ಸಹ್ಯಾದ್ರಿ ಕಾಲೇಜ್ನಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ…
ಶಿವಮೊಗ್ಗ : ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಇಂದು ಎನ್ಎಸ್ಎಸ್ ಘಟಕ-೧ ಮತ್ತು ೨ರ ಸಹಯೋಗದಲ್ಲಿ ಕಾಲೇಜಿನ ಅಧ್ಯಾಪಕ ಮತ್ತು ಅಧ್ಯಾಪಕೇತರ ನೌಕರರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತು.
ಶಿಬಿರಕ್ಕೆ ಚಾಲನೆ ನೀಡಿ, ಮಾತ ನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಸಿರಾಜ್ ಅಹಮದ್ ದುಡಿಯುವ ದಾವಂತದಲ್ಲಿ ಮನುಷ್ಯ ತನ್ನ ಆರೋಗ್ಯವನ್ನು ನಿರ್ಲಕ್ಷಿಸುತ್ತಾನೆ ಇದು ಶಿಕ್ಷಣ ಸಂಸ್ಥೆಗೂ ಹೊರತಾಗಿಲ್ಲ, ಇಲ್ಲಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗಾಗಿ ವಿವಿಧ ಆಸ್ಪತ್ರೆಗಳ ಸಹಕಾರದಲ್ಲಿ ಆರೋಗ್ಯ ಶಿಬಿರ ಏರ್ಪಡಿಸಿದ್ದು, ಇದರ ಸದುಪ ಯೋಗ ಪಡೆದು ತಮ್ಮ ಆರೋಗ್ಯ ಮತ್ತು ಜೀವನಶೈಲಿನಲ್ಲಿ ಉತ್ತಮ ಪಡಿಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಕೆ.ಎನ್. ಮಂಜುನಾಥ್ ಮಾತನಾಡಿ, ಆರೋಗ್ಯವೇ ನಮ್ಮ ಸಂಪತ್ತು ನಮ್ಮ ಆರೋಗ್ಯ ನಮ್ಮ ಕೈಯಲ್ಲಿರುತ್ತದೆ. ಪ್ರತಿಯೊಬ್ಬರೂ ಆರೋಗ್ಯಕ್ಕೆ ಹೆಚ್ಚಿನ ಗಮನಕೊಡ ಬೇಕು. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಕೂಡ ಮುಖ್ಯವಾಗಿರುತ್ತದೆ. ಆರೋಗ್ಯ ವಂತ ಸಮಾಜದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಶಿಬಿರದಲ್ಲಿ ಸುಮಾರು ೫೦ಕ್ಕೂ ಹೆಚ್ಚು ಸಿಬ್ಬಂದಿಗಳು ಶಿಬಿರದ ಪ್ರಯೋಜನ ಪಡೆದರು. ಬೆಂಗಳೂ ರಿನ ಹೆಲ್ತ್ ಫ್ರೀ ಸಂಸ್ಥೆ, ಕಣ್ಣಿನ ವಿಭಾಗ, ಶಿವಮೊಗ್ಗದ ಉರೂಜ್ ದಂತ ಚಿಕಿತ್ಸಾಲಯ ಶಿಬಿರದಲ್ಲಿ ಭಾಗವಹಿಸಿ ತಪಾಸಣೆ ನಡೆಸಿದರು.
ಮಧುಮೇಹ, ಹಿಮೋಗ್ಲೋ ಬಿನ್, ಬಿಪಿ, ಕಣ್ಣಿನದೃಷ್ಟಿ, ಥೈರಾಯ್ಡ್, ದಂತ ಪರೀಕ್ಷೆ ತಪಾಸಣೆ ಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಪ್ರಾಧ್ಯಾಪಕರುಗಳಾದ ಡಾ.ಬಿ.ಎಂ. ಚಂದ್ರಶೇಖರ್, ಡಾ. ಮಹಾದೇವ ಸ್ವಾಮಿ, ಡಾ. ಪ್ರಹ್ಲಾದಪ್ಪ, ಗಾಯಿತ್ರಿ ಪೂಜರ್ ಸೇರಿದಂತೆ ಹಲವರಿ ದ್ದರು.

