ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಪದವೀಧರ ಕ್ಷೇತ್ರದಿಂದ ಡಾ| ಸರ್ಜಿ – ಶಿಕ್ಷಕರ ಕ್ಷೇತ್ರದಿಂದ ಭೋಜೇಗೌಡರಿಗೆ ಭರ್ಜರಿ ಗೆಲುವು

Share Below Link

ಮೈಸೂರು : ರಾಜ್ಯದ ವಿಧಾನ ಪರಿಷತ್‌ನ ಮೂರು ಶಿಕ್ಷಕರ ಹಾಗೂ ಮೂರು ಪದವೀಧರ ಕ್ಷೇತ್ರಗಳ ಮತ ಎಣಿಕೆ ಪೂರ್ಣ ಗೊಂಡಿದ್ದು, ಐದು ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದೆ. ಕಾಂಗ್ರೆಸ್, ಜೆಡಿಎಸ್ ತಲಾ ೨ ಕ್ಷೇತ್ರಗಳಲ್ಲಿ ಹಾಗೂ ಬಿಜೆಪಿ ಒಂದು ಕ್ಷೇತ್ರದಲ್ಲಿ ಜಯಗಳಿಸಿವೆ.
ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಸ್.ಎಲ್. ಭೋಜೇಗೌಡ (೫,೨೬೭)ಅವರು ಮೊದಲ ಪ್ರಾಶಸ್ತ್ಯದ ಮತಗಳ ಗೆಲುವು ಸಾಧಿಸಿ ಎರಡನೇ ಬಾರಿಗೆ ಮೇಲನೆ ಪ್ರವೇಶಿಸಿzರೆ.
ಒಟ್ಟು ೯,೮೨೯ ಮತ ಗಳಿಸಿದ ಭೋಜೇಗೌಡ ಅವರು, ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಗೆಲುವು ಸಾಧಿಸಿದರು. ಕಾಂಗ್ರೆಸ್‌ನ ಕೆ.ಕೆ. ಮಂಜುನಾಥ್ ೪ಸ೫೬೨, ಪಕ್ಷೇತರ ಅಭ್ಯರ್ಥಿ ಎಸ್.ಆರ್. ಹರೀಶ್ ಆಚರ್ಯ ೨,೧೦೧ ಮತಗಳನ್ನು ಪಡೆಯುವ ಮೂಲಕ ೨ ಮತ್ತು ೩ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ೮೨೧ ಮತಗಳು ತಿರಸ್ಕೃತಗೊಂಡವು.


ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಪರಿಷತ್ ಪ್ರವೇಶಿಸುತ್ತಿರುವ ಮೈತ್ರಿ ಅಭ್ಯರ್ಥಿ ಜೆಡಿಎಸ್‌ನ ಎಸ್.ಎಲ್. ಭೋಜೇಗೌಡರನ್ನು ಮಾಜಿ ಸಚಿವ ಜಿ.ಟಿ. ದೇವೇಗೌಡ, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಜೆಡಿಎಸ್ ಮುಖಂಡ ರಾಕೇಶ್ ಡಿಸೋಜ, ಜೆಡಿಎಸ್ ಯುವ ಜಿಲ್ಲಾ ಕಾರ್‍ಯಾಧ್ಯಕ್ಷ ಎಸ್.ಎಲ್. ನಿಖಿಲ್, ಜಿಲ್ಲಾ ವಕ್ತಾರ ನರಸಿಂಹ ಗಂಧದ ಮನೆ ಸೇರಿದಂತೆ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅಭಿನಂದಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ವಿಜೇತರಾಗಿದ್ದು, ಸಮೀಪ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಪರಾಭವ ಗೊಂಡಿzರೆ. ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್‌ಗೆ ಮೂರನೇ ಸ್ಥಾನಕ್ಕೆ ಹಾಗೂ ಕಾಂಗ್ರೆಸ್‌ಗೆ ಸೆಡ್ಡು ಹೊಡೆದು ಸ್ಪರ್ಧಿಸಿದ್ದ ಎಸ್.ಪಿ. ದಿನೇಶ್ ೪ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ಮೈಸೂರಿನ ಮಹಾರಾಣಿ ಕಾಲೇಜ್‌ನಲ್ಲಿ ನಿನ್ನೆ ಮತ ಎಣಿಕೆ ಕಾರ್ಯ ನಡೆಯಿತು. ಒಟ್ಟು ಐದು ಸುತ್ತುಗಳ ಮತ ಎಣಿಕೆ ನಂತರ ಚಲಾವಣೆಯಾದ ಮತಗಳಲ್ಲಿ ಶೇ.೫೦ಕ್ಕೂ ಹೆಚ್ಚು ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಗಳಿಸುವ ಮೂಲಕ ಶಿವಮೊಗ್ಗದ ಖ್ಯಾತ ಮಕ್ಕಳ ತಜ್ಞವೈದ್ಯ, ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ| ಧನಂಜಯ ಸರ್ಜಿ ಅವರು ಸ್ವಪಕ್ಷೀಯರ ಬಂಡಾಯದ ನಡುವೆಯೂ ಅಚ್ಚರಿಯ ರೀತಿ ಯಲ್ಲಿ ಭರ್ಜರಿ ಗೆಲುವು ದಾಖಸಿದ್ದಾರೆ.
ನಿನ್ನೆ ಮಧ್ಯರಾತ್ರಿ ಮತ ಎಣಿಕೆ ಮುಕ್ತಾಯಗೊಂಡಿದ್ದು, ಡಾ| ಧನಂಜಯ ಸರ್ಜಿ ಅವರು ಚಲಾವಣೆಯಾದ ೫೭,೯೮೦ ಮತಗಳಲ್ಲಿ ೩೫,೪೩೪ ಪ್ರಥಮ ಪ್ರಾಶಸ್ತ್ಯ ಮತ ಗಳಿಸಿ ಭರ್ಜರಿ ಗೆಲುವು ಸಾಧಿಸಿದರು. ಅವರ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಅವರಿಗೆ ೧೨,೬೭೨ ಪ್ರಥಮ ಪ್ರಾಶಸ್ತ್ಯದ ಮತಗಳು ದೊರೆತರೆ, ಪಕ್ಷೇತರರಾಗಿ ಸ್ಪರ್ಧಿಸಿದ್ದ ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಅವರಿಗೆ ೬,೮೫೩ ಹಾಗೂ ಮತ್ತೋರ್ವ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎಸ್.ಪಿ. ದಿನೇಶ್ ಅವರಿಗೆ ೨,೩೮೪ ಮತಗಳು ಪಡೆದು ಹೀನಾಯ ಸೋಲು ಅನುಭವಿಸಿ ದರು. ಚಲಾವಣೆಯಾದ ೬೨,೭೫೦ ಮತಗಳಲ್ಲಿ ೪,೭೭೦ ಮತಗಳು ಅನರ್ಹವಾದವು.
ಮೈಸೂರಿನ ಮತ ಎಣಿಕೆ ಕೇಂದ್ರದಲ್ಲಿ ಡಾ| ಧನಂಜಯ ಸರ್ಜಿ ಗೆಲುವು ನಿರ್ಧಾರವಾಗುತ್ತಿ ದ್ದಂತೆಯೇ ಜೆಡಿಎಸ್ ಮುಖಂಡ ರಾಕೇಶ್ ಡಿಸೋಜ, ಜೆಡಿಎಸ್ ಯುವ ಘಟಕದ ಜಿಲ್ಲಾ ಕಾರ್‍ಯಾಧ್ಯಕ್ಷ ಎಸ್.ಎಲ್. ನಿಖಿಲ್ ಅವರು ಸರ್ಜಿ ಅವರನ್ನು ಅಭಿನಂದಿಸಿದರು. ನಂತರ ಡಾ| ಸರ್ಜಿ ಅವರು ಮತ ಎಣಿಕೆ ಕೇಂದ್ರದಲ್ಲಿ ಹೊರಬರುತ್ತಿ ದ್ದಂತೆ ಬಿಜೆಪಿ- ಜೆಡಿಎಸ್ ಮುಖಂಡರು ಪಟಾಕಿ ಸಿಡಿಸಿ ಅವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಶ್ರೀಮತಿ ನಮಿತಾ ಸರ್ಜಿ, ಹರ್ಷ ಸರ್ಜಿ, ಶ್ರೀಮತಿ ನಾಗವೇಣಿ ಸರ್ಜಿ ಹಾಗೂ ವಿಧಾನಪರಿಷತ್ ಶಾಸಕ ಡಿ.ಎಸ್. ಅರುಣ್, ಬಿಜೆಪಿ ರಾಜ್ಯ ಪ್ರಕೋಷ್ಠಗಳ ಸಂಯೋಜಕ ಎಸ್. ದತ್ತಾತ್ರಿ, ಮಾಜಿ ನಗರಸಭಾ ಅಧ್ಯಕ್ಷ ಎನ್.ಜೆ. ರಾಜಶೇಖರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದ ವಿನ್ಸೆಂಟ್ ರೋಡ್ರಿಗಸ್, ಸಿ.ಹೆಚ್. ಮಾಲತೇಶ್, ಶಿವರಾಜ್, ಸುರೇಖಾ ಮುರಳೀಧರ್, ಎನ್.ಡಿ. ಸತೀಶ್ ಇನ್ನಿತರರು ಉಪಸ್ಥಿತರಿದ್ದರು.
ಭವ್ಯ ಸ್ವಾಗತ: ಪ್ರಪ್ರಥಮ ಬಾರಿಗೆ ನೈರುತ್ಯ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್ ಶಾಸಕರಾಗಿ ಪ್ರಚಂಡ ಗೆಲುವು ಸಾಧಿಸಿರುವ ಡಾ| ಧನಂಜಯ ಸರ್ಜಿ ಅವರು ಇಂದು ಸಂಜೆ ಸುಮಾರು ೫.೩೦ಕ್ಕೆ ಶಿವಮೊಗ್ಗ ನಗರಕ್ಕೆ ಆಗಮಿಸಲಿದ್ದು, ನಗರದ ಶ್ರೀ ಬೆಕ್ಕಿನ ಕಲ್ಮಠದಿಂದ ಬಿ.ಹೆಚ್. ರಸ್ತೆ ಮಾರ್ಗವಾಗಿ ಜಾನಪದ ಕಲಾತಂಡ ಹಾಗೂ ಬೈಕ್ ಮತ್ತು ವಾಹನಗಳೊಂದಿಗೆ ಬೃಹತ್ ವಿಜಯದ ಮೆರವಣಿಗೆ ಮೂಲಕ ಅವರನ್ನು ಬಿಜೆಪಿ ಕಛೇರಿವರೆಗೆ ಕರೆ ತರಲಾಗುತ್ತಿದ್ದು, ಬಿಜೆಪಿ- ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು ಅಧಿಕ ಸಂಖ್ಯೆ ಯಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ.
ಬೆಂಗಳೂರು ಪದವೀಧರ ಕ್ಷೇತ್ರದ ಮತ ಎಣಿಕೆ ತಡರಾತ್ರಿವರೆಗೂ ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ರಾಮೋಜಿ ಗೌಡ ೩೬,೭೨೯ ಮತಗಳನ್ನು ಪಡೆದು ಜಯಗಳಿಸಿzರೆ.
ಬಿಜೆಪಿ ಅಭ್ಯರ್ಥಿ ಅ. ದೇವೇ ಗೌಡ ಅವರು ೩೪,೮೮೮ ಮತ ಗಳನ್ನು ಪಡೆದು ಪರಾಭವ ಗೊಂಡಿzರೆ. ೧೧,೮೪೧ ಮತಗಳ ಅಂತರದಿಂದ ರಾಮೋಜಿ ಗೌಡ ಚುನಾಯಿತರಾಗಿzರೆ. ಚಲಾವಣೆಯಾಗಿದ್ದ ೮೦,೦೮೦ ಮತಗಳಲ್ಲಿ ೮,೪೮೨ ಮತಗಳು ತಿರಸ್ಕೃತಗೊಂಡಿ ದ್ದವು. ೭೧,೫೯೮ ಮತಗಳು ಸಿಂಧುವಾಗಿದ್ದವು.
ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್ ಜಯಗಳಿಸಿದ್ದು, ಬಿಜೆಪಿ ಅಭ್ಯರ್ಥಿ ವೈ.ಎ. ನಾರಾಯಣಸ್ವಾಮಿ ಪರಾಭವ ಗೊಂಡಿzರೆ. ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕೆ.ವಿವೇಕಾನಂದ ಅವರು ಮೊದಲ ಪ್ರಾಶಸ್ತ್ಯದ ಮತಗಳ ಜಯ ಗಳಿಸಿzರೆ. ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಅವರಿಗೆ ಸೋಲುಂಟಾಗಿದೆ.
ಲೋಕಸಭಾ ಚುನಾವಣೆ ಯಂತೆ ವಿಧಾನ ಪರಿಷತ್ ಚುನಾವಣೆಯಲ್ಲೂ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದವು. ಜೆಡಿಎಸ್ ಎರಡೂ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರೆ, ಬಿಜೆಪಿ ಎರಡು ಕ್ಷೇತ್ರ ಸೋತಿದ್ದು, ಒಂದು ಕ್ಷೇತ್ರದಲ್ಲಿ ಜಯಗಳಿಸಿದೆ. ಆದರೆ, ಆಡಳಿತಾರೂಢ ಕಾಂಗ್ರೆಸ್ ೬ ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿ ಮೂರು ಕ್ಷೇತ್ರಗಳಲ್ಲಿ ಸೋತು ಎರಡು ಕ್ಷೇತ್ರಗಳಲ್ಲಿ ಜಯಗಳಿಸಿದೆ.

Leave a Reply

Your email address will not be published. Required fields are marked *