ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಹಿಂದುತ್ವ ಪ್ರತಿಪಾದಿಸುವ ಮಾಜಿ ಸಿಎಂಗಳು ಹಿಂದುಳಿದ ವರ್ಗಗಳನ್ನೇ ಮರೆತಿದ್ದಾರೆ: ತೀನಾಶ್ರೀ

Share Below Link

ಶಿವಮೊಗ್ಗ : ಕಾಂತರಾಜ್ ಆಯೋಗದ ವರದಿ ವಿರೋಧಿಗಳನ್ನು ಚುನಾವಣೆಯಲ್ಲಿ ಸೋಲಿಸ ಬೇಕು ಎಂದು ಜಿ ಹಿಂದುಳಿದ ಜನಜಗೃತಿ ವೇದಿಕೆಯ ಅಧ್ಯಕ್ಷ ತೀ.ನಾ. ಶ್ರೀನಿವಾಸ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂತರಾಜ್ ಆಯೋಗದ ವರದಿ ಯನ್ನು ಜರಿಗೆ ತರುವಲ್ಲಿ ಎ ಸರ್ಕಾರಗಳು ವಿಫಲವಾಗಿವೆ. ಅದರಲ್ಲೂ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ, ಯಡಿ ಯೂರಪ್ಪ ಅವರು ಕೂಡ ಜರಿಗೆ ತರಲಿಲ್ಲ. ಮಾಜಿ ಮಂತ್ರಿ ಯೊಬ್ಬರು ಕಾಂತರಾಜ್ ವರದಿ ಯನ್ನು ಬೆಂಕಿಗೆ ಹಾಕಬೇಕು ಎಂದಿದ್ದರು. ಹಿಂದುತ್ವ ಪ್ರತಿಪಾದಿಸುವ ಮೂವರು ಮಾಜಿ ಮುಖ್ಯಮಂತ್ರಿಗಳು ಹಿಂದುಳಿದ ವರ್ಗಗಳನ್ನೇ ಮರೆತು ಬಿಟ್ಟಿದ್ದರು ಎಂದರು.
ಹಿಂದುಳಿದ ವರ್ಗಗಳ ಬಗ್ಗೆ ಅಸಡ್ಡೆ ರಾಜಕಾರಣಿಗಳಿಗೆ ಇದೆ. ಅದು ಜರಿಯಾಗದಂತೆ ತಡೆ ಯುವ ಪ್ರಯತ್ನವನ್ನು ಮಾಡುತ್ತಲೇ ಬರಲಾಗಿದೆ. ಹಿರಿಯ ರಾಜಕಾರಣಿ ಯೊಬ್ಬರು ಕಾಂತರಾಜ್ ಆಯೋ ಗದ ವರದಿ ಕಸದ ಬುಟ್ಟಿಯಲ್ಲಿ ಬಿದ್ದಿದೆ ಎಂದು ಹೀಯಾಳಿಸಿದ್ದರು. ಸಿದ್ಧರಾಮಯ್ಯ ಅವರು ಕಾಂತರಾಜ್ ವರದಿಯನ್ನು ಜರಿಗೆ ತಂದೇ ತರುತ್ತೇವೆ ಎಂದು ಮಾತು ಕೊಟ್ಟಿದ್ದರು. ಆದರೂ ವರದಿ ಜರಿಗೆ ಬರಲೇ ಇಲ್ಲ ಎಂದರು.
ಕರ ಪತ್ರ ಬಿಡುಗಡೆ :
ಕಾಂತರಾಜ್ ಆಯೋಗದ ವರದಿ ವಿರೋಧಿಗಳನ್ನು ಚುನಾವಣೆ ಯಲ್ಲಿ ಸೋಲಿಸಿ ಮನೆಗೆ ಕಳಿಸುವಂತೆ ಜಗೃತಿ ಮೂಡಿಸಲು ಏ. ೨೧ ರಂದು ಬೆಳಗ್ಗೆ ೧೧ ಗಂಟೆಗೆ ಪ್ರೆಸ್ ಕ್ಲಬ್ ನಲ್ಲಿ ಕರಪತ್ರ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಗೃತಿ ವೇದಿಕೆಯ ಗೌರವಾಧ್ಯಕ್ಷ ಪ್ರೊ. ಹೆಚ್. ರಾಚಪ್ಪ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮೈಸೂರಿನ ಉರಿಲಿಂಗಪೆದ್ದಿ ಮಠದ eನಪ್ರಕಾಶ ಸ್ವಾಮೀಜಿ ಕರಪತ್ರ ಬಿಡುಗಡೆ ಮಾಡುವರು. ಮುಖ್ಯ ಅತಿಥಿಗಳಾಗಿ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಪ್ರೊ. ಆರ್. ಮಹದೇವಪ್ಪ, ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ. ಎ.ಬಿ. ರಾಮಚಂದ್ರಪ್ಪ ಮುಂತಾದವರು ಉಪಸ್ಥಿತರಿರುವರು ಎಂದರು.
ಪ್ರಮುಖರಾದ ವಿಜಯ ಕುಮಾರ್, ಪ್ರೊ. ಜಿ. ಪರಮೇಶ್ವರಪ್ಪ, ಉಮೇಶ್ ಯಾದವ್, ಪ್ರೊ. ಪ್ರಭಾಕರ್, ಬಿ. ಜನಮೇಜಿರಾವ್, ಆರ್.ಟಿ. ನಟರಾಜ್ ಮುಂತಾದವರಿದ್ದರು.