ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಈಶ್ವರಪ್ಪ ಇಲ್ಲವೇ ಅವರ ಪುತ್ರ ಕಾಂತೇಶ್‌ಗೆ ಸ್ಪರ್ಧೆಗೆ ಅವಕಾಶ ನೀಡಿ: ಜಿ ಬಿಜೆಪಿ ಕಚೇರಿ ಮುಂದೆ ರಸ್ತೆ ತಡೆದು ಪ್ರತಿಭಟನೆ

Share Below Link

ಶಿವಮೊಗ್ಗ: ಈಶ್ವರಪ್ಪ ಅವರ ನಿವೃತ್ತಿ ನಿರ್ಧಾರ ಹಿಂಪಡೆಯ ಬೇಕು ಮತ್ತು ಅವರಿಗೆ ಚುನಾ ವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಅಥವಾ ಅವರ ಮಗ ಕಾಂತೇಶ್ ಅವರಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಈಶ್ವರಪ್ಪನವರ ಬೆಂಬಲಿಗರು ಮತ್ತು ಬಿಜೆಪಿ ನಗರ ಸಮಿತಿಯ ಕೆಲವು ಸದಸ್ಯರು ಜಿ ಬಿಜೆಪಿ ಕಚೇರಿ ಮುಂದೆ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಟೈರಿಗೆ ಬೆಂಕಿ ಹಚ್ಚಲು ಯತ್ನಿಸಿ ತಮ್ಮ ಆಕ್ರೋಶ ಹೊರಹಾಕಿದರು ಪಕ್ಷದ ಹೈಕಮಾಂಡ್ ಅವರಿಗೆ ಟಿಕೆಟ್ ನೀಡದಿದ್ದಲ್ಲಿ ಈ ಬಾರಿಯ ಚುನಾವಣೆಯನ್ನೇ ಬಹಿಷ್ಕರಿಸು ತ್ತೇವೆ. ಅವರಿಗೆ ಟಿಕೆಟ್ ನೀಡ ಲೇಬೇಕು ಎಂದು ಪಟ್ಟು ಹಿಡಿ ದರು. ವಯೋಮಿತಿ ಹಿನ್ನೆಲೆಯಲ್ಲಿ ಟಿಕೆಟ್ ನಿರಾಕರಿಸುವುದಾದರೆ ಹೈಕಮಾಂಡ್ ಅವರ ಪುತ್ರ ಕಾಂತೇಶ್‌ಗೆ ಟಿಕೆಟ್ ನೀಡಲಿ ಎಂದು ಒತ್ತಾಯಿಸಿದರು.
ಕಳೆದ ೪೦ ವರ್ಷಗಳಿಂದ ಪಕ್ಷ ಕಟ್ಟಿ ಬೆಳೆಸಿದ ಒಬಿಸಿ ನಾಯಕನಿಗೆ ಹೈಕಮಾಂಡ್ ಅವಮಾನಿಸಿದೆ. ಟಿಕೆಟ್ ನೀಡದೆ ಇದ್ದಲ್ಲಿ ಬಿಜೆಪಿ ಪರವಾಗಿ ಯಾರೂ ಕೂಡ ಕೆಲಸ ಮಾಡುವುದಿಲ್ಲ. ಸಾಮೂಹಿಕ ವಾಗಿ ಪಕ್ಷಕ್ಕೆ ರಾಜೀನಾಮೆ ನೀಡು ತ್ತೇವೆ ಎಂದು ಆಕ್ರೋಶ ವ್ಯಕ್ತಪ ಡಿಸಿದ್ದಲ್ಲದೆ ನಗರಾಧ್ಯಕ್ಷ ಜಗದೀಶ್ ಅವರಿಗೆ ಕೆಲ ಪದಾಧಿಕಾರಿಗಳು ರಾಜೀನಾಮೆ ಪತ್ರವನ್ನೂ ನೀಡಿ ದರು.
ಈ ಸಂದರ್ಭದಲ್ಲಿ ಬಿಜೆಪಿ ಕಚೇರಿ ಮುಂದೆ ಸ್ವಲ್ಪ ಕಾಲ ಗೊಂ ದಲದ ವಾತಾವರಣ ಉಂಟಾಗಿ ರಸ್ತೆ ಸಂಚಾರಕ್ಕೆ ಅಡ್ಡಿ ಆಯಿತು. ಬಿಜೆಪಿಯ ಹಿರಿಯ ನಾಯಕರು ಪ್ರತಿಭಟನಾ ನಿರತರಿಗೆ ಸಮಾಧಾನಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಎಸ್‌ಸಿ, ಎಸ್‌ಟಿ ಮೋರ್ಚಾದ ಶಿವಾಜಿ. ಲಿಂಗರಾಜು, ಉಮಾ ದೇವಿ, ಮೋಹನ್ ಮತ್ತಿತರರು ಇದ್ದರು.