ಜಿಲ್ಲಾ ಸುದ್ದಿತಾಜಾ ಸುದ್ದಿ

ಶಿಕ್ಷಕರಿಗೆ ಫೋಕ್ಸೊ -ಜೆ.ಜೆ. ಆಕ್ಟ್ ಕುರಿತು ಮಾಹಿತಿ ಒದಗಿಸಿ…

Share Below Link

ಶಿವಮೊಗ್ಗ : ಇತ್ತೀಚೆಗೆ ಸಾಗರ ತಾಲೂಕು ಕೇಂದ್ರದ ಖಾಸಗಿ ವಸತಿ ಶಾಲೆಯೊಂದರಲ್ಲಿ ಅಪ್ರಾಪ್ತ ಬಾಲಕಿಯ ಅಸಹಜ ಸಾವಿನ ಘಟನೆಗೆ ಸಂಬಂಸಿದಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಪದಾಕಾರಿಗಳು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿ, ವಾಸ್ತವ ಸಂಗತಿಗಳ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು.
ನಂತರ ಅವರು ಶಿವಮೊಗ್ಗದ ಜಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಿದ್ದ ಸಂಬಂತ ವಿವಿಧ ಇಲಾಖೆಗಳ ಜಿ ಮಟ್ಟದ ಅಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಆಯೋಗದ ಸದಸ್ಯ ವೆಂಕಟೇಶ್ ಅವರು ಮಾತನಾಡಿ, ಜಿಯಲ್ಲಿ ನಡೆಯುವ ಇಂತಹ ಘಟನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ, ಸಕಾಲದಲ್ಲಿ ಅಗತ್ಯ ಕ್ರಮ ವಹಿಸುವಂತೆ ಜಿ ರಕ್ಷಣಾಕಾರಿಗಳಿಗೆ ಸೂಚಿಸಿದ ಅವರು, ಘಟನೆಗೆ ಸಂಬಂಸಿದಂತೆ ಈವರೆಗೆ ಜಿಡಳಿತ ಕೈಗೊಂಡಿರುವ ಕ್ರಮಗಳ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.
ಪ್ರಸ್ತುತ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಸುರಕ್ಷತೆ ಹಾಗೂ ಭವಿಷ್ಯದ ದೃಷ್ಠಿಯಿಂದ ಮಕ್ಕಳ ಪೋಷಕರ ಅನುಮತಿ ಪಡೆದು, ಸಮೀಪದ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ತಂಗಿದ್ದು, ಶೈಕ್ಷಣಿಕ ಚಟುವಟಿಕೆಗಳನ್ನು ಮುಂದುವರೆ ಸಲು ಅಗತ್ಯ ಕ್ರಮ ವಹಿಸುವಂತೆ ಅಕಾರಿಗಳಿಗೆ ಸೂಚಿಸಿದ ಅವರು, ಸದರಿ ಶಿಕ್ಷಣ ಸಂಸ್ಥೆಯಲ್ಲಿ ನೆರೆ ರಾಜ್ಯದ ಈರ್ವ ವಿದ್ಯಾರ್ಥಿಗಳಿದ್ದು, ಅವರ ಸುರಕ್ಷತೆ ಮತ್ತು ಶಿಕ್ಷಣಕ್ಕೆ ಗಮನಹರಿಸಬೇಕು. ಅಗತ್ಯವಿದ್ದಲ್ಲಿ ಮಕ್ಕಳನ್ನು ತಮ್ಮ ಹುಟ್ಟೂರಿಗೆ ಕಳುಹಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಜಿಯಲ್ಲಿ ನಡೆಸುತ್ತಿರುವ ಖಾಸಗಿ ವಸತಿ ಶಿಕ್ಷಣ ಸಂಸ್ಥೆಗಳ ಆಡಳಿತ ಪ್ರತಿನಿಗಳೊಂದಿಗೆ ಈ ರೀತಿಯ ಅಹಿತಕರ ಘಟನೆಗಳಾಗ ದಂತೆ ಕ್ರಮ ವಹಿಸಲು ಶೀಘ್ರದಲ್ಲಿ ದಿನಾಂಕ ನಿಗಪಡಿಸಿ ಸಭೆ ಆಯೋಜಿಸುವಂತೆ ಸಲಹೆ ನೀಡಿದ ಅವರು, ಪಂಚಾಯಿತಿ ಮಟ್ಟದಲ್ಲಿ ಮಕ್ಕಳ ರಕ್ಷಣಾ ಸಮಿತಿಗಳನ್ನು ಮಕ್ಕಳ ರಕ್ಷಣಾ ಸಮಿತಿಗಳನ್ನು ರಚಿಸಿ, ಮಕ್ಕಳ ರಕ್ಷಣಗೆ ಕ್ರಮ ವಹಿಸುವಂತೆ ಜಿಪಂ ಸಿಇಓ ಕ್ರಮ ಕೈಗೊಳ್ಳಬೇಕು. ಅಲ್ಲಿನ ಸಿಬ್ಬಂಗಳಿಗೆ ಸೂಕ್ತ ತರಬೇತಿ ನೀಡಬೇಕು. ಶಿಕ್ಷಕರಿಗೆ ಫೋಕ್ಸೊ ಮತ್ತು ಜೆ.ಜೆ. ಆಕ್ಟ್‌ನ ಕುರಿತು ಮಾಹಿತಿ ಒದಗಿಸುವ ಅಗತ್ಯವಿದೆ ಎಂದವರು ನುಡಿದರು.
ಸದರಿ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎ ಮಕ್ಕಳ ಸ್ಥಿತಿಗತಿಗಳ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿದ ಅವರು, ಈ ವರದಿಯ ಆಧಾರದ ಮೇಲೆ ಮಕ್ಕಳಿಗೆ ಸರ್ಕಾರದ ಸೌಲಭ್ಯಗಳನ್ನು ದೊರಕಿಸಲು ಸಾಧ್ಯವಾಗಲಿದೆ. ಈ ಘಟನೆಯ ವಾಸ್ತವಾಂಶ ಅರಿತು ಕ್ರಮ ಕೈಗೊಳ್ಳಲು ಕೂಡಲೆ ತನಿಖಾ ಸಮಿತಿ ರಚಿಸುವಂತೆ ಅವರು ಸೂಚಿಸಿದರು.
ಘಟನೆಯ ನಂತರ ಸದರಿ ಶಾಲೆಗೆ ನೀಡಲಾಗಿದ್ದ ಮಾನ್ಯತೆ ಯನ್ನು ರದ್ದುಪಡಿಸಲಾಗಿದೆ. ಅಲ್ಲದೇ ಈ ಘಟನೆಗೆ ಮುನ್ನವೇ ಜಿಯಲ್ಲಿನ ಖಾಸಗಿ ವಸತಿ ಶಿಕ್ಷಣ ಸಂಸ್ಥೆಗಳ ಕುರಿತು ಗಮನಹರಿಸಲು ವಿವಿಧ ಇಲಾಖೆಗಳ ಜಿ ಮಟ್ಟದ ಅಕಾರಿಗಳನ್ನು ನಿಯೋಜಿಸಲಾ ಗಿದ್ದು, ಅವರಿಂದ ಕಾಲಕಾಲಕ್ಕೆ ಮಾಹಿತಿ ಪಡೆಯಲಾಗುತ್ತಿದೆ ಎಂದು ಜಿಕಾರಿ ಡಾ|| ಆರ್. ಸೆಲ್ವಮಣಿ ಅವರು ಹೇಳಿದರು.
ಪ್ರಸ್ತುತ ಮೃತ ವಿದ್ಯಾರ್ಥಿ ನಿಯ ಪೋಷಕರಿಗೆ ಪರಿಹಾರ ಧನ ವಿತರಿಸಲಾಗುವುದು ಎಂದ ಅವರು, ಖಾಸಗಿ ಶಿಕ್ಷಣ ಸಂಸ್ಥೆಗಳು ಜೆ.ಜೆ.ಆಕ್ಟ್‌ನಡಿಯಲ್ಲಿ ನೋಂದಾ ಯಿಸಿಕೊಳ್ಳಲು ಕಾನೂನನ್ನು ರೂಪಿಸಿ, ಅನುಷ್ಠಾನಕ್ಕೆ ತರುವ ಅಗತ್ಯವಿದೆ ಎಂದು ಜಿಕಾರಿಗಳು ಅಭಿಪ್ರಾಯಪಟ್ಟರು.
ತಂಡದ ಸದಸ್ಯರು ಘಟನೆ ನಡೆದ ವಸತಿ ಶಾಲೆಗೆ ಭೇಟಿ ಅಲ್ಲಿನ ಸ್ಥಿತಿಗತಿಗಳನ್ನು ಖುದ್ದು ಪರಿಶೀ ಲಿಸಿ, ಅಲ್ಲಿನ ನ್ಯೂನತೆಗಳನ್ನು ಗಮ ನಿಸಿzರೆ. ವಿಶೇಷವಾಗಿ ಮೂಲ ಭೂತ ಸೌಕರ್ಯಗಳ ಕೊರತೆ, ವಸತಿ ಸಮಸ್ಯೆ, ಕಲಿಕಾ ಸಾಮ ಗ್ರಿಗಳ ಕೊರತೆ, ಸುರಕ್ಷತಾ ಕ್ರಮ ಗಳಿಲ್ಲ ದಿರುವುದು, ದಿನಂಪೂರ್ತಿ ಕಾರ್ಯನಿರ್ವಹಿಸಲು ಮಹಿಳಾ ಸಿಬ್ಬಂದಿಗಳಿಲ್ಲದಿರುವುದು ಸೇರಿ ದಂತೆ ಇಂತಹ ಅನೇಕ ವಿಷಯ ಗಳನ್ನು ಗಮನಿಸಿದೆ ಎಂದರು.
ಸಭೆಯಲ್ಲಿ ಮಕ್ಕಳ ರಕ್ಷಣಾ ಆಯೋಗದ ಸದಸ್ಯರಾದ ಶ್ರೀಮತಿ ಎಸ್.ಮಂಜು, ಡಾ|| ತಿಪ್ಪೇಸ್ವಾಮಿ ಕೆ.ಟಿ., ಜಿಪಂ ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ, ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್, ಜಿ ಆರ್.ಸಿ.ಹೆಚ್. ಅಕಾರಿ ಡಾ|| ನಾಗರಾಜನಾಯ್ಕ್, ಡಾ|| ಮಲ್ಲಿಕಾರ್ಜುನ ಗೌಡ, ಡಿಡಿಪಿಐ ಪರಮೇಶ್ವರಪ್ಪ, ಸಮಾಜ ಕಲ್ಯಾಣಾಕಾರಿ ಶ್ರೀನಿವಾಸ್, ಹಿಂದುಳಿದ ವರ್ಗಗಳ ಜಿ ಅಕಾರಿ ಶ್ರೀಮತಿ ಶೋಭಾ, ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷೆ ಶ್ರೀಮತಿ ರೇಖಾ ಮತ್ತಿತರರು ಉಪಸ್ಥಿತರಿ ದ್ದರು.