ಜಿಲ್ಲಾ ಸುದ್ದಿತಾಜಾ ಸುದ್ದಿ

ಸರ್ಕಾರ ಆಟೋ ಚಾಲಕರ ಅಭಿವೃದ್ಧಿ ಮಂಡಳಿ ಸ್ಥಾಪಿಸಲಿ: ಸುರಕ್ಷಿತ್ ಶೆಟ್ಟಿ

Share Below Link

ಶಿವಮೊಗ್ಗ: ರಾಜ್ಯ ಸರ್ಕಾರ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಅಭಿವೃದ್ಧಿ ಮಂಡಳಿ ಸ್ಥಾಪಿಸಿರುವಂತೆ ಆಟೋ ಡ್ರೈವರ್‍ಸ್‌ಗಳ ಮಕ್ಕಳು ಮತ್ತವರ ಕುಟುಂಬದ ಹಿತಕ್ಕಾಗಿ ಆಟೋ ಚಾಲಕರ ಅಭಿವೃದ್ಧಿ ಮಂಡಳಿ ಸ್ಥಾಪಿಸಲಿ. ಸಧ್ಯದ ಜಿಧಿಕಾರಿಗಳ ಮೂಲಕ ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗು ವುದು ಎಂದು ಎಂದು ಆಟೋ ಚಾಲಕ ಸುರಕ್ಷಿತ್ ಶೆಟ್ಟಿ ತಿಳಿಸಿದರು.
ಇಲ್ಲಿನ ಶಿವಮೂರ್ತಿ ಸರ್ಕಲ್ ನಲ್ಲಿ ನವೀಕೃತಗೊಂಡ ವೀರ ಶಿವ ಮೂರ್ತಿ ಆಟೋ ನಿಲ್ದಾಣದಲ್ಲಿ ಇದೇ ಪ್ರಥಮ ಬಾರಿಗೆ ಮಹಾ ನವಮಿ ಮತ್ತು ಆಯುಧ ಪೂಜೆ ಅಂಗವಾಗಿ ಹಮ್ಮಿಕೊಂಡಿದ್ದ ಪೂಜ ಕಾರ್ಯದ ಸಂದರ್ಭದಲ್ಲಿ ಅವರು ಮಾತನಾಡಿದರು.
ಆಟೋ ರಿಕ್ಷಾ ಚಾಲನೆಯಿಂದ ಅನೇಕರು ಜೀವನ ನಡೆಸುತ್ತಿzರೆ. ನಿರುದ್ಯೋಗ ಸಮಸ್ಯೆ ನಿವಾರಣೆ ಯಲ್ಲಿ ಆಟೋರಿಕ್ಷಾಗಳ ಕೊಡುಗೆ ಸಹ ಇದೆ. ಮಿತಿ ಮೀರಿರುವ ಇಂಧನ ವೆಚ್ಚ, ಬಿಡಿಭಾಗಗಳ ದರ, ಆಟೋರಿಕ್ಷಾಗಳ ಸಂಖ್ಯೆ ಹೆಚ್ಚುತ್ತಿ ರುವುದರಿಂದ ಉಂಟಾಗುತ್ತಿರುವ ಪೈಪೋಟಿ ಮತ್ತಿತರೆ ಕಾರಣಗ ಳಿಂದ ಆಟೋ ಡ್ರೈವರ್‌ಗಳು ಸಂಕ ಷ್ಟ ಎದುರಿಸುತ್ತಿzರೆ ಎಂದರು.
ಜನರನ್ನು ಕಡಿಮೆ ವೆಚ್ಚದಲ್ಲಿ ಕೊಂಡೊಯ್ಯುವ ಸಾರಿಗೆ ಸಂಪರ್ಕ ವ್ಯವಸ್ಥೆಯಲ್ಲಿ ಆಟೋರಿಕ್ಷಾಗಳ ಪಾತ್ರ ಪ್ರಮುಖವಾಗಿದೆ. ಅಭಿ ವೃದ್ಧಿ ಹೊಂದುತ್ತಿರುವ ನಗರ, ಪಟ್ಟಣಗಳಲ್ಲಿ ಆಟೋರಿಕ್ಷಾಗಳು ಅತ್ಯವಶ್ಯಕವಾದ ಸಂಪರ್ಕ ಮಾಧ್ಯ ಮವಾಗಿದೆ ಎಂದು ಹೇಳಿದರು.
ಆಟೋ ಚಾಲಕರುಗಳಾದ ಶಶಿಧರ, ಲಿಂಗರಾಜ ಗೌಡ, ರಮೇಶ್, ಉಮೇಶ್, ಚಿದಾನಂದ್, ಸೋಮನಾಥ್, ಮಿಥುನ್ ನಾಯ್ಕ ಮತ್ತಿತರರು ಭಾಗವಹಿಸಿದ್ದರು.