ಚಿನ್ನ ಬೆಳ್ಳಿಯ ಬೆಲೆ ಏರಿಕೆಯ ನಡುವೆ ಅತಂತ್ರ ಸ್ಥಿತಿಯತ್ತ ಅಕ್ಕಸಾಲಿಗರು..!
ರಾಘವೇಂದ್ರ ಪಾಲನಕರ
ಭಾರತೀಯ ಮಹಿಳೆಯರಿಗೆ ಚಿನ್ನ ಕೇವಲ ಆಭರಣವಲ್ಲ, ಅದೊಂದು ಆರ್ಥಿಕ ಭದ್ರತೆ, ಸಾಮಾಜಿಕ ಸಂಸ್ಕೃತಿ ಮತ್ತು ಭಾವನೆ. ಚಿನ್ನವು ಮಹಿಳೆಯರಿಗೆ ಆರ್ಥಿಕ ಸುರಕ್ಷತೆಯನ್ನು ಒದಗಿಸುತ್ತದೆ ಮತ್ತು ಸಂಪ್ರದಾಯದ ಭಾಗವಾಗಿ, ನಿಶ್ಚಿತಾರ್ಥ, ವಿವಾಹದಂತಹ ವಿಶೇಷ ಸಂದರ್ಭಗಳಲ್ಲಿ ಧರಿಸಲು ಆದ್ಯತೆ ನೀಡುತ್ತಾರೆ.
ಚಿನ್ನದ ದರದಲ್ಲಿ ನಿರಂತರ ಏರಿಳಿತ ಮತ್ತು ದಾಖಲೆ ಮಟ್ಟದ ಬೆಲೆ ಏರಿಕೆಯಿಂದಾಗಿ ದೇಶದಾದ್ಯಂತ ಸಣ್ಣ ಹಾಗೂ ಕುಟುಂಬ ಆಧಾರಿತ ಸ್ಥಳೀಯ ಆಭರಣ ತಯಾರಕರು, ವ್ಯಾಪಾರಿಗಳು ತೀವ್ರ ನಗದು ಸಂಕಷ್ಟಕ್ಕೆ ಸಿಲುಕಿzರೆ.

ಭಾರತದ ಚಿನ್ನ ಮತ್ತು ಆಭರಣ ಉದ್ಯಮದ ಅತ್ಯಂತ ಹಳೆಯ ಮತ್ತು ಪ್ರಮುಖ ಸಂಸ್ಥೆಯಾದ ಇಂಡಿಯನ್ ಬುಲಿಯನ್ ಅಂಡ್ ಜ್ಯುವೆಲ್ಲರ್ಸ್ ಅಸೋಸಿಯೇಷನ್ ಅಂದಾಜಿನ ಪ್ರಕಾರ, ದೇಶದ ಸ್ಥಳೀಯ ಜ್ಯುವೆಲ್ಲರ್‌ಗಳು ಮತ್ತು ಚಿನ್ನದ ಕರಕುಶಲಕಾರರು ಸುಮಾರು ಶೇ.೪೫ರಷ್ಟು ಪ್ರಮಾಣದ ವ್ಯವಹಾರ ಕುಸಿತ ಎದುರಿಸುತ್ತಿ zರೆ. ಚಿನ್ನದ ಬೆಲೆ ಏರಿಕೆಯಿಂದ ಮಧ್ಯಮ ವರ್ಗದ ಗ್ರಾಹಕರು ಖರೀದಿಯಿಂದ ಹಿಂದೆ ಸರಿಯುತ್ತಿ ರುವುದು ಇದಕ್ಕೆ ಪ್ರಮುಖ ಕಾರಣ.
ಮಧ್ಯಮ ವರ್ಗದ ಜನರಿಗೆ ಈಗ ಚಿನ್ನ ಖರೀದಿಸುವುದು ಸಾಧ್ಯವಾಗುತ್ತಿಲ್ಲ. ಮನೆ ಖರ್ಚುಗಳೇ ದೊಡ್ಡ ಸವಾಲಾಗಿವೆ. ದೀಪಾವಳಿ ಬಳಿಕ ಪರಿಸ್ಥಿತಿ ಇನ್ನಷ್ಟು ಕೆಟ್ಟಿದೆ. ಸಣ್ಣಪುಟ್ಟ ಚಿನ್ನಾಭರಣಗಳ ಅಂಗಡಿಗೆ ಇತ್ತೀಚಿನ ದಿನಗಳಲ್ಲಿ ಗ್ರಾಹಕರೇ ಬರುತ್ತಿಲ್ಲ ಎನ್ನುವುದು ಕಳವಳಕಾರಿ ಸಂಗತಿಯಾಗಿದೆ.
ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಿದರೂ ನಿರಂತರ ದರ ಅಸ್ಥಿರತೆಯಿಂದ ಗ್ರಾಹಕರು ಖರೀದಿಗೆ ಮುಂದಾಗುತ್ತಿಲ್ಲ. ಬೆಲೆ ಏರಿ ನಂತರ ಸ್ಥಿರವಾದರೆ ಜನ ಖರೀದಿಗೆ ಮನಸ್ಸು ಮಾಡುತ್ತಾರೆ. ಆದರೆ ದಿನದಿಂದ ದಿನಕ್ಕೆ ಬೆಲೆ ಏರುಪೇರು ಕಂಡರೆ, ಮದುವೆ ಅಥವಾ ತುರ್ತು ಸಂದರ್ಭ ಹೊರತುಪಡಿಸಿ ಯಾರೂ ಚಿನ್ನ ಖರೀದಿಸುವುದಿಲ್ಲ.

ಭಾರತದಲ್ಲಿ ಸುಮಾರು ೩ ಲಕ್ಷದಿಂದ ೩.೫ ಲಕ್ಷದವರೆಗೆ ಸಣ್ಣ ಮತ್ತು ಮಧ್ಯಮ ಮಟ್ಟದ ಸ್ವತಂತ್ರ ಆಭರಣ ಅಂಗಡಿಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳ ವ್ಯಾಪಾರ ದಲ್ಲಿ ಮದುವೆ ಆಭರಣಗಳು ಸುಮಾರು ಶೇ. ೬೦-೬೫ರಷ್ಟು ಪಾಲು ಹೊಂದಿವೆ. ಗ್ರಾಹಕ ರೊಂದಿಗೆ ನಿರಂತರ ಸಂಪರ್ಕ, ಕಸ್ಟಮೈಸ್ ವಿನ್ಯಾಸಗಳೇ ಇವುಗಳ ಬಲವಾಗಿದ್ದರೂ, ಇತ್ತೀಚಿನ ಪರಿಸ್ಥಿತಿ ಗಳು ಈ ಆಧಾರವನ್ನೇ ತಲೆಕೆಳಗಾಗಿಸಿವೆ. ಈ ವರ್ಷದ ಆರಂಭದಿಂದಲೇ ಸ್ಥಳೀಯ ಜ್ಯುವೆಲ್ಲರ್‌ಗಳು ನಗದು ಸಂಕಷ ಎದುರಿಸುತ್ತಿzರೆ. ಭಾರತ ಚಿನ್ನ ಆಮದು ಮೇಲೆ ಅವಲಂಬಿತ ವಾಗಿರುವುದರಿಂದ ದರಗಳ ಮೇಲೆ ನಿಯಂತ್ರಣ ಇಲ್ಲ. ಅನೌಪಚಾರಿಕ ವಲಯದ ವ್ಯಾಪಾರಿಗಳಿಗೆ ಹೊಸ ಸಂಗ್ರಹಕ್ಕೆ ಬೇಕಾದ ಬಂಡವಾಳವೇ ಇಲ್ಲ. ಹಬ್ಬದ ಕಾಲ ಸ್ವಲ್ಪ ಮಟ್ಟಿಗೆ ವ್ಯಾಪಾರಕ್ಕೆ ಉತ್ಸಾಹ ತಂದರೂ ಸಮಾಧಾನಕರವಾಗಿಲ್ಲ. ಹಗುರ ತೂಕದ ಆಭರಣಗಳು, ಬೇಗ ಮಾರಾಟವಾಗುವ ವಿನ್ಯಾಸಗಳು ಮತ್ತು ಆರ್ಡರ್ ಮೇಡ್ ಆಭರಣ ಗಳತ್ತ ಗಮನ ಹರಿಸುತ್ತಿದ್ದು, ಇದರಿಂದ ಸಂಗ್ರಹ ಕಡಿಮೆ ಮಾಡಲು ಪ್ರಯತ್ನಿಸುತ್ತಿzರೆ.
ಚಿನ್ನ – ಬೆಳ್ಳಿ ವೃತ್ತಿ ಕುಶಾಲಗಾರಿಕೆಯಲ್ಲಿ ಸಂಪ್ರದಾ ಯಿಕವಾಗಿ ತಲತಲಾಂತರ ದಿಂದಲೂ ತಮ್ಮ ಮೂಲ ವೃತ್ತಿ ಯಾದ ಚಿನ್ನಾಭರಣ ವೃತ್ತಿ ಕುಶಾಲ ಗಾರಿಕೆಯಲ್ಲಿ ತೊಡಗಿರುವರು. ಹಲವರು ಚಿಕ್ಕ ಪುಟ್ಟ ವ್ಯಾಪಾರ ಮಳಿಗೆಯನ್ನು ಅನುಷ್ಠಾನಗೊಳಿಸಿಕೊಂಡು ವರ್ತಕರಾಗಿರುವರು. ಆದರೆ ಅನಿಯಂತ್ರಿತ ಬೆಲೆ ಏರಿಕೆ ಹಾಗೂ ಅದರೊಂದಿಗೆ ಅಭದ್ರತೆಯ ಕೊರತೆ ಯಿಂದ ಭಯದ ವಾತಾವರಣ ದಲ್ಲಿಯೇ ತಮ್ಮ ವ್ಯಾಪಾರ ವಹಿವಾಟನ್ನು ಸಾಗಿಸುವಂತಾಗಿದೆ. ಕಾರಣ ಚಿನ್ನಆಭರಣಗಳ ಕಳ್ಳರ ಹಾಗೂ ದರೋಡೆಕೋರರು ಹಾಗೂ ಗ್ರಾಹಕರ ಸೋಗಿನಲ್ಲಿ ಬಂದು ಮೋಸದಿಂದ ವಂಚನೆ ಮಾಡಲು ಮುಂದಾಗುವ ವಂಚಕರ ಭಯ. ಇವೆಲ್ಲವನ್ನೂ ಮೆಟ್ಟಿ ನಿಂತು ವ್ಯಾಪಾರ ಮಾಡಿ ಅಲ್ಪಸಲ್ಪ ದೈನಂದಿನ ಜೀವನ ಸಾಗಿಸುವಷ್ಟಾ ದರೂ ಪ್ರಯತ್ನದಲ್ಲಿ ದ್ದರೆ, ಜಾಗತಿಕ ವಾಗಿ ವಿಪರೀತ ಬೆಲೆ ಏರಿಳಿತದಿಂ ದಾಗಿ ಗ್ರಾಹಕರ ಕೊರತೆಯಿಂದ ದಿನದ ಬೋಣಿಯು ಸಹ ಕಾಣದಿರುವಂತಾಗಿದೆ.

ಬ್ರಾಂಡೆಡ್ ಮಳಿಗೆಗಳಿಗೆ ಲಾಭ ಆದರೆ ದೊಡ್ಡ ಬ್ರಾಂಡೆಡ್ ಚೈನ್ ಗಳು ಈ ಪರಿಸ್ಥಿತಿಯಿಂದ ಲಾಭ ಪಡೆಯುತ್ತಿವೆ. ಕಡಿಮೆ ತೂಕದ ಆಭರಣಗಳು, ೧೮ ಕ್ಯಾರಟ್ ಮತ್ತು ಸ್ಟಡ್ಡೆಡ್ ಜ್ಯುವೆಲ್ಲರಿಗಳತ್ತ ಗ್ರಾಹಕರ ಒಲವು ಹೆಚ್ಚಾಗುತ್ತಿದೆ. ಈ ಕಾರಣ ದಿಂದ ಕೆಲ ದೊಡ್ಡದೊಡ್ಡ ಕಂಪನಿ ಗಳು ಈ ಒಂದು ಸುಯೋಗದ ಲಾಭದ ಸಂತಸದ ಕ್ಷಣದಲ್ಲಿರು ವರು. ಚಿನ್ನದ ದರದ ಅಸ್ಥಿರತೆ ಸಣ್ಣ ಜ್ಯುವೆಲ್ಲರ್‌ಗಳಿಗೆ ಸಂಕಷ್ಟ ತಂದಿದ್ದರೆ, ಸಂಘಟಿತ ಮತ್ತು ಬ್ರಾಂಡೆಡ್ ವಲಯಕ್ಕೆ ಹೊಸ ಅವಕಾಶಗಳನ್ನು ತೆರೆದಿದೆ. ಮುಂದಿನ ದಿನಗಳಲ್ಲಿ ಈ ಅಂತರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಕೇಂದ್ರ ಸರಕಾರದ ವಿಶ್ವಕರ್ಮ ಯೋಜನೆ ಹಾಗೂ ರಾಜ್ಯ ಸರಕಾರದ ಕಾರ್ಮಿಕ ಇಲಾಖೆಯ ಅಡಿಯಲ್ಲಿ ನೊಂದಾಯಿತರಾದ ವೃತ್ತಿ ಕುಶಲಗಾರರಿಗೆ ಆರ್ಥಿಕ ನೆರವಿನ ಸಹಾಯ ಹಸ್ತ ನೀಡುವ ಮೂಲಕ ಸಂಕಷ್ಟದಲ್ಲಿರುವ ಚಿನ್ನಬೆಳ್ಳಿ ಕುಶಾಲಗಾರರ ಸಹಾಯಕ್ಕೆ ಮುಂದಾಗಬೇಕೆಕಿದೆ.

