ಜಿಲ್ಲಾ ಸುದ್ದಿತಾಜಾ ಸುದ್ದಿ

ಶಿವಮೊಗ್ಗ ದಸರಾಕ್ಕೆ ಆಗಮಿಸಿದ ಗಜಪಡೆಗೆ ಗೌರವಪೂರ್ವಕ ಸ್ವಾಗತ…

Share Below Link

ಶಿವಮೊಗ್ಗ : ಶಿವಮೊಗ್ಗ ನಾಡಹಬ್ಬ ದಸರಾ ಮಹೋತ್ಸವ – ೨೦೨೫ರ ವೈಭವವನ್ನು ಹೆಚ್ಚಿಸಲಿರುವ ಗಜಪಡೆಯು ಇಂದು ಸಕರೆಬೈಲಿನಿಂದ ನಗರಕ್ಕೆ ಆಗಮಿಸಿದ್ದು, ವಾಸವಿ ಶಾಲೆಯ ಆವರಣದಲ್ಲಿ ಸಕಲ ಪೂಜ ಪುನಸ್ಕಾರಗಳೊಂದಿಗೆ ಹಾಗೂ ಗೌರವಪೂರ್ಣ ಸ್ವಾಗತ ದೊಂದಿಗೆ ಗಜಪಡೆಯನ್ನು ಶಾಸಕ ಚನ್ನಬಸಪ್ಪ ಬರಮಾಡಿಕೊಂಡರು.
ಮೈಸೂರು ಹೊರತುಪಡಿಸಿ ಜಂಬೂಸವಾರಿ ವೈಭವವನ್ನು ಕಣ್ತುಂಬಿಕೊಳ್ಳಬಹುದಾದ ಏಕೈಕ ನಗರವೆಂದರೆ ಶಿವಮೊಗ್ಗ. ದಸರಾ ಸಂಭ್ರಮದ ಪ್ರಮುಖ ಆಕರ್ಷಣೆಯಾದ ಈ ಗಜಪಡೆಯು ಶಿವಮೊಗ್ಗ ದಸರಾಕ್ಕೆ ಶೋಭೆ ತಂದಿದ್ದು, ಶಿವಮೊಗ್ಗ ದಸರಾ ಮಹೋತ್ಸವವನ್ನು ಕೇವಲ ನಗರ ಮಟ್ಟದ ಹಬ್ಬವಲ್ಲದೆ, ರಾಜ್ಯದ ಸಾಂಸ್ಕೃತಿಕ ಅಸ್ತಿತ್ವವನ್ನು ಪ್ರತಿನಿಧಿಸುವ ಭವ್ಯ ನಾಡಹಬ್ಬವನ್ನಾಗಿ ರೂಪಿಸುತ್ತಿದೆ.