ಬಿಸಿಲು ಮತ್ತು ಮಳೆ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಗಿಡಗಳನ್ನು ಬೆಳಿಸಿ
ನ್ಯಾಮತಿ: ತಾಪಮಾನ, ಪ್ರವಾಹ ಪರಿಸ್ಥಿತಿ ಉಂಟಾಗುತ್ತಿರುವುದರಿಂದ ಬಿಸಿಲು ಮತ್ತು ಮಳೆ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಿಡ ಬೆಳಸಬೇಕು ಎಂದು ಹೊನ್ನಾಳಿ ಕ್ಷೇತ್ರ ಶಿಕ್ಷಣಾಧಿಕಾರಿ ನಂಜರಾಜ್‌ಹೇಳಿದರು.
ಅವರು ನ್ಯಾಮತಿ ತಾಲೂಕಿನ ಜೀನಹಳ್ಳಿ ಮತ್ತು ಕತ್ತಿಗೆ ಕ್ರಾಸ್ ಬಳಿಯಿರುವ ಶ್ರೀ ಬಸವೇಶ್ವರ ಅಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಹೊನ್ನಾಳಿ – ನ್ಯಾಮತಿ ಘಟಕ , ಕಾರ್ಯ ನಿರತ ಪತ್ರಕರ್ತರ ಸಂಘದ ಹೊನ್ನಾಳಿ – ನ್ಯಾಮತಿ ಘಟಕ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಅಂಗ ವಾಗಿ ಸಸಿ ನೆಟ್ಟು ಮಾತನಾಡಿದರು.
ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೋ ಅದೇ ರೀತಿ ಗಿಡ ನೆಟ್ಟು ಸಸಿ ಸಂರಕ್ಷಿಸುವತ್ತ ಕಾಳಜಿ ವಹಿಸಬೇಕು. ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರು ಕೈ ಜೋಡಿಸಬೇಕು. ಸಾಮಾಜಿಕ ಜಲತಾಣದಲ್ಲಿ ಅನಗತ್ಯ ಪೊಸ್ಟ್ ಮಾಡುವ ಬದಲು ಗಿಡ ನೆಟ್ಟು ಅದರ ಫೋಟೊಗಳನ್ನು ಹೆಮ್ಮೆಯಿಂದ ಪೊಸ್ಟ್ ಮಾಡಿ ಪರಿಸರ ಜಗೃತಿ ಮೂಡಿಸಿ ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಹೊನ್ನಾಳಿ -ನ್ಯಾಮತಿ ಘಟಕ , ಪತ್ರಕರ್ತರ ಸಂಘದ ಹೊನ್ನಾಳಿ ಘಟಕದ ಅಧ್ಯಕ್ಷ ಯೋಗೀಶ್ ಕೋರಿ ಕುಳಘಟ್ಟೆ ಮಾತನಾಡಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಅವಳಿ ತಾಲೂಕಿನಲ್ಲಿ ಪರಿಸರ ಸಂರಕ್ಷಣೆಗೆ ೧ ಲಕ್ಷ ಹಣ ಸಾಲುಮರದ ತಿಮ್ಮಕ್ಕ ನವರ ಹೆಸರಿನಲ್ಲಿ ಕೊಡುವುದಾಗಿ ಘೋಷಣೆ ಮಾಡಿ , ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಹಸಿರೆ ಉಸಿರು, ಮನೆಗೊಂದು ಮರ ಊರಿಗೊಂದು ವನ, ಹಸಿರು ಗಿಡಗಳಿಂದ ಕಂಗೊಳಿಸುವಂತೆ ಶ್ರಮವಹಿಸುವ ವಿದ್ಯಾರ್ಥಿಗಳಿಗೆ ಮುಂದಿನ ವಿಶ್ವ ಪರಿಸರ ದಿನಾಚರಣೆಯಲ್ಲಿ ವಿಶೇಷವಾಗಿ ಸನ್ಮಾನ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.
ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ನ್ಯಾಮತಿ ತಾಲ್ಲೂಕಿನ ಅಧ್ಯಕ್ಷ ಬಿ. ಎಚ್. ಉಮೇಶ್ ಬೆಳಗುತ್ತಿ ಮಾತನಾಡಿ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಗಿಡ ನೆಡುವುದು, ಶಬ್ದ, ಪರಿಸರ, ನೀರು ಮಾಲಿನ್ಯ ತಡೆಗಟ್ಟುವಂತೆ ಉತ್ತಮ ಪರಿಸರದಿಂದ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದರು.
ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಈಶ್ವರಪ್ಪ, ಬಿಆರ್‌ಸಿ ಮಶ್, ಕತ್ತಿಗೆಯ ಕಾರ್ಯದರ್ಶಿ ಎಂ. ಬಿ. ಸುರೇಶ್, ಪತ್ರಕರ್ತರ ಸಂಘದ ನ್ಯಾಮತಿ ಘಟಕದ ಸಂಚಾಲಕ ಎಂ.ಎಸ್. ಶಾಸ್ತ್ರೀಹೊಳೆಮಠ್ , ಪತ್ರಕರ್ತರ ಸಂಘದ ಹೊನ್ನಾಳಿ ಘಟಕದ ಮಾಜಿ ಅಧ್ಯಕ್ಷ ಮೃತ್ಯುಂಜಯ ಪಾಟೀಲ್ , ಮುಖ್ಯ ಶಿಕ್ಷಕಿ ಕೆ ಜಕ್ಷಮ್ಮ, ಶಿಕ್ಷಕರಾದ ಧನಂಜಯ, ಲೋಕೇಶ್, ಪವಿತ್ರ, ಕಾವೇರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೊನ್ನಾಳಿ ವಲಯದ ಮೇಲ್ವಿಚಾರಕ ಬಸವರಾಜ್, ಕೃಷಿ ಅಧಿಕಾರಿ ಪ್ರೇಮ್ ಕುಮಾರ್ ಉಪಸ್ಥಿತರಿದ್ದು ಸಿಬ್ಬಂದಿ ವರ್ಗದವರು ಸೇರಿ ಶಾಲಾ ಆವರಣದಲ್ಲಿ ಸಸಿ ನೆಟ್ಟು ನೀರು ಹಾಕಿದರು. ಶಾಲಾ ವಿದ್ಯಾರ್ಥಿಗಳ ಕೈಯಲ್ಲಿ ಭಿತ್ತಿಪತ್ರ ಹಿಡಿದುಕೊಂಡು ಪರಿಸರ ಸಂರಕ್ಷಣೆ ಜಗೃತಿ ಮೂಡಿಸಿದರು. ಇದೇ ಸಂದರ್ಭದಲ್ಲಿ ೧೫೦ ಸಸಿಗಳನ್ನು ವಿತರಿಸಲಾಯಿತು.