ನಿವೃತ್ತಿ ನಂತರ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ…
ಶಿವಮೊಗ್ಗ : ನಿವೃತ್ತಿ ನಂತರದ ದಿನಗಳಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಕಚೇರಿ ಜಂಟಿ ನಿರ್ದೇಶಕ ಪ್ರೊ. ಕೇಶವ ಎಚ್ ಹೇಳಿದರು.

ಎಟಿಎನ್‌ಸಿಸಿ ಕಾಲೇಜಿನ ಫ್ರೆಂಡ್ಸ್ ಸೆಂಟರ್ ಸಭಾಂಗಣದಲ್ಲಿ ಜಿ ವಿಶ್ವವಿದ್ಯಾಲಯ ಮತ್ತು ಪದವಿ ಕಾಲೇಜು ನಿವೃತ್ತ ಅಧ್ಯಾಪಕರ ಸಂಘದಿಂದ ಆಯೋಜಿಸಿದ್ದ ವಾರ್ಷಿಕ ಸದಸ್ಯರ ಸಭೆ, ೮೦ ವರ್ಷ ಪೂರೈಸಿದ ಅಧ್ಯಾಪಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದ ಉತ್ತಮ ಕಾರ್ಯಗಳಲ್ಲಿ ಕೈಜೋಡಿಸಿ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದು ಕಷ್ಟಕರ ಕೆಲಸ. ಸಂಘದ ಅಭಿವೃದ್ಧಿಗೆ ಹಾಗೂ ಸಮಾಜಮುಖಿ ಕೆಲಸಗಳಿಗೆ ರಾಜ್ಯ ಸರ್ಕಾರಿ ನೌಕರರ ಸಂಘ ಸದಾ ಬೆಂಬಲಿಸುತ್ತದೆ ಎಂದು ಹೇಳಿದರು.
೮೦ ವರ್ಷ ಪೂರೈಸಿದ ಅಧ್ಯಾಪಕರಾದ ಪ್ರೊ. ಪಂಚಾಕ್ಷರಿ ಎಸ್., ಪ್ರೊ. ಚಂದ್ರಶೇಖರ ಎ.ಎಸ್., ಪ್ರೊ. ಜುಟ್ಟಿಯವರ ಎನ್.ಎಫ್., ಪ್ರೊ. ಪ್ರಭಾಕರ ಹೆಗಡೆ ಕೆ., ಪ್ರೊ. ನಂದಿಬಸಪ್ಪ ಸಿ.ಎನ್., ಪ್ರೊ. ಶಿವಲಿಂಗಪ್ಪ.ಎಚ್., ಪ್ರೊ. ಕುಮಾರಸ್ವಾಮಿ.ಬಿ.ಎಂ., ಪ್ರೊ.ಕಾಂತೇಶಮೂರ್ತಿ.ಕೆ.ಎನ್. ಹಾಗೂ ಕರ್ನಾಟಕ ಗ್ರಂಥಾಲಯ ರತ್ನ ಪ್ರಶಸ್ತಿ ವಿಜೇತ ಡಾ. ಬಿ.ಯು.ಕನ್ನಪ್ಪ, ಕೆಂಪೇಗೌಡ ಪ್ರಶಸ್ತಿ ವಿತೇಯ ಪ್ರೊ. ಟಿ.ಎಸ್.ಹೂವಯ್ಯಗೌಡ ಅವರನ್ನು ಸನ್ಮಾನಿಸಲಾಯಿತು.

ಜಿ ವಿಶ್ವವಿದ್ಯಾಲಯ ಮತ್ತು ಪದವಿ ಕಾಲೇಜು ನಿವೃತ್ತ ಅಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ. ಬಿ.ಸಿ.ಗೌಡರ ಶಿವಣ್ಣನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ಎಸ್.ಎಲ್.ಭೈರಪ್ಪ, ಸಂಘದ ಸದಸ್ಯರಾದ ಪ್ರೊ. ಚಂದ್ರಕಾಂತ್.ಜಿ., ಪ್ರೊ. ವಿಜಯಲಕ್ಷ್ಮೀ ಅವವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂಘದ ಪ್ರಧಾನ ಕಾರ್‍ಯದರ್ಶಿ ಡಾ. ಬಿ.ಯು.ಕನ್ನಪ್ಪ ವಾರ್ಷಿಕ ವರದಿ ಮಂಡಿಸಿದರು. ಪ್ರೊ. ಆರ್.ಮಂಜುನಾಥ, ಪ್ರೊ. ಎಂ. ಚಂದ್ರಪ್ಪ, ಪ್ರೊ. ಭೋಗೇಶ್ವರಪ್ಪ ಇತರರಿದ್ದರು.
