ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಕೃಷಿ ಮೇಳದಲ್ಲಿ ಉಚಿತ ಕಾನೂನು ಸಲಹೆ…

Share Below Link

ಶಿವಮೊಗ್ಗ : ನಗರದಲ್ಲಿ ನ.೭ರಿಂದ ಆರಂಭಗೊಂಡಿರುವ ಕೃಷಿ ಮೇಳದಲ್ಲಿ ಜಿ ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತ ಕಾನೂನು ಅರಿವು ಮತ್ತು ಸಲಹೆ ನೀಡಲಾಗುತ್ತದೆ.
ನ.೭ರಿಂದ ೧೦ರವರೆಗೆ ಜರುಗುವ ಕೃಷಿ ಮೇಳದಲ್ಲಿ ಜಿ ಕಾನೂನು ಸೇವೆಗಳ ಪ್ರಾಧಿಕಾರದಿಂದ ಸಾರ್ವಜನಿಕರಿಗೆ ಉಚಿತವಾಗಿ ಕಾನೂನು ಸಲಹೆ ಮತ್ತು ಕಾನೂನು ಅರಿವನ್ನು ನೀಡುವ ದೃಷ್ಟಿಯಿಂದ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಕಾನೂನು ಸಲಹಾ ಕೇಂದ್ರ ವನ್ನು ಜಿ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ| ಸಂತೋಷ್ ಅವರು ಉದ್ಘಾಟಿಸಿದರು. ಈ ಕಾನೂನು ಸಲಹಾ ಕೇಂದ್ರದಲ್ಲಿ ನಾಲ್ಕು ದಿನಗಳ ಕಾಲ ಪ್ರಾಧಿಕಾರದ ಪ್ಯಾನಲ್ ವಕೀಲರು, ಕಾನೂನು ನೆರವು ಅಭಿರಕ್ಷಕರು ಹಾಗೂ ಸ್ಟೈಫಂಡ್ ವಕೀಲರು ಸಾರ್ವಜನಿಕರಿಗೆ ಕಾನೂನು ಸಲಹೆಯನ್ನು ಮತ್ತು ಕಾನೂನು ಅರಿವನ್ನು ನೀಡುವುದರ ಜೊತೆಗೆ ಕಾನೂನು ಸೇವಾ ಪ್ರಾಧಿಕಾರ ನೀಡುವಂತಹ ಸೇವೆಗಳ ಬಗ್ಗೆ ಅರಿವು ಮೂಡಿಸಲು ಪ್ರಾಧಿಕಾರದಿಂದ ನಿಯೋಜಿಸಲಾಗಿದೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾನೂನು ಸಲಹಾ ಕೇಂದ್ರಕ್ಕೆ ಖುzಗಿ ಭೇಟಿಕೊಟ್ಟು ಕಾನೂನು ಸೇವಾ ಪ್ರಾಧಿಕಾರದ ಸೇವೆಗಳ ಬಗ್ಗೆ ಮತ್ತು ಕಾನೂನಿನ ಬಗ್ಗೆ ಅರಿವು ಪಡೆದುಕೊಳ್ಳುವುದರ ಜೊತೆಗೆ ತಮಗಿರುವಂತಹ ಕಾನೂನು ಸಮಸ್ಯೆಗಳ ಬಗ್ಗೆ ಸಲಹೆಯನ್ನು ಉಚಿತವಾಗಿ ಪಡೆದುಕೊಳ್ಳುವಂತೆ ಶಿವಮೊಗ್ಗ ಜಿ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ| ಸಂತೋಷ ಎಂ. ಎಸ್. ಅವರು ಕೋರಿದ್ದಾರೆ.