ಕೃಷಿ ವಿವಿ ವಿದ್ಯಾರ್ಥಿನಿಯರಿಂದ ಸಾಮಾನ್ಯ ಸಭೆ
ಶಿವಮೊಗ್ಗ : ಭದ್ರಾವತಿಯ ಮಾವಿನಕೆರೆಯಲ್ಲಿ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿeನ ಗಳ ವಿಶ್ವವಿದ್ಯಾಲಯ, ನವಿಲೆಯ ಕಷಿ ಮಹಾವಿದ್ಯಾಲಯ ಇವರ ಆಶ್ರಯದಲ್ಲಿ ವಿದ್ಯಾಲಯದ ವಿದ್ಯಾರ್ಥಿನಿಯರು ತಮ್ಮ ಕೃಷಿ ಕಾರ್ಯಾನುಭವದ ಸಾಮಾನ್ಯ ಸಭೆಯನ್ನು ಇತ್ತೀಚೆಗೆ ನಡೆಸಿದರು.
ಈ ಸಂದರ್ಭದಲ್ಲಿ ಕೃಷಿ ವಿಶ್ವ ವಿದ್ಯಾಲಯದಿಂದ ಬಿಡುಗಡೆಯಾದ ಅಡಿಕೆ ಸಮಗ್ರ ಕಷಿ ಪುಸ್ತಕವನ್ನು ರೈತರಿಗೆ ನೀಡಿ ಕಷಿ ಬಗ್ಗೆ ಮಾಹಿತಿ ಕೊಡಲಾಯಿತು.
ಕಾರ್ಯಕ್ರಮದಲ್ಲಿ ಮಾವಿನಕೆರೆ ಪಂಚಾಯತಿ ಅಧ್ಯಕ್ಷ ಸುರೇಶ್, ಸದಸ್ಯರಾದ ಅಭಿನಂದನ್, ಶ್ರೀಧರ್ ಶೆಟ್ಟಿ ಹಾಗೂ ವಿದ್ಯಾಲಯದ ಬೇಸಾಯ ಶಾಸ್ತ್ರ ವಿeನಿ ಡಾ. ಗಿರಿಜೇಶ್, ಬೀಜಶಾಸ್ತ್ರ ವಿeನಿ ಡಾ. ಗಜೇಂದ್ರ ಹಾಗೂ ಊರಿನ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.