ಮಾಜಿ ಸಿಎಂ ಜೆ.ಹೆಚ್.ಪಟೇಲರ ವಿವಿ ಅಥವಾ ಅಕಾಡೆಮಿ ಸ್ಥಾಪಿಸಿ: ಒತ್ತಾಯ

ಭದ್ರಾವತಿ : ರಾಜಕೀಯ ಮುತ್ಸದಿ ಧೀಮಂತ ರಾಜಕಾರಣಿ ಮಾಜಿ ಸಿಎಂ ಜೆ.ಹೆಚ್. ಪಟೇಲರ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ ಅಥವಾ ಅಸ್ಥಿತ್ವದಲ್ಲಿರುವ ವಿವಿಗಳಲ್ಲಿ ಅವರ ಹೆಸರಿನಲ್ಲಿ ಅಕಾಡೆಮಿ ಸ್ಥಾಪನೆ ಮಾಡಿ ಯುವ ಪೀಳಿಗೆಗೆ ಅವರ ಆಡಳಿತ ವೈಖರಿಯ ಇತಿಹಾಸ ತಿಳಿಸಬೇಕಾಗಿದೆ ಎಂದು ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್. ಗೌಡ ಸರಕಾರವನ್ನು ಒತ್ತಾಯಿಸಿದರು.
ಅವರು ಈ ಬಗ್ಗೆ ಮಾಹಿತಿ ನೀಡಿ ಪಟೇಲರು ಸಂಸದರಾಗಿzಗ ಲೋಕಸಭೆಯಲ್ಲಿ ಕನ್ನಡದಲ್ಲಿ ಮಾತನಾಡಿದ ಅಪ್ಪಟ ಕನ್ನಡ ಭಾಷಾಭಿಮಾನಿ, ಮುಖ್ಯಮಂತ್ರಿ ಆದಾಗ ಹಾಸ್ಯ ಚಟಾಕಿ ಹಾರಿಸುತ್ತಾ ಶಾಸನ ಸಭೆಯನ್ನೇ ನಕ್ಕು ನಗಿಸುತ್ತಾ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಎಂಹತ ಗಂಭೀರ ಪರಿಸ್ಥಿತಿ ಇದ್ದರೂ ಅದನ್ನು ಲೀಲಾಜಲವಾಗಿ ಎದುರಿಸಿ ಅದನ್ನು ತಿಳಿಗೊಳಿಸುವ ಜಣ್ಮೆ ಅವರಲ್ಲಿತ್ತು. ಇದು ಹಲವಾರು ಭಾರಿ ಸಾಬೀತಾಗಿದೆ ಎಂದರು.

ಜತ್ಯಾತೀತ, ಧರ್ಮಾತೀತ ಮನೋಭಾವ ಹೊತ್ತು ಸಾಮಾಜಿಕ ನ್ಯಾಯದ ಹರಿಕಾರರಾಗಿ ಬಡವ ಬಲ್ಲಿದ ರೈತ ಕಾರ್ಮಿಕರಿಗೆ ನ್ಯಾಯ ಒದಗಿಸುತ್ತಿದ್ದ ಸಮಾಜವಾದಿ ಚಿಂತನೆಯ ಪಟೇಲರ ಆಡಳಿತವನ್ನು ಇಂದಿನ ಪ್ರತಿಯೊಬ್ಬರೂ ಅರಿಯಬೇಕಾಗಿದೆ ಎಂದ ಅವರು, ಯುವ ಪೀಳಿಗೆಗೆ ಅವರು ಮಾಡಿದ ಸಾಮಾಜಿಕ ನ್ಯಾಯದ ಕಾರ್ಯಗಳು ಚಿಂತನೆಗಳು, ಅವರ ಜೀವನ ಚರಿತ್ರೆಗಳನ್ನು ತಿಳಿಸಿ ಉಳಿಸಬೇಕಾಗಿದೆ ಎಂದರು.
ನಂತರ ತಹಸೀಲ್ದಾರ್ ಮೂಲಕ ಸರಕಾರವನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಬಿ.ಕೆ.ಮೋಹನ್, ಪೌರಾಯುಕ್ತ ಕೆ.ಎನ್.ಹೇಮಂತ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು, ಆಶ್ರಯ ಸಮಿತಿ ಅದ್ಯಕ್ಷ ಗೋಪಾಲ್ ಮುಂತಾದವರಿದ್ದರು.
