ಜಾಗತಿಕ ರೋಬೋಟಿಕ್ಸ್ ಸ್ಪರ್ಧೆಗೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು …
ಬೆಂಗಳೂರು : ರಾಜ್ಯದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಲ್ಲಿ ನವೀನತೆಯ ಹಾದಿಯತ್ತ ಸಾಗುತ್ತಿರುವ ಶಕ್ತಿಯುತ ಬೆಳವಣಿಗೆಯ ಮತ್ತೊಂದು ಉದಾಹರಣೆಯಾಗಿ, ಮಶ್ವರಂ ೧೮ನೇ ಅಡ್ಡರಸ್ತೆಯ ಸರ್ಕಾರಿ ಪ್ರೌಢಶಾಲೆಯ ಅಟಲ್ ಟಿಂಕರಿಂಗ್ ಲ್ಯಾಬ್‌ನಲ್ಲಿ ಕಲಿಯು ತ್ತಿರುವ ಐದು ಪ್ರತಿಭಾವಂತ ವಿದ್ಯಾರ್ಥಿಗಳು ಫಸ್ಟ್ ಗ್ಲೋಬಲ್ ಚಾಲೆಂಜ್ ೨೦೨೫ಕ್ಕೆ ಟೀಮ್ ಇಂಡಿಯಾ ಪರವಾಗಿ ಆಯ್ಕೆಯಾ ಗಿ zರೆ.

ಅಮೆಜಾನ್ ಫ್ಯೂಚರ್ ಎಂಜಿನಿಯರ್ ಮೇಕರ್ ಸ್ಪೇಸ್ ಲ್ಯಾಬ್‌ನಲ್ಲಿ ತರಬೇತಿ ಪಡೆದಿರುವ ಈ ವಿದ್ಯಾರ್ಥಿಗಳು ಅ. ೨೯ ರಿಂದ ನ.೧ರ ವರೆಗೆ ಉತ್ತರ ಅಮೆರಿಕಾದ ಪನಾಮಾದಲ್ಲಿ ನಡೆಯಲಿರುವ ಜಾಗತಿಕ ರೋಬೋಟಿಕ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಽಸಲಿzರೆ.
ಮಶ್ವರಂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ೧೧ನೇ ತರಗತಿ ವಿದ್ಯಾರ್ಥಿಗಳಾದ ನಿಂಗರಾಜ್, ಪರಶುರಾಮ್ ಎಂ., ಅರ್ಜುನ್ ಕೆ. ರಾಜ್, ಸರ್ಕಾರಿ ಪ್ರೌಢಶಾಲೆಯ ೧೦ನೇ ತರಗತಿ ವಿದ್ಯಾರ್ಥಿ ಗೌರೀಶ್ ಕೆ., ೯ನೇ ತರಗತಿ ವಿದ್ಯಾರ್ಥಿ ಜಿ.ಎನ್. ಚಂದನ್ ರಾಜ್ ಇವರುಗ ಳೆಲ್ಲರೂ ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ ಈ ವಿದ್ಯಾರ್ಥಿಗಳಾಗಿದ್ದು, ರೋಬೋಟಿಕ್ಸ್, ಕೋಡಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ತಂಡದ ಕೆಲಸದಲ್ಲಿ ಅಸಾಧಾರಣ ಕೌಶಲ್ಯ ತೋರುವ ಮೂಲಕ ತಮ್ಮ ಪ್ರತಿಭೆ ಮೆರೆದಿದ್ದಾರೆ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಮಾತನಾಡಿ, ಮಶ್ವರಂ ಸರ್ಕಾರಿ ಪ್ರೌಢಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳು `ಫಸ್ಟ್ ಗ್ಲೋಬಲ್ ಚಾಲೆಂಜ್ ೨೦೨೫’ ಅಂತರ ರಾಷ್ಟ್ರೀಯ ರೋಬೋಟಿಕ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರಲ್ಲದೇ, ಈ ವಿದ್ಯಾರ್ಥಿಗಳೊಂದಿಗೆ ಮಾತನಾಡಿದಾಗ ಅವರ ಆತ್ಮವಿಶ್ವಾಸ, ಚಿಂತನೆ ಹಾಗೂ ತಾಂತ್ರಿಕ eನದಿಂದ ನಾನು ಅತ್ಯಂತ ಪ್ರಭಾವಿತ ನಾದೆನು. ಸರ್ಕಾರಿ ಶಾಲೆಯ ತರಗತಿಯಿಂದ ಪ್ರಾರಂಭವಾದ ಇವರ ಪಯಣವು ಇಂದು ಜಾಗತಿಕ ವೇದಿಕೆಯಲ್ಲಿ ಕರ್ನಾಟಕದ ಹೆಸರನ್ನು ಎತ್ತಿ ಹಿಡಿಯುವ ಮಟ್ಟಕ್ಕೇರಿರು ವುದು ನಮ್ಮ ರಾಜ್ಯದ ಶಿಕ್ಷಣ ಕ್ಷೇತ್ರದ ಬಲವರ್ಧಿತ ಪರಿಸರದ ಪ್ರತಿಬಿಂಬವಾಗಿದೆ ಎಂದರು.
ಪನಾಮಾದಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಈ ವಿದ್ಯಾರ್ಥಿಗಳು ಯಶಸ್ಸು ಸಾಧಿಸಿ, ವಿಶ್ವದ ಮುಂದೆಯೂ ಕರ್ನಾಟಕದ ಸರ್ಕಾರಿ ಶಾಲಾ ಶಿಕ್ಷಣದ ಕೀರ್ತಿಯನ್ನು ಬೆಳಗಲಿ ಎಂದು ಶುಭಹಾರೈಸಿದರು.

