ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಸರ್ಕಾರಿ ಶಾಲೆಗಳ ಉನ್ನತೀಕರಣ ಅಗತ್ಯ: ಎಸ್ಪಿ ಮಿಥುನ್

Share Below Link

ಶಿವಮೊಗ್ಗ: ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಶೈಕ್ಷಣಿಕ ಸಂಸ್ಥೆಗಳು ಕೇವಲ ನಗರ ಪ್ರದೇಶಗಳಿಗಷ್ಟೇ ಸೀಮಿತ ವಾಗಬಾರದು. ಗ್ರಾಮಾಂತರ ಭಾಗದಲ್ಲೂ ಕೂಡ ಆಧುನಿಕ ಸೌಲಭ್ಯವುಳ್ಳ ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾಗಬೇಕು. ಅದರಲ್ಲೂ ಹಳ್ಳಿಗಳಲ್ಲಿರುವ ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸುವುದು ಅಗತ್ಯ ಎಂದು ಜಿ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಹೇಳಿದರು.
ರೌಂಡ್ ಟೇಬಲ್ ೧೬೬ ವತಿ ಯಿಂದ ತಾಲೂಕಿನ ಹನುಮಂತ ಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದ ಸುತ್ತ ಸುಮಾರು ೩ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿ ರುವ ಕಾಂಪೌಂಡನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶ ಹಳ್ಳಿಗಳಿಂದ ಕೂಡಿದೆ. ಹಳ್ಳಿಯ ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಿದರೆ ದೇಶ ಪ್ರಗತಿ ಯತ್ತ ಸಾಗುತ್ತದೆ. ಇದಕ್ಕಾಗಿ ಸರ್ಕಾರ, ಸಂಘ- ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾಯೋನ್ಮುಖವಾಗಿವೆ. ರೌಂಡ್ ಟೇಬಲ್ ಶಿಕ್ಷಣ ಕ್ಷೇತ್ರ ವನ್ನೇ ಆದ್ಯತೆಯನ್ನಾಗಿಟ್ಟು ಕೊಂಡು ಸರ್ಕಾರಿ ಶಾಲೆಗಳಿಗೆ ಕೊಠಡಿ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮತ್ತಿತರೆ ಮೂಲ ಸೌಕರ್ಯಗಳನ್ನು ಕಲ್ಪಿ ಸುತ್ತಿರುವುದು ಅನುಕರಣೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೌಂಡ್ ಟೇಬಲ್‌ನ ಕಾರ್ಯ ಪ್ರೇರಣದಾಯಕವಾಗಿದೆ. ಇಂತಹ ಕೆಲಸ ನೋಡಿ ನಾನೂ ಸಹ ಪ್ರೇರಣೆಗೊಂಡು ನನ್ನ ಹುಟ್ಟೂರಿನ ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮು ಖಗೊಂಡಿದ್ದೇನೆ ಎಂದು ತಿಳಿಸಿ ದರು.ಜಗತ್ತಿನಲ್ಲಿ ನೂರಾರು ಕೋಟಿ ಜನಸಂಖ್ಯೆ ಇದ್ದರೂ ಸಹ ಸತ್ಕಾರ್ಯ ಗಳಲ್ಲಿ, ಪರೋಪಕಾರ ದಲ್ಲಿ ತೊಡಗಿಕೊಳ್ಳುವವರ ಸಂಖ್ಯೆ ಬಹಳ ಕಡಿಮೆ. ಆದರೂ ಕೆಲವು ಸಂಘ- ಸಂಸ್ಥೆಗಳು, ವ್ಯಕಿಗಳು ಸಾಮಾಜಿಕ ಕಾಳಜಿ, ಕಳಕಳಿಯಿಂದ ಸೇವಾ ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳುತ್ತಾರೆ. ಅಂತಹವರ ಹೆಸರು ಚಿರಸ್ಥಾಯಿಯಾಗಿ ಉಳಿಯುತ್ತದೆ ಎಂದರು.
ರೌಂಡ್ ಟೇಬಲ್ ವಲಯ ೧೩ರ ಛೇರ್ಮನ್ ರಾಮ್, ಶಿವಮೊಗ್ಗ ರೌಂಡ್ ಟೇಬಲ್‌ನ ಛೇರ್ಮನ್ ಕಾರ್ತಿಕ್, ಸದಸ್ಯರು ಗಳಾದ ವಿಶ್ವಾಸ್ ಕಾಮತ್, ಸುಶ್ರುತ್, ಈಶ್ವರ್ ಸರ್ಜಿ, ಪ್ರಶಾಂತ್, ಅಜಿತ್, ವರುಣ್, ಸಿದ್ಧಾರ್ಥ್ ಹಾಗೂ ಶಾಲೆಯ ಶಿಕ್ಷಕ ಸಿಬ್ಬಂದಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.