ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಜಿಲ್ಲೆಯ ಪತ್ರಿಕೋದ್ಯಮದಲ್ಲಿ ವಿಶೇಷ ಛಾಪು ಮೂಡಿಸಿದ ಜಿಎಸ್‌ಎನ್…

Share Below Link

ಅದು ೧೯೯೬ರ ಕಾಲ. ನಾನು ಕೆಲಸಕ್ಕಾಗಿ ಅಲೆದಾಡುತ್ತಿz. ಅನಿರೀಕ್ಷಿತ ವಾಗಿ ನನ್ನ ಗೆಳೆಯನೋರ್ವ ಶಿವಮೊಗ್ಗ ದಿಂದ ಪ್ರಕಟಗೊಳ್ಳುತ್ತಿದ್ದ ಜನವಾರ್ತೆ ಪತ್ರಿಕೆಯ ಸಂಪಾದಕರಿಗೆ ಪರಿಚಯ ಮಾಡಿಕೊಟ್ಟಿದ್ದ. ಪರಿಚಯವಾದ ಕೂಡಲೇ ನನಗೆ ಕೇಳಿದ ಒಂದೇ ಪ್ರಶ್ನೆ ಎಂದರೆ, ನಿನಗೆ ಪತ್ರಿಕೆಯಲ್ಲಿ ಕೆಲಸ ಮಾಡಲು ಇಷ್ಟವಿದೆಯೇ? ಇಲ್ಲಿ ಕೆಲವೊಂದು ಬಾರಿ ರಾತ್ರಿ ಪ್ರಿಂಟಿಂಗ್ ಕೆಲಸವಿರುತ್ತದೆ. ನಿನ್ನಿಂದ ಆಗುತ್ತದೆಯೇ? ಎಂದು ಕೇಳಿದ್ದರು. ನಾನೇನೂ ಮಾತನಾಡದೇ ಮನವೇ ಉತ್ತರವೆಂಬಂತೆ ತಲೆಯಾಡಿಸಿz.
ಸರಿ, ಮಾರನೇ ದಿನದಿಂದಲೇ ಕೆಲಸಕ್ಕೆ ಬಾ ಎಂದಾಗ ನನಗೆ ಸ್ವರ್ಗಕ್ಕೆ ಮೂರೇ ಗೇಣು. ಅಷ್ಟರ ನನ್ನ ಗೆಳೆಯ ಈ ಸಂಪಾದಕರು ತುಂಬಾ ಖಡಕ್ ಎಂದು ಬೇರೆ ಹೆದರಿಸಿದ್ದ. ಕೆಲಸಕ್ಕೆ ಸೇರಿ ಸುಮಾರು ೧೫ ದಿನಗಳಾಗಿದ್ದವು. ಅಂದರೆ ಆ ತಿಂಗಳ ೧೫ನೇ ತಾರೀಖಿನಿಂದ ನಾನು ಕೆಲಸಕ್ಕೆ ಹೋಗಿz. ಮಿಕ್ಕವರಿಗೆ ೫ನೇ ತಾರೀಖಿನೊಳಗೆ ಸಂಬಳ ವಾಗುತ್ತಿತ್ತು. ಎಲ್ಲರಿಗೂ ಸಂಬಳ ಕೊಟ್ಟ ಮೇಲೆ ನನ್ನನ್ನು ಕರೆದು, ಏ ಹುಡುಗ, ನೀನು ಎಷ್ಟನೇ ತಾರೀಖಿ ನಿಂದ ಕೆಲಸಕ್ಕೆ ಬಂದೆ ಎಂದು ಕೇಳಿದರು. ನಾನು, ಸಾರ್ ನಾನು ಬಂದು ೧೫ ದಿನಗಳಾಗಿವೆ ಎಂದು ಉತ್ತರಿಸಿದೆ. ಆ ನಂತರ ನನಗೆ ಗೊತ್ತಾಗಿದ್ದು, ಈ ಹಿಂದೆ ಕೆಲಸಕ್ಕೆ ಬಂದ ಕೆಲವರು ಅವರ ಹತ್ತಿರ ಸುಳ್ಳು ಹೇಳಿ ೧೫ ದಿನಗಳ ಮುಂಚೆಯೇ ಸಂಬಳ ತೆಗೆದುಕೊಂಡಿದ್ದರು ಎಂದು. ನನಗೆ ಪತ್ರಿಕೋದ್ಯಮದ ಆಳ-ಅಗಲಗಳನ್ನು ಇಂಚಿಂಚಾಗಿ ಹೇಳಿಕೊಟ್ಟ ಮಹಾನ್ ಗುರುಗಳಲ್ಲಿ ನಮ್ಮ ಹೆಮ್ಮೆಯ ಸಂಪಾದಕ ನಾಗರಾಜ್ ಪ್ರಮುಖ ಪಾತ್ರ ವಹಿಸುತ್ತಾರೆ.
ಶಿವಮೊಗ್ಗ ನಗರದ ಸವಳಂಗ ರಸ್ತೆ (ಶಿಕಾರಿಪುರ ರಸ್ತೆ)ಯಲ್ಲಿ ಸಾಗಿದರೆ, ಒಂದು ದೊಡ್ಡ ಹಳ್ಳದ ಪಕ್ಕದಲ್ಲಿ ಜನರ ಕಣ್ಣು ಕುಕ್ಕುವ ಕಪ್ಪು ಗಾಜಿನ ಭವ್ಯವಾದ ಜನವಾರ್ತೆ ಪತ್ರಿಕೆಯ ಕಾರ್ಯಾಲಯ ಕಾಣಿಸು ತ್ತದೆ. ಅದರ ನೆಲ ಮಹಡಿಯಲ್ಲಿ ಪೇಜ್ ಲೇಔಟ್ ಸೆಕ್ಷನ್, ಪ್ಲೇಟ್ ಮೇಕಿಂಗ್, ನ್ಯೂಸ್ ಪ್ರಿಂಟ್, ಪ್ರಿಂಟಿಂಗ್ ಸೆಕ್ಷನ್.
ಮೊದಲ ಮಹಡಿಯ ಎಡಭಾಗಕ್ಕೆ ಎಸಿ ಸಹಿತ ಭವ್ಯವಾದ ದೊಡ್ಡ ಸಂಪಾದಕರ ಕಛೇರಿ. ಬಲಭಾಗಕ್ಕೆ ಸ್ವಾಗತ ಕೋರುವ ಇಬ್ಬರು ಮಹಿಳಾ ಸಿಬ್ಬಂದಿ, ಅಲ್ಲಿಂದ ನೇರವಾಗಿ ಹೋದರೆ, ಡಿಟಿಪಿ ರೂಂ ಹಾಗೂ ಪತ್ರಿಕಾ ಕಛೇರಿಯ ಮೇಲ್ಭಾಗದಲ್ಲಿ ಸುಮಾರು ಆರು ಮಂದಿ ವರದಿಗಾರರು ಕುಳಿತು ಕೊಂಡು ಸುದ್ದಿ ಬರೆಯುವ ಡೆಸ್ಕು ಹಾಗೂ ಬರೆಯಲಿಕ್ಕೆ ಬೇಕಾದ ಸಾಮಗ್ರಿಗಳು.
ನನ್ನ ಮಟ್ಟಿಗೆ ಒಂದು ಪತ್ರಿಕೆಯ ಸಂಪಾದಕ ಕೆಲಸದ ವಿಚಾರ ಬಂದಾಗ ಯಾವ ರೀತಿ ಖಡಕ್‌ಕ್ಕಾಗಿ, ತನ್ನ ಪತ್ರಿಕೆಯ ಸಿಬ್ಬಂದಿಗೆ ಕಷ್ಟ ಬಂದಾಗ ಅವನ ಕಷ್ಟ ನನ್ನ ಕಷ್ಟ ಎಂದು ತಿಳಿದು ಯಾವುದೇ ಫಲಾಪೇಕ್ಷೆಯಿಲ್ಲದೆ ಸಹಾಯ ಹಸ್ತ ತೋರುವ ವ್ಯಕ್ತಿತ್ವವನ್ನು ನಾನು ಅವರಲ್ಲಿ ಕಂಡುಕೊಂಡಿದ್ದೇನೆ. ಸುಮಾರು ೫ ವರ್ಷಗಳ ಕಾಲ ಜಿ.ಎಸ್. ನಾಗರಾಜ್‌ರವರ ಬಳಿ ಕೆಲಸ ಮಾಡಿದ ಅನುಭವ ನನಗೆ ಸಂತೋಷ ತಂದಿದೆ.
ಜಿ.ಎಸ್. ನಾಗರಾಜ್‌ರವರದ್ದು ಸಮಯ ಎಂದರೆ ಸಮಯ. ಬೆಳಿಗ್ಗೆ ೧೦.೩೦ ಗಂಟೆಗೆ ಸರಿಯಾಗಿ ತಮ್ಮ ಮಾರುತಿ ೮೦೦ ಕಾರಿನಲ್ಲಿ ಸವಳಂಗ ರಸ್ತೆಯ ದೊಡ್ಡ ಗೇಟಿನ ಬಳಿ ಬರುತ್ತಿದ್ದರೆ, ಎ ಸಿಬ್ಬಂದಿಗಳೂ, ವರದಿಗಾರರೂ ಸೇರಿದಂತೆ ಪತ್ರಿಕಾ ಕಛೇರಿಯಲ್ಲಿ ಹಾಜರಿರಬೇಕಿತ್ತು. ಇಲ್ಲದಿದ್ದರೆ ಅವರಿಗೆ ಮಹಾಪೂಜೆ..! ಕಛೇರಿಗೆ ಬಂದು ಎಲ್ಲರನ್ನು ಮಾತನಾಡಿಸಿ, ಯಾರ್‍ಯಾರಿಗೆ ಈ ದಿನ ಯಾವ್ಯಾವ ಕೆಲಸ ಮಾಡಬೇಕೆಂದು ತಿಳಿಸಿ, ತಾವು ಪಿಟಿಐ ನ್ಯೂಸ್ ನೋಡುತ್ತಾ ಕುಳಿತಿರುತ್ತಿದ್ದರು. ಆ ಪಿಟಿಐ ನ್ಯೂಸ್ ಡಾಟ್‌ಮೆಟ್ರಿಕ್‌ನಲ್ಲಿ ಪ್ರಿಂಟ್ ಬರುತ್ತಿತ್ತು. ಅದೂ ದೂರದ ದೆಹಲಿಯಿಂದ. ಆ ಕಾಲಕ್ಕೆ ಅವರು ಹೊಸ ಪೇಜರ್ ತೆಗೆದು ಕೊಂಡಿದ್ದರು. ಸಂಜೆ ಆದರೆ, ಎಲ್ಲರಿಗೂ ಆಗಾಗ ತಿಂಡಿ ತರಿಸುತ್ತಿ ದ್ದರು. ಅವರನ್ನು ನೋಡುವುದೇ ಚಂದ ಕಣ್ರೀ. ಮುzದ ಮುಖ, ಗಡ್ಡ, ಬಲಗಡೆ ತಿರುವಿದ ಕ್ರಾಫ್, ಕೊರಳಲ್ಲಿ ಹೆಬ್ಬೆರಳಿನ ಗಾತ್ರದ ದಪ್ಪ ಬಂಗಾರದ ಚೈನು ಮತ್ತು ಅವರ ಎದೆಗೆ ಆನಿಸಿದಂತೆ ಸಣ್ಣ ಶ್ರೀ ಗಣಪತಿ ಲಾಕೆಟ್, ಎಡಗೈಗೆ ಬಂಗಾರದ ವಾಚು, ಬಲಗಡೆ ಕೈಯಲ್ಲಿ ಹಗ್ಗದಂತಹ ಬ್ರೇಸ್‌ಲೆಟ್…
ಅಬ್ಬಬ್ಬಾ ಅವರು ಬರುತ್ತಿದ್ದರೆ, ಸಾಕ್ಷಾತ್ ಮಹಾರಾಜನೇ ಬರುತ್ತಿzನೆ ಎಂದೆನಿಸದೇ ಇರದು. ನಾನು ಅವರನ್ನು ಮಾತನಾಡಿಸ ಲೆಂದೇ ಬಹಳ ಸಲ ಅವರ ಛೇಂಬರ್‌ಗೆ ಹೋಗುತ್ತಿz. ಆದರೆ, ಅವರನ್ನು ನೋಡಿ ಹೆದರಿ ವಾಪಾಸು ಬರುತ್ತಿz.
ಜಿ.ಎಸ್. ನಾಗರಾಜ್‌ರವರ ಧರ್ಮಪತ್ನಿ ಶ್ರೀಮತಿ ಪ್ರಭಾವತಿ ನಾಗರಾಜ್ ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ನಾವು ಸಿಬ್ಬಂದಿಗಳು, ಅವರು ಒಂದೇ ಮನೆಯವರಂತೆ ಇzವು. ಪತ್ರಿಕಾ ಕಾರ್ಯಾಲಯದ ಮುಂದೆ ಮಧ್ಯಕ್ಕೆ ಎರಡು ಕುರ್ಚಿಗಳನ್ನು ಹಾಕಿಕೊಂಡು ಅವರಿಬ್ಬರು ಕುಳಿತು ಕೊಂಡರೆ ನಮಗೆ ಸಾಕ್ಷಾತ್ ರಾಮಸೀತೆ ನೋಡಿದ ಹಾಗಾಗಿತ್ತು. ನಮ್ಮನ್ನು ತಮ್ಮ ಮಕ್ಕಳಂತೆ ಭಾವಿಸಿ ತಿಂಡಿ ಬಡಿಸುತ್ತಿದ್ದರು. ಒಮ್ಮೆ ರಾತ್ರಿ ಪಾಳಿ ಕೆಲಸ ಮಾಡಬೇಕಾಗಿತ್ತು. ಸರಿ ಎಲ್ಲರಿಗೂ ಮಾಂಸಹಾರಿ ಊಟ ವನ್ನು ಸಂಪಾದಕರು ತರಿಸಿದ್ದರು. ನನಗೋ ಅನುಸಂಕಟ. ನಾನು ಧೈರ್ಯ ಮಾಡಿ ಸಾರ್, ನಾನು ಮಾಂಸಾಹಾರ ತಿನ್ನುವುದಿಲ್ಲ. ನಾನು ಮನೆ ಹೋಗಿ ಊಟ ಮಾಡಿ ಬರುತ್ತೇನೆ ಎಂದಾಗ, ಅವರಿಗೆ ಸಿಟ್ಟು ಬಂದು ಹೊರಗಡೆ ಕೆಲಸಕ್ಕೆ ಅಂತ ಬಂದಾಗ ಸರಿದೂಗಿಸಿಕೊಳ್ಳಬೇಕು ಎಂದು ರೇಗಿದರು. ಕೊನೆಗೆ ಅವರ ಪತ್ನಿ, ನೋಡಿ ಪಾಪ ಆ ಹುಡುಗ ಬ್ರಾಹ್ಮಣ. ಅವನಿಗೆ ತೊಂದರೆ ಕೊಡುವುದು ಬೇಡ. ನೀನು ಮನೆಗೆ ಹೋಗಿ ಊಟ ಮಾಡಿಕೊಂಡು ಬಾ ಎಂದು ೫೦೦ ರೂ. ನನ್ನ ಕಿಸೆಗೆ ಇಟ್ಟರು. ಅವತ್ತಿಡೀ ನನಗೆ ಬಹಳ ಬೇಜಾರಿತ್ತು. ರಾತ್ರಿ ಕೆಲಸ ಮಾಡುವಾಗ ನನಗೆ ಬಾಸ್ ಹೇಳಿ ಕಳುಹಿಸಿದರು. ನನಗೆ ಹೆದರಿಕೆ. ಬಾ ಇಲ್ಲಿ ಅಂದರು. ಹೋದೆ, ನನಗೆ ನೀನು ಬ್ರಾಹ್ಮಣ ಅಂತ ಗೊತ್ತಿರಲಿಲ್ಲ. ನೀನು ಇನ್ನು ಮುಂದೆ ರಾತ್ರಿ ಪಾಳಿ ಕೆಲಸ ಮಾಡುವುದು ಬೇಡ. ಬೆಳಿಗ್ಗೆ ಮಾತ್ರ ಮಾಡು ಸಾಕು ಎಂದರು. ನನಗೋ ಖುಷಿ. ಥ್ಯಾಂಕ್ಯೂ ಸಾರ್ ಅಂತ ಅವತ್ತಿನ ಕೆಲಸ ಮುಗಿಸಿ ಬಂದೆ.
ಮಾರನೇ ದಿನ ಎಲ್ಲರೂ ರಾತ್ರಿ ಪಾಳಿ ಕೆಲಸ ಮಾಡುತ್ತಿದ್ದರೆ ನಾನು ಮನೆಯಲ್ಲಿ ಇz. ಅವಾಗ ಲ್ಯಾಂಡ್ ಫೋನ್ ಇತ್ತು. ನನ್ನ ಸಹದ್ಯೋಗಿಗಳು ಫೋನ್ ಮಾಡಿ, ಏಕೆ ರಾತ್ರಿ ಪಾಳಿ ಕೆಲಸಕ್ಕೆ ಬರುವುದಿಲ್ಲವೇ ಎಂದು ಕೇಳಿದಾಗ, ನಾನು ನಡೆದ ವಿಚಾರವನ್ನು ಹೇಳಿದೆ. ನೀನು ಬಿಡು ಮಹಾರಾಯ, ಅವರನ್ನೇ ಮರುಳು ಮಾಡಿದೀಯ ಎಂದು ನಗೆಯಾಡಿದರು.
ನಾವೆಲ್ಲರೂ ಜಿ.ಎಸ್. ನಾಗರಾಜ್ ರವರನ್ನು ಬಾಸ್ ಅಂತಲೇ ಕರೆಯುತ್ತಿzವು. ಮಧ್ಯಾಹ್ನ ಎಲ್ಲ ಸಿಬ್ಬಂದಿಗಳಿಗೂ ಅಲ್ಲಿಯೇ ಊಟದ ವ್ಯವಸ್ಥೆ ಮಾಡಿದ್ದರು. ತಾವು ಮಾತ್ರ ಪತ್ರಿಕೆ ಹೊರಬಂದು ಮಾರ್ಕೆಟ್‌ಗೆ ಹೋದ ಮೇಲೆಯೇ ಊಟ. ಕೆಲವು ಬಾರಿ ನಾನೇ ಅವರಿಗೆ ಹೋಟೆಲ್‌ನಿಂದ ರೊಟ್ಟಿ, ಚಪಾತಿ, ಪಲ್ಯ ತಂದು ಕೊಡುತ್ತಿz. ಆಗ, ನಿಂದಾಯ್ತಾ ಊಟ ಎನ್ನುತ್ತಿದ್ದರು. ಆಗಿದೆ ಸಾರ್ ಎನ್ನುತ್ತಿz.
ನೋಡುವುದಕ್ಕೆ ಖಡಕ್ ಆಗಿ ಕಂಡರೂ, ತುಂಬಾ ಹೆಂಗರುಳಿನ ಮನುಷ್ಯ ನಮ್ಮ ಬಾಸ್. ಸಿಟ್ಟು ಬಂದರೆ ಮಾತ್ರ ಥೇಟ್ ವಜ್ರಮುನಿ. ಅದನ್ನು ನಾನು ಮೊದಲ ಸಲ ನಮ್ಮ ಸಿಬ್ಬಂದಿ ಯೋರ್ವನಿಗೆ ಜಢಿಸುತ್ತಿzಗ ಒಂದು ವಾರ ಜ್ವರ ಬಂದು ಮಲಗಿz. ಹಾಗಿತ್ತು ಅವರ ವರಸೆ. ಇಡೀ ಪತ್ರಿಕಾ ಕಾರ್ಯಾಲಯವೇ ಬರಸಿಡಿಲು ಆಗ.
ಆಗ, ಪ್ರತಿದಿನ ಜಿಯಿಂದ ಹೊರಗಡೆ ಹೋಗುವ ಊರು ಗಳಿಗೆ ಮಧ್ಯಾಹ್ನ ೨ ಗಂಟೆಯೊಳಗೆ ಹಾಗೂ ನಗರಕ್ಕೆ ಮಧ್ಯಾಹ್ನ ೪ ಗಂಟೆ ಯೊಳಗೆ ಪತ್ರಿಕೆ ಪ್ರಿಂಟ್ ಮಾಡಲಾ ಗುತ್ತಿತ್ತು. ಪ್ರತಿದಿನ ಮಧ್ಯಾಹ್ನ ೩ ಗಂಟೆಯಿಂದ ೪ ಗಂಟೆ ಬಂತೆಂದರೆ, ಇಡೀ ಜನವಾರ್ತೆ ಕಾರ್ಯಾಲಯ ಅಲ-ಕಲ. ಪಿನ್‌ಡ್ರಾಪ್ ಸೈಲೆನ್ಸ್. ಆ ರೀತಿ ಕಾಪಾಡಿದ್ದರು ಪತ್ರಿಕಾ ಕಛೇರಿಯನ್ನು ಅವರು.
೩ ಗಂಟೆಯಿಂದ ೩.೩೦ರವರೆಗೆ ಕೇವಲ ಡಿಟಿಪಿ ಮಿಷಿನ್‌ಗಳದ್ದೇ ದರ್ಬಾರು. ಅವರು ಇಂಗ್ಲೀಷಿನಿಂದ ಕನ್ನಡಕ್ಕೆ ತುರ್ಜುಮೆ ಮಾಡುತ್ತಿದ್ದರೆ, ಅವರ ಮಾತುಗಳು ನಮ್ಮ ಕಿವಿಗಳಿಗೆ ಆನಂದವನ್ನು ನೀಡುತ್ತಿದ್ದವು. ಅಲ್ಲಿಂದ ಸೀದಾ ನೆಲಮಹಡಿಗೆ ಬರುತ್ತಿದ್ದರು. ಆಗ ಅವರ ಮುಖ ದಲ್ಲಿ ಧಾವಂತ. ನಮ್ಮ ಪತ್ರಿಕೆಯ ಅಂದಿನ ಸ್ಲೋಗನ್ ಏನು ಗೊತ್ತೇ? ಇಂದಿನ ಸುದ್ದಿಗೆ ಇಂದೇ ಓದಿ. ಜನವಾರ್ತೆ. ಎಲ್ಲಿ ಐದು ನಿಮಿಷ ತಡವಾದರೆ ಬೇರೆ ಪತ್ರಿಕೆಯವರು ಪತ್ರಿಕೆಯನ್ನು ಹೊರತರುತ್ತಾರೆ ಎಂದು ಅವರಿಗೆ ಧಾವಂತ. ನಿಜ ಹೇಳಬೇಕೆಂದರೆ, ಅಂದು ಬೆರಳಣಿಕೆಯಷ್ಟು ಪತ್ರಿಕೆಗಳು ಮಾತ್ರ ಇದ್ದವು. ಅದರಲ್ಲೂ ಅಂದು ತುಂಬಾ ಲೀಡ್‌ನಲ್ಲಿ ಇದ್ದ ಪತ್ರಿಕೆಗೂ, ನಮ್ಮ ಪತ್ರಿಕೆಗೂ ಕೇವಲ ೨ ಸಾವಿರ ಪ್ರತಿಗಳ ಅಂತರ. ಅವರದ್ದು ಒಂದೇ ಹಾಳೆಯ ಎರಡು ಬದಿ ಪ್ರಿಂಟ್ ಆಗುತ್ತಿತ್ತು. ನಮ್ಮ ಪತ್ರಿಕೆ ೪ ಪುಟಗಳ ವರ್ಣರಂಜಿತ ಪತ್ರಿಕೆ. ಇಡೀ ಶಿವಮೊಗ್ಗ ಜಿಯಲ್ಲಿಯೇ ಇಲ್ಲದ ಗ್ರೀನ್ ಪಾಟ್ ಆಫ್‌ಸೆಟ್, ಬರೋಬ್ಬರಿ ನಾಲ್ಕು ಕಲರ್ ಪ್ರಿಂಟ್ ಮಾಡುವ ಡ್ರಮ್‌ಗಳು, ಒಂದೇ ಸಲಕ್ಕೆ ಪ್ರಿಂಟಿಂಗ್, ಫೋಲ್ಡಿಂಗ್, ಕಟಿಂಗ್, ಕೌಂಟಿಂಗ್ ಹಾಗೂ ಒಂದು ನೂರು ಪತ್ರಿಕೆ ಪ್ರಿಂಟ್ ಆದ ತಕ್ಷಣ ಸೂಚನೆ ಕೊಡುವ ಮಿಷಿನ್ ಇನ್ನೊಂದಿರಲಿಲ್ಲ. ಶಿವಮೊಗ್ಗ ಜಿಯ ಎ ಸ್ಥಳೀಯ ಹಾಗೂ ರಾಜ್ಯ ಮಟ್ಟದ ಪತ್ರಿಕೆಯವರು ಹೌಹಾರಿ ಹೋದರು. ಹಾಗಿತ್ತು ನಮ್ಮ ಬಾಸ್‌ನ ಮಹಿಮೆ.
ಪತ್ರಿಕೆ ಪ್ರಿಂಟ್ ಆದ ಕೂಡಲೇ ನಾಲ್ಕು ಆಟೋಗಳು ಸಿದ್ಧವಿರ ಬೇಕು. ಎಲ್ಲವೂ ಬಸ್ ಸ್ಟ್ಯಾಂಡ್‌ಗೆ ಹೋಗಿ ವಿವಿಧ ಊರುಗಳ ಬಸ್ಸಿಗೆ ಪಾರ್ಸಲ್ ಹಾಕಬೇಕಿತ್ತು. ಮತ್ತೆ ವಾಪಾಸು ಬಂದು ಪತ್ರಿಕೆಯನ್ನು ಎ ಸರ್ಕಾರಿ ಕಛೇರಿಗಳಿಗೆ ಉಚಿತವಾಗಿ ಹಂಚಬೇಕಿತ್ತು.
ಮಹಿಳಾ ಸಿಬ್ಬಂದಿಗಳಿಗೆ ನಮ್ಮ ಬಾಸ್ ವಿಶೇಷ ಗೌರವ ನೀಡುತ್ತಿದ್ದರು. ತೀರ್ಥಹಳ್ಳಿಯಿಂದ ಮಹಿಳಾ ಸಿಬ್ಬಂದಿಗಳು ಬರುತ್ತಿದ್ದರು. ಅವರಿಗೆ ಕೆಲವು ಸಲ ಕಛೇರಿಯಲ್ಲಿ ಲೇಟ್ ಆಗಿದ್ದರೆ, ತಮ್ಮ ಕಾರಿನ ಚಾಲಕನನ್ನು ಕರೆದು, ಅವರಿಗೆ ತೀರ್ಥಹಳ್ಳಿಗೆ ಬಿಟ್ಟು ಬಾ ಎನ್ನುತ್ತಿ ದ್ದರು. ಅವರಲ್ಲಿ ಕೆಲವರು ಈಗ ವಿವಿಧ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿzರೆ.
ನಮ್ಮ ಬಾಸ್ ಗರಡಿಯಲ್ಲಿ ಬೆಳೆದ ಹಲವರು ಇಂದು ಜಿ, ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಹಾಗೂ ತಮ್ಮದೇ ಆದ ಸ್ವಂತ ಪತ್ರಿಕೆ, ನ್ಯೂಸ್ ಛಾನಲ್ ಮಾಡಿಕೊಂಡ ವರಿzರೆ. ಅವರಲ್ಲಿ ಪ್ರಮುಖರೆಂದರೆ ಹೊಸನಾವಿಕ ದಿನಪತ್ರಿಕೆಯ ರಾಕೇಶ್ ಡಿಸೋಜ, ಸುದ್ದಿಸಾರದ ಷಡಕ್ಷರಪ್ಪ, ತುಂಗಾತರಂಗದ ಎಸ್.ಕೆ. ಗಜೇಂದ್ರ ಸ್ವಾಮಿ, ಕನ್ನಡ ಮೀಡಿಯಂ ೨೭/೭ ನ್ಯೂಸ್ ಛಾನಲ್ ಸಂಪಾದಕ ಹೊನ್ನಾಳಿ ಚಂದ್ರಶೇಖರ್, ಪತ್ರಕರ್ತರಾಗಿ ಮುರುಳೀಧರ್ ಹೆಚ್.ಸಿ., ವಿಜಯ ಕುಮಾರ್, ಆರುಂಡಿ ಶ್ರೀನಿವಾಸ ಮೂರ್ತಿ, ಎನ್.ಆರ್. ಗಿರೀಶ್, ಮಂಜುನಾಥ್, ಮೋಹನ ಸೇರಿದಂತೆ ಹಲವರು ಇಂದಿಗೂ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿzರೆ.
ಇಂತಹ ಅಜಾನುಬಾಹು ನಮ್ಮ ಬಾಸ್ ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುವಾಗ ದಾರಿ ಮಧ್ಯದಲ್ಲಿ ಅಪಘಾತಕ್ಕೀಡಾಗಿ ದೇಹದ ಒಂದು ಭಾಗದ ಮೂಲೆಗಳು ಜಖಂಗೊಂಡು, ಶಿವಮೊಗ್ಗದ ಅಶೋಕ ಸಂಜೀವಿನಿ, ನಾರಾಯಣ ಹೃದಯಾಲಯ ನಂತರ, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿದ್ದರು. ಆದರೂ, ಚಿಕಿತ್ಸೆ ಫಲಕಾರಿ ಯಾಗದೇ ೨೦೨೩ರ ಫೆಬ್ರವರಿಯಲ್ಲಿ ಕೊನೆಯುಸಿರೆಳೆದರು.
ಜಿ.ಎಸ್. ನಾಗರಾಜ್‌ರವರು ಪತ್ನಿ ಪ್ರಭಾವತಿ ನಾಗರಾಜ್, ಪುತ್ರಿಯರಾದ ಪ್ರಿಯಾಂಕ, ಪ್ರತೀಕ, ಪ್ರಕೃತಿ ಸೇರಿದಂತೆ ಅಪಾರ ಬಂಧು-ಮಿತ್ರರನ್ನು, ಅಸಂಖ್ಯಾತ ಓದುಗರನ್ನು ಅವರು ಅಗಲಿzರೆ.

Leave a Reply

Your email address will not be published. Required fields are marked *