್ಮ ಪ್ರಸಾದ್. ನ್ಯಾಯವಾದಿ ಕೆ.ಎನ್. ಶ್ರೀಹರ್ಷ ವೇದಿಕೆಯಲ್ಲಿ ಉಪಸ್ಥಿತರಿದ್ದರು.