ಮಾಜಿ ಉಪ ಮೇಯರ್ ಸುರೇಖಾರಿಗೆ ರೋಟರಿ ಸೆಂಟ್ರಲ್‌ನಿಂದ ಸನ್ಮಾನ…
ಶಿವಮೊಗ್ಗ : ಸಾಧಕರನ್ನು ಗುರುತಿಸಿ ಗೌರವಿಸುವುದರಿಂದ ಸಮಾಜದ ಇತರರಿಗೂ ಪ್ರೇರಣೆ ದೊರಕುತ್ತದೆ ಎಂದು ರೋಟರಿ ಜಿ ಗವರ್ನರ್ ದೇವ್ ಆನಂದ್ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್‌ನಿಂದ ಆಯೋಜಿಸಿದ್ದ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಧಕರನ್ನು ಗುರುತಸಿ ಸನ್ಮಾನ ಮಾಡುವುದು ನಿಜವಾಗಿಯೂ ಅನನ್ಯ ಮತ್ತು ಅರ್ಥಪೂರ್ಣ. ನಾವು ಯಾವುದೇ ಒಂದು ಕಾರ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ನಿರಂತರ ಪರಿಶ್ರಮ ಮತ್ತು ಪ್ರಯತ್ನ ಬಹಳ ಮುಖ್ಯ. ಈ ಸಾಧಕರನ್ನು ನಾವು ಸಮಾಜಕ್ಕೆ ಪರಿಚಯಿಸುವು ದರ ಮೂಲಕ ಲಕ್ಷಾಂತರ ಜನಕ್ಕೆ ಪ್ರೇರಣೆ ಸಿಗುತ್ತದೆ. ಒಳ್ಳೆಯ ಸಮಾಜಮುಖಿ ಕಾರ್ಯಕ್ರಮ. ಸಾಧಕರನ್ನು ಗುರುತಿಸಿ ಗೌರವಿಸಿ ಮೂಲಕ ಅವರ ಸೇವೆ ಹೆಚ್ಚಾಗುವಂತೆ ಮಾಡುವ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ರೋಟರಿ ಕ್ಲಬ್ ಶಿಮೊಗ್ಗ ಸೆಂಟ್ರಲ್ ಸದಸ್ಯೆ, ಮಾಜಿ ಉಪ ಮೇಯರ್ ಸುರೇಖಾ ಮುರುಳಿಧರ್, ಅಂತರರಾಷ್ಟ್ರೀಯ ಈಜುಗಾರ ಮೋತಿನಾಯಕ್, ರಾಷ್ಟ್ರೀಯ ಕುಸ್ತಿ ಪಟು ಕವಿನಾ ಅವರನ್ನು ಸನ್ಮಾನಿಸಲಾಯಿತು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಲಯ ಸಹಾಯಕ ಗವರ್ನರ್ ಸುರೇಶ್ ಎಚ್.ಎಂ. ಮತ್ತು ಕಾರ್ಯದರ್ಶಿ ಈಶ್ವರ್ ಉಪಸ್ಥಿತರಿದ್ದರು.
ಪ್ರಮುಖರಾದ ಜೆ.ಎನ್ ಪ್ರಕಾಶ್, ಚಂದ್ರಶೇಖರ್, ರವಿ ಕೊಟೋಜಿ, ಚೂಡಾಮಣಿ ಪವಾರ್, ಆನಂದ್ ಎಸ್ ಜಿ , ವಿಜಯಕುಮಾರ್.ಜಿ ಇನ್ನಿತರರಿದ್ದರು.

