ಇತರೆಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಗ್ಯಾರೆಂಟಿ ಚಿಂತೆ ನಿಮಗೆ ಬೇಡ; ನೀವು ಮೋದಿ ಜಪ ಮಾಡಿ…

Share Below Link

ಶಿವಮೊಗ್ಗ: ಬಿಜೆಪಿಯವರು ಗ್ಯಾರಂಟಿ ಚಿಂತನೆಗಳನ್ನು ಬಿಟ್ಟು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಜಪ ಮಾಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಟ್ಯಾಂಗ್ ನೀಡಿದರು.
ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳಿಂದ ರಾಜ್ಯ ಸರ್ಕಾರ ದಿವಾಳಿಯಾಗುತ್ತದೆ ಎಂದು ಬಿಜೆಪಿ ಯವರು ಬೊಬ್ಬೆ ಹೊಡೆಯುತ್ತಾ ಜನತೆಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಇವರಿಗಿನ್ನೂ ಸೋಲನ್ನು ಅರಗಿಸಿಕೊಳ್ಳುವ ಅಥವಾ ಅದನ್ನು ಗೌರವಯುತವಾಗಿ ಒಪ್ಪಿಕೊಳ್ಳುವ ಶಕ್ತಿ ಬಂದೇ ಇಲ್ಲ ಎಂದ ಅವರು, ಯಾವುದೇ ಸರ್ಕಾರ ದಿವಾಳಿಯಾಗುವುದು ತಮ್ಮದೆಲ್ಲವ ಬಿಟ್ಟು ಒಂದಿಬ್ಬರ ಮೇಲೆ ಅವಲಂಬಿತವಾದಾಗ ಮಾತ್ರ ಎಂದು ಬಿಜೆಪಿ ನಾಯಕರನ್ನು ಕಿಚಾಯಿಸಿದರು.


ಸಂವಿಧಾನದಲ್ಲಿ ನಂಬಿಕೆ ಇಟ್ಟಿರುವ ಕಾಂಗ್ರೆಸ್ ಸರ್ಕಾರ ಒಟ್ಟಾಗಿ ಕೆಲಸ ಮಾಡುತ್ತಿದೆ ಮತ್ತು ಪ್ರತಿಯೊಂದು ವಿಷಯದಲ್ಲೂ ಒಟ್ಟಾಗಿ ಚಿಂತನೆ ಮಾಡುವ ಮೂಲಕ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿದೆ. ಚುನಾವಣಾ ಪೂರ್ವದಲ್ಲಿ ಘೋಷಿಸಿದ ಗ್ಯಾರಂಟಿಗಳನ್ನು ನಾವು ನೀಡೇ ನೀಡುತ್ತೇವೆ. ಈ ಕುರಿತು ಯಾವುದೇ ಚಿಂತೆ ಬಿಜೆಪಿಯವರಿಗೆ ಬೇಡ, ಅವರು ಸದ್ಯಕ್ಕೆ ಮೋದಿ ಚಿಂತನೆ ಮಾಡುತ್ತಾ ಮೊದಿ ಜಪ ಮಾಡಲಿ ಎಂದು ವ್ಯಂಗ್ಯವಾಡಿದರು.
ನಮಗೆ ಬಹುಮತ ಇಲ್ಲದಿದ್ದರೆ ಇಷ್ಟೊತ್ತಿಗೆ ಅವರು ಬಾಲ ಬಿಚ್ಚುತ್ತಿ ದ್ದರು. ಈಗ ಅದು ಸಾಧ್ಯವಿಲ್ಲ ವಾಗಿದೆ. ಎಲ್ಲವನ್ನೂ ಬಿಟ್ಟು ಅಕ್ಕಿ ರಾಜಕೀಯ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೆ ತಾಯ್ತನ ಇರಬೇಕು. ಯಾವುದೇ ರಾಜ್ಯಗಳ ಯೋಜನೆಗಳನ್ನು ಜರಿಗೊಳಿಸಲು ಸಹಕರಿಸಬೇಕು. ಅದು ಬಿಟ್ಟು ಅಕ್ಕಿ ನಿಲ್ಲಿಸಿದೆ. ಕನ್ನಡಿಗರ ತುತ್ತು ಅನ್ನವನ್ನು ಕಸಿಯುವ ಕೆಲಸ ಮಾಡುತ್ತಿದೆ. ರಾಜ್ಯದಿಂದ ಮೂರೂವರೆ ಲಕ್ಷ ಕೋಟಿ ಜಿಎಸ್‌ಟಿ ಹೋಗುತ್ತಿದ್ದರೂ ಕೂಡ ನಮಗೆ ನೀಡುತ್ತಿರುವುದು ಕೆಲವೇ ಕೋಟಿಗಳು ಮಾತ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಪಠ್ಯ ಪುಸ್ತಕಗಳಲ್ಲಿ ಬಿಜೆಪಿಯ ಮಾನಸಿಕತೆಯನ್ನು ಅಳವಡಿಸಲಾಗಿತ್ತು. ಪುಟ್ಟ ಮಕ್ಕಳ ಮನಸ್ಸಲ್ಲಿ ಏನೇನೋ ಕಲಿಸಲಾಗುತ್ತಿತ್ತು. ಇದರಿಂದ ಮಕ್ಕಳು ಎಲ್ಲಿಗೆ ತಲುಪುತ್ತಾರೆ ಎಂದು ಯೋಚಿಸುವಂತಾಗಿತ್ತು. ನಮ್ಮ ಸರ್ಕಾರ ಅದನ್ನು ಪರಿಷ್ಕರಣೆ ಮಾಡಿ ಸರಿಪಡಿಸುತ್ತದೆ ಎಂದರು.
ನಮ್ಮ ತಂದೆ ಮಾಜಿ ಸಿಎಂ ಎಸ್. ಬಂಗಾರಪ್ಪನವರು ನನಗೆ ರಾಜಕೀಯದ ಒಳ್ಳೆಯ ಪಾಠವನ್ನು ಮಾತ್ರ ಕಲಿಸಿದ್ದಾರೆ. ಪಕ್ಷದ ಕಾರ್ಯಕರ್ತರು ನನ್ನನ್ನು ಬೆಳೆಸಿದ್ದಾರೆ. ನನ್ನ ಮೇಲೆ ವಿಶ್ವಾಸವಿಟ್ಟಿದ್ದಾರೆ. ಕಾಂಗ್ರೆಸ್ ವಿವಿಧ ನನಗೆ ಹುದ್ದೆಗಳನ್ನು ನೀಡಿದೆ. ಪ್ರಣಾಳಿಕೆ ಸಮಿತಿಯ ಉಪಾಧ್ಯಕ್ಷನನ್ನಾಗಿ ಮಾಡಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಯೋಜನೆಗಳನ್ನು ಸಿದ್ದಪಡಿಸಲು ಇದು ಸಹಾಯಕವಾಗುತ್ತದೆ ಎಂದರು.
ಮುಂದಿನ ದಿನಳಗಳಲ್ಲಿ ಜಿಪಂ, ತಾಪಂ ಚುನಾವಣೆ ಬರಲಿದೆ. ಕಾಂಗ್ರೆಸ್ ಈಗಿನಿಂದಲೇ ಸಂಘಟನೆಯ ಮೂಲಕ ಸಿದ್ಧವಾಗ ಬೇಕಾಗಿದೆ. ಇಡೀ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳು ಕಾಂಗ್ರೆಸ್ ಪಾಲಾಗಬೇಕು. ಅದಕ್ಕಾಗಿ ನೀವೆಲ್ಲರೂ ಕಂಕಣ ಬದ್ಧರಾಗ ಬೇಕು. ಸರ್ಕಾರದ ಯೋಜನೆ ಗಳನ್ನು ತಲುಪಿ ಸಲು ಸಹಾಯ ಮಾಡಿ ಎಂದರು.
ಜಿಪಂ ಕಚೇರಿಯಲ್ಲಿ ಆರಂಭವಾಗುತ್ತಿರುವ ಉಸ್ತುವಾರಿ ಸಚಿವರ ಕಚೇರಿ ನಿಮ್ಮ ಕಚೇರಿ ಅದನ್ನು ಬಳಕೆ ಮಾಡಿಕೊಳ್ಳಬೇಕು. ಜನರಿಗೆ ಸೌಲಭ್ಯ ಕಲ್ಪಿಸುವ ಕೆಲಸವೂ ಆಗಬೇಕು. ಜನರ ಪ್ರತಿಯೊಂದು ಸಮಸ್ಯೆಗಳಿಗೆ ನಾನು ಸದಾ ಸ್ಪಂದಿಸುತ್ತೇನೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಎಸ್. ಸುಂದರೇಶ್, ಮುಖಂಡರಾದ ಆರ್. ಪ್ರಸನ್ನಕುಮಾರ್, ಅನಿತಾ ಕುಮಾರಿ, ಜಿ.ಡಿ. ಮಂಜುನಾಥ್, ಹೆಚ್.ಸಿ. ಯೋಗೀಶ್, ಎಸ್.ಕೆ. ಮರಿಯಪ್ಪ, ವಿಜಯಕುಮಾರ್ ಧನಿ, ಶಂಕರಘಟ್ಟ ರಮೇಶ್, ಚಂದ್ರಭೂಪಾಲ್, ಗಿರೀಶ್, ಎಸ್.ಪಿ. ಶೇಷಾದ್ರಿ, ಯಮುನಾ ರಂಗೇಗೌಡ, ದೇವೇಂದ್ರಪ್ಪ, ರವಿಕುಮಾರ್, ಇಸ್ಮಾಯಿಲ್ ಖಾನ್, ಕಲೀಂ ಪಾಶಾ, ನಗರದ ಮಹದೇವಪ್ಪ, ಸ್ಟೆಲ್ಲಾ ಮಾರ್ಟಿನ್, ಬಲ್ಕಿಷ್ ಭಾನು ಇನ್ನಿತರರು ಉಪಸ್ಥಿತರಿದ್ದರು.