ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಸಾಂಸ್ಕೃತಿಕ ಕಲೆಯಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ: ಜಿ.ವಿಜಯ್‌ಕುಮಾರ್

Share Below Link

ಶಿವಮೊಗ್ಗ: ಸಾಂಸ್ಕೃತಿಕ ಕಲೆಯ ಕಲಿಕೆಗಳಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ ಆಗುವ ಜತೆಯಲ್ಲಿ ಮಾನಸಿಕ ಖಿನ್ನತೆಯಿಂದ ದೂರ ವಾಗಬಹುದು. ಕಲೆ ಮತ್ತು ಕಲಾ ವಿದರಿಗೆ ಸಮಾಜದಲ್ಲಿ ಶಾಶ್ವತ ಗೌರವ ಸಿಗುತ್ತದೆ ಎಂದು ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್‍ಯ ದರ್ಶಿ ಜಿ.ವಿಜಯ್‌ಕುಮಾರ್ ಹೇಳಿದರು.
ಶಿವಮೊಗ್ಗ ನಗರದ ಶ್ರಿ ನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಚಾರ್ಯ ಶ್ರೇಷ್ಠ, ವೇದಬ್ರಹ್ಮ ಅ.ಪ.ರಾಮಭಟ್ಟ ಸ್ಮರಣೆ ಪ್ರಯುಕ್ತ ದೇವಸ್ಥಾನದ ಸಮಿತಿ, ಸ್ವಾಮಿ ವಿವೇಕಾನಂದ ಅಡ್ವೆಂಚರ್ ಸ್ಫೋರ್ಟ್ಸ್ ಕ್ಲಬ್, ಅರ್ಚಕ ವೃಂ ದದ ವತಿಯಿಂದ ಆಯೋಜಿಸಿದ್ದ ವಿವೇಕಶ್ರೀ ಪುರಸ್ಕಾರ ಮತ್ತು ಭರತನಾಟ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಶಕದಿಂದ ಸಂಸ್ಥೆಯು ಸಮಾಜಮುಖಿಯಾಗಿ ಕೆಲಸ ಮಾಡುವ ಜತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುತ್ತಿರು ವುದು ಅಭಿನಂದನೀಯ ಕಾರ್ಯ. ಸಾಧಕರನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸುವ ಕೆಲಸ ಆಗುತ್ತಿದೆ. ಅತ್ಯಂತ ಹೆಮ್ಮಯ ಸಂಗತಿ ಎಂದು ತಿಳಿಸಿದರು.


ಇದೇ ಸಂದರ್ಭದಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ, ವಿದೇಶಗಳಲ್ಲಿ ಭರತನಾಟ್ಯದಲ್ಲಿ ಉತ್ತಮ ಪ್ರದ ರ್ಶನ ನೀಡಿ ಚಂದನ ಟಿವಿಯಲ್ಲಿ ಬಿ ಗ್ರೇಡ್ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ವಿದುಷಿ ಕವನ ಪಿ ಕುಮಾರ್ ಅವರಿಂದ ವಿಶೇಷ ಭರತನಾಟ್ಯ ಕಾರ್ಯಕ್ರಮ ನಡೆ ಯಿತು. ನಂತರ ಕವನ ಅವರನ್ನು ಸನ್ಮಾನಿಸಲಾಯಿತು.
ಶ್ರೀ ನಾಗಸುಬ್ರಹ್ಮಣ್ಯ ದೇವ ಸ್ಥಾನ ಸಮಿತಿ ಅಧ್ಯಕ್ಷ ಜಿ.ಎಚ್. ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯ ಪದ್ಮಾವತಿ, ಸ್ವಾಮಿ ವಿವೇಕಾ ನಂದ ಅಡ್ವೆಂಚರ್ ಸ್ಫೋರ್ಟ್ ಕ್ಲಬ್ ಅಧ್ಯಕ್ಷ ಎಚ್.ರಾಮಲಿಂಗಪ್ಪ, ಇನ್ನರ್‌ವ್ಹೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯ್‌ಕುಮಾರ್, ಸಂದೇಶ ಉಪಾಧ್ಯ, ಕಿಶೋರ್ ಕುಮಾರ್, ಚಿತ್ರಲೇಖ ಉಪಾಧ್ಯ, ಸುಜತಾ, ಶ್ರೀಜಯಾ ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.