ಆರಾಮದಾಯಕ ವಲಯದಿಂದ ಹೊರಬಂದು ಸೃಜನಶೀಲತೆ ಮೈಗೂಡಿಸಿಕೊಳ್ಳಿ: ಸ್ವಾಮೀಜಿ
ಶಿವಮೊಗ್ಗ: ನಗರದ ಐಎಂಎ ಸಭಾಂಗಣದಲ್ಲಿ ನಡೆದ ಐಎಂಎ ವಾರ್ಷಿಕ ಚಟುವಟಿಕೆಗಳ ಕಾರ್ಯಕ್ರಮವನ್ನು ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ತುಮಕೂರು ಶಾಖೆಯ ಅಧ್ಯಕ ಶ್ರೀ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರು ಉದ್ಘಾಟಿಸಿದರು.
ನಂತರ ಮಾತನಾಡಿದ ಪೂಜ್ಯರು, ಸತ್ಸಂಗ ಹಾಗೂ ಧರ್ಮ ಗ್ರಂಥಗಳ ಅಧ್ಯಯನ ಇಂದಿನ ಜಂಜಾಟದ ಬದುಕಿನಲ್ಲಿ ಒತ್ತಡವನ್ನು ಹತ್ತಿಕ್ಕಲು ಅತ್ಯುತ್ತಮ ಮಾರ್ಗ ಎಂದರು.
ಹೋರಾಟವಿಲ್ಲದ ಬದುಕು ಕೆಚ್ಚಿನ ಕಿಚ್ಚು ಹಚ್ಚಲಾರದು; ಆರಾಮ ವಲಯದಿಂದ ಹೊರ ಬಂದು ಸೃಜನ ಶೀಲತೆಯನ್ನೂ ಸ್ವಾಭಾವಿಕತೆ ಯನ್ನೂ ಮೈಗೂಡಿಸಿ ಕೊಳ್ಳಲು ಕರೆ ನೀಡಿದರು.
ಧೃತಿಗೆಡದೆ ಮುನ್ನುಗ್ಗಲು ಸಮಾಜದಲ್ಲಿ ಯಾವುದೇ ಕಾರ್ಯಕ್ಕೂ ಮೊದಲು ಅಪಹಾಸ್ಯ ಕೊಂಕು, ಆನಂತರ ವಿರೋಧ, ಕಟ್ಟೆಕಡೆಯಲ್ಲಿಯೇ ಸ್ವೀಕಾರವನ್ನು ನಾವು ನಿರೀಕ್ಷಿಸಬೇಕಾಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ನೂತನ ಐಎಂಎ ಅಧ್ಯಕ್ಷ ಡಾ. ಸಿ ರಮೇಶ್ ಸ್ವಾಗತ ಕೋರಿದರು. ಉಪಾಧ್ಯಕ್ಷ ಡಾ. ಕೆ. ಆರ್. ರವೀಶ್ ಐಎಂಎ ನಡೆದು ಬಂದ ಹಾದಿಯನ್ನು ಪ್ರಸ್ತುತ ಪಡಿಸಿದರು. ಪೂರ್ವಾಧ್ಯಕ್ಷ ಡಾ. ಅರುಣ್ , ಹಾಲಿ ಕಾರ್ಯದರ್ಶಿ ಡಾ. ಅರವಿಂದ್, ಖಜಂಚಿ ಡಾ. ಶಶಿಧರ್ ಉಪಸ್ಥಿತರಿದ್ದರು. ಡಾ. ಅರವಿಂದ್ ವಂದಿಸಿದರು. ಡಾ. ವಿನಯ ಶ್ರೀನಿವಾಸ್ ಮತ್ತು ಡಾ. ಹಂಸವೇಣಿ ಕಾರ್ಯಕ್ರಮ ನಿರೂಪಿಸಿದರು.