ಜಿಲ್ಲಾ ಸುದ್ದಿತಾಜಾ ಸುದ್ದಿ

ಸಂಪ್ರದಾಯದಲ್ಲಿರುವ ಮಢ್ಯಗಳನ್ನು ಕಿತ್ತೆಸೆಯಿರಿ: ಬೆಕ್ಕಿನಕಲ್ಮಠ ಶ್ರೀಗಳು

Share Below Link

ಶಿವಮೊಗ್ಗ: ಭಾರತೀಯರು ಆಚರಿಸುವ ಪ್ರತಿವೊಂದು ಸಾಂಪ್ರ ದಾಯಿಕ ಆಚರಣೆಗಳ ಹಿಂದೆ ನಮ್ಮ ಪೂರ್ವಿಕರ ವೈeನಿಕ ಮತ್ತು ವೈಚಾರಿಕ ಚಿಂತನೆ ಅಡಗಿದೆ. ಹಾಗಾಗಿ ನಾವು ಸಾಂಪ್ರದಾಯಿಕ ಆಚರಣೆಗಳನ್ನು ವೈeನಿಕ ಹಾಗೂ ವೈಚಾರಿಕ ನೆಲೆಗಟ್ಟಿನಲ್ಲಿ ಆಚರಿ ಸುವ ಮೂಲಕ ಅವುಗಳೊಳಗೆ ತುರುಕಲಾಗಿರುವ ಮಢ್ಯಗಳನ್ನು ಕಿತ್ತೆಸೆಯಬೇಕಿದೆ ಎಂದು ಬೆಕ್ಕಿನ ಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೆಂದ್ರ ಸ್ವಾಮೀಜಿ ಕರೆ ನೀಡಿದರು.
ಶ್ರೀ ಮುರುಘರಾಜೇಂದ್ರ ಮಹಾಸಂಸ್ಥಾನ ಮಠ ಟ್ರಸ್ಟ್‌ನ ಗುರುಬಸವ ಅಧ್ಯಯನ ಪೀಠದ ವತಿಯಿಂದ ಟಿಎಂಎಇಎಸ್ ಆರ್ಯುವೇದ ಕಾಲೇಜು ಮತ್ತು ಆಸ್ಪತ್ರೆ, ಆದರ್ಶ ಎಜುಕೇಷನ್ ಮತ್ತು ಚಾರಿಟಬಲ್ ಟ್ರಸ್ಟ್‌ನ ಸಹಯೋಗದಲ್ಲಿ ತಾಲೂಕಿನ ನಿದಿಗೆಯಲ್ಲಿರುವ ಟಿಎಂಎಇಎಸ್ ಆರ್ಯುವೇದ ಕಾಲೇಜಿನಲ್ಲಿ ಇಂದು ಬೆಳಿಗ್ಗೆ ಹಮ್ಮಿಕೊಂಡಿದ್ದ ಶ್ರಾವಣ ಚಿಂತನ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಆಶೀರ್ವ ಚನ ನೀಡಿದರು.
ಆದರೆ ಆಚರಣೆಗಳನ್ನು ತಿರುಚಿ ಅವುಗಳಿಗೆ ಧಾರ್ಮಿಕ ಮಢ್ಯದ ಹಿನ್ನೆಲೆಯನ್ನು ಹೆಣೆಯ ಲಾಗಿದೆ. ಧಾರ್ಮಿಕ ಹಿನ್ನೆಲೆಯೊ ಂದಿಗೆ ಅನೇಕ ಬಗೆಯ ಮಢ್ಯ ಗಳನ್ನು ಜನಮನದಲ್ಲಿ ಬಿತ್ತಿzರೆ. ಇವುಗಳನ್ನು ದೂರ ಮಾಡಬೇಕು ಎಂದರು.
ಆಚಾರ- ವಿಚಾರ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಎಂ.ಎನ್. ಸುಂದರ ರಾಜ್, ಬದುಕಿನಲ್ಲಿ ಉತ್ತಮ ಆಚಾರ-ವಿಚಾರ ಅಳವಡಿಸಿಕೊಳ್ಳ ದಿದ್ದಲ್ಲಿ ಸಮಾಜ ದೂಷಿಸಲು ಪ್ರಾರಂಭಿಸುತ್ತದೆ. ಆಚಾರವೇ ಸ್ವರ್ಗ ಅನಾಚರವೇ ನರಕ ಎಂಬುದು ಜೀವನ ಮಲ್ಯವನ್ನು ತಿಳಿಸುವ ಅನುಭವದ ನುಡಿಮು ತ್ತಾಗಿದೆ ಎಂದರು.
ಕಾಯಕ, ದಾಸೋಹ ಮಹತ್ವ, ಜತ್ಯಾತೀತ ತತ್ವ, ಮಾನ ವಪರವಾದ ದೃಢ ವಿಶ್ವಾಸದಂತಹ ಮಲಿಕ ವಿಚಾರಗಳನ್ನು ವಚನ ಮೂಲಕ ಹರಡುವಲ್ಲಿ ವಚನಕಾ ರರು ಮಾಡಿದ ಆಂದೋಲನ ಇಂದಿಗೂ ಪ್ರಸ್ತುತ ಎಂದರು.
ಟಿಎಂಎಇಎಸ್ ಆರ್ಯು ವೇದ ಆಸ್ಪತ್ರೆ ಮತ್ತು ಕಾಲೇಜಿನ ಆಡಳಿತಾಧಿಕಾರಿ ಜಿ.ಎ.ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕ ಸಿ.ಯು. ಸೋಮ ಶೇಖರ್, ಡಾ.ನಾಗಾರ್ಜುನ, ವಿದ್ವಾನ್ ರೇಣುಕಾರಾಧ್ಯ, ಭಾಗವಹಿಸಿದ್ದರು.
ಪ್ರತಿಕ್ಷಾ ಮತ್ತು ಅನನ್ಯ ಪ್ರಾರ್ಥಿಸಿ, ಶಿಕ್ಷಕ ಹಾರನಹಳ್ಳಿ ಕರಿ ಬಸವಯ್ಯ ಸ್ವಾಗತಿಸಿ, ಸಂತೋಷ್ ಕುಮಾರ್ ನಿರೂಪಿಸಿದರು.