ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಸಾಮಾಜಿಕ ನ್ಯಾಯ ನೀಡುವ ಜವಾಬ್ದಾರಿ ಸರ್ಕಾರzಗಿದೆ…

Share Below Link

ಶಿಕಾರಿಪುರ: ಜನಸಂಖ್ಯೆಯ ಅನುಪಾತಕ್ಕೆ ಅನುಗುಣವಾಗಿ ಆರ್ಥಿಕ ಹಾಗೂ ಶೈಕ್ಷಣಿಕ ಸೌಲಭ್ಯ ಗಳ ಮೂಲಕ ಎಲ್ಲ ವರ್ಗಗಳಿಗೆ ಸಾಮಾಜಿಕ ನ್ಯಾಯವನ್ನು ದೊರಕಿಸಿ ಕೊಡುವ ಮಹತ್ವದ ಜವಾಬ್ದಾರಿ ಸರ್ಕಾರzಗಿದೆ ಎಂದು ಭದ್ರಾ ಕಾಡ ಮಾಜಿ ಅಧ್ಯಕ್ಷ ನಗರದ ಮಹಾದೇವಪ್ಪ ಹೇಳಿದರು.
ತಾಲೂಕು ಕಚೇರಿ ಮುಂಭಾಗದಲ್ಲಿ ತಾಲೂಕು ಹಿಂದುಳಿದ ವರ್ಗಗಳ ಒಕ್ಕೂಟದ ವತಿಯಿಂದ ಕಾಂತರಾಜ್ ವರದಿ ಜರಿಗೆ ಆಗ್ರಹಿಸಿ ನಡೆದ ಪ್ರತಿಭಟನಾ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಸಮಾಜದ ಎ ಜತಿ ವರ್ಗ ಗಳಲ್ಲಿಯೂ ಆರ್ಥಿಕವಾಗಿ ಶೈಕ್ಷಣಿಕ ವಾಗಿ ದುರ್ಬಲರು, ಭೂ ರಹಿತರು ಇzರೆ. ಆದರೆ ಪ್ರಸ್ತುತ ಕಾಯ್ದೆ ಅಡಿಯಲ್ಲಿ ಅವರಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ, ಕಾರಣ ಬದಲಾದ ಜನಸಂಖ್ಯೆಯ ಅನುಪಾತಕ್ಕೆ ಅನುಗುಣವಾಗಿ ಆರ್ಥಿಕ ಹಾಗೂ ಶೈಕ್ಷಣಿಕ ಸೌಲಭ್ಯ ಗಳನ್ನು ಒದಗಿಸುವ ಜವಾಬ್ದಾರಿ ಸರ್ಕಾರzಗಿದ್ದು ನ್ಯಾಯಯುತ ವಾಗಿ ಒದಗಿಸಲು ಕಾಂತರಾಜ್ ವರದಿಯ ಅನುಷ್ಠಾನದ ತುರ್ತು ಅವಶ್ಯಕತೆ ಇದೆ ಎಂದರು.


ಸಮಾಜದ ಎಲ್ಲ ವರ್ಗಗಳ ಆರ್ಥಿಕ ಶೈಕ್ಷಣಿಕ ಔದ್ಯೋಗಿಕ ಸ್ಥಿತಿಗತಿಗಳನ್ನು ಅರಿಯಲು ಕಾಂತರಾಜ್ ಆಯೋಗವು ಸರ್ಕಾರದಿಂದ ನೇಮಿಸಲ್ಪಟ್ಟ ಸರ್ಕಾರಿ ನೌಕರರು ಪ್ರತಿ ಮನೆಗೂ ಮಾರ್ಗಸೂಚಿಯಲ್ಲಿನ ೫೨ ಪ್ರಶ್ನೆಗಳ ಬಗ್ಗೆ ಮಾಹಿತಿಯನ್ನು ಪಡೆದು ವರದಿಯನ್ನು ಸಿದ್ದಪಡಿಸಲಾಗಿದ್ದು,ಈ ಮೂಲಕ ಎಲ್ಲ ಜತಿಗಳ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಸ್ಥಿತಿಗತಿಗಳನ್ನು ವರದಿ ಪ್ರತಿಬಿಂಬಿಸುತ್ತದೆ.ಈ ದಿಸೆಯಲ್ಲಿ ತಕ್ಷಣ ಸರ್ಕಾರ ವರದಿ ಅಂಗೀಕರಿಸಿ ಮುಂದಿನ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಡಿ.ಎಸ್.ಈಶ್ವರಪ್ಪ ಮಾತನಾಡಿ, ಕಾಂತರಾಜ್ ವರದಿಯನ್ನು ಬೆಂಕಿ ಹಚ್ಚಿ ಸುಡಬೇಕು ಎಂದು ಹೇಳುವ ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ ಮೊದಲು ಕಾಂತರಾಜ್ ವರದಿಯಲ್ಲಿ ಏನಿದೆ ಎಂಬುದನ್ನು ಅರಿತುಕೊಳ್ಳಬೇಕು. ಬಾಯಿ ಚಪಲಕ್ಕೆ ಮಾತನಾಡುವುದನ್ನು ನಿಲ್ಲಿಸಿ ಸಾಮಾಜಿಕವಾಗಿ ಆರ್ಥಿಕ ವಾಗಿ ನೊಂದವರ ಕಣ್ಣೀರನ್ನು ಒರೆಸುವ ರೀತಿಯಲ್ಲಿ ಜವಾಬ್ದಾರಿಯುತ ಸ್ಥಾನವನ್ನು ಅನುಭವಿಸಿದ ನಾಯಕರು ಜವಾಬ್ದಾರಿಯುತವಾಗಿ ಮಾತನಾಡುವುದನ್ನು ಕಲಿಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೀಮಿತ ಜತಿ, ಧರ್ಮ ಆಧಾರವಾಗಿಸಿಕೊಂಡು ವರದಿ ಯನ್ನು ಸಿದ್ದಪಡಿಸಿಲ್ಲ, ಯಾವ ಜನಾಂಗದವರ ಮತಗಳಿಂದ ಅಧಿಕಾರಕ್ಕೆ ಬಂದರೋ ಅವರನ್ನೇ ತುಳಿಯುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಕಾಂತರಾಜ್ ವರದಿ ಜರಿಯಿಂದ ಮಾತ್ರ ಸಮಾಜದ ಎ ಶೋಷಿತ ಹಿಂದುಳಿದ ವರ್ಗಗಳಿಗೂ ನ್ಯಾಯ ದೊರಕಿಸಲು ಸಾಧ್ಯವಾಗುತ್ತದೆ ಎಂದರು.
ಹಿರಿಯ ಮುಖಂಡ ತೀ.ನ ಶ್ರೀನಿವಾಸ್ ಮಾತನಾಡಿ, ಕಾಂತ ರಾಜ್ ವರದಿಯನ್ನು ಸರ್ಕಾರ ಸ್ವೀಕರಿಸಿಲ್ಲ ಮತ್ತು ಅದು ಬಹಿ ರಂಗಗೊಂಡಿಲ್ಲ, ಆದರೂ ಕಾಂತ ರಾಜ್ ವರದಿಯನ್ನು ಸ್ವೀಕರಿಸ ಬೇಡಿ ಎಂದು ಕೆಲ ಮಠಾಧೀಶರು ಸರ್ಕಾರದ ಮೇಲೆ ಒತ್ತಡ ಹೇರು ತ್ತಿzರೆ ಹಾಗಾದರೆ ಇವರಿಗೆ ವರದಿಯಲ್ಲಿ ಏನಿದೆ ಎಂದು ಹೇಗೆ ತಿಳಿಯಿತು ಎಂಬುದು ಪ್ರಶ್ನೆಯಾ ಗಿದೆ ಎಂದರು. ಈಗಲಾದರೂ ಹಿಂದುಳಿದ ಶೋಷಿತ ವರ್ಗಗಳ ಮಠಾಧೀಶರು ಮೌಲ್ವಿಗಳು, ಚರ್ಚ್‌ನ ಫಾದರ್ ಗಳು ಸರ್ಕಾರದ ಮೇಲೆ ಒತ್ತಡ ಹೇರಲು ಮುಂದಾಗಬೇಕು ಎಂದರು.
ಮಠ ಭಕ್ತರ ಹಿತವನ್ನು ಕಾಪಾಡಬೇಕು ಮೇಲ್ವರ್ಗದ ಮಠಾಧೀಶರು ಯಾವ ರೀತಿಯಲ್ಲಿ ತಮ್ಮ ಸಮುದಾಯದ ನಾಯಕ ರನ್ನು ರಕ್ಷಿಸಿಕೊಳ್ಳುತ್ತಾರೋ ಅದನ್ನು ನಾವು ಅರಿಯಬೇಕು, ಈಗಲಾದರೂ ದಲಿತರು ಹಿಂದುಳಿ ದವರು ಅಲ್ಪಸಂಖ್ಯಾತರು ಒಗ್ಗೂಡಿ ಹೋರಾಟ ನಡೆಸದಿದ್ದರೆ ನಮ್ಮನ್ನು ಆ ದೇವರು ಬಂದರೂ ರಕ್ಷಿಸಲು,ನ್ಯಾಯ ದೊರಕಿಸಲು ಸಾಧ್ಯವಿಲ್ಲ ಎಂದರು.
ಪ್ರತಿಭಟನೆಯ ನಂತರ ತಹಶೀಲ್ದಾರ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ತಾಲೂಕು ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ತಡಗಣಿ ಹುಚ್ಚರಾಯಪ್ಪ, ಪ್ರಮುಖರಾದ ಶಿವರಂಜಿನಿ ಸುದರ್ಶನ್ , ಬಿ.ಸಿ ವೇಣು ಗೋಪಾಲ್, ಬನ್ನೂರು ಮಂಜಪ್ಪ, ಅಬ್ದುಲ್ ಮುನಾಫ್ ಸಾಬ್, ಹಬೀಬು, ಶಿವರಾಂ ಪಾರಿವಾಳದ, ಸಿರಿಯಣ್ಣಾರ ರೇವಣಸಿದ್ದಪ್ಪ ನಗರದ ಅಶೋಕ್, ಉಮೇಶಪ್ಪ ಕೋಡಿಹಳ್ಳಿ, ನಾಗಪ್ಪ, ಹುಲ್ಮಾರ್ ಶಿವು, ಮಲ್ಲನಗೌಡ , ಮಹೇಶ್ , ರಮೀ ಜಬಿ, ಬಸವರಾಜ, ಗುರುಶಾಂತ್ ಉಪಸ್ಥಿತರಿದ್ದರು.