ಆರೋಗ್ಯಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿದೇಶಶಿಕ್ಷಣ

ಅರಣ್ಯ ರಕ್ಷಣೆ ನಮ್ಮೆಲ್ಲರ ಹೊಣೆ: ಶಾಸಕ ಬಾಲಕೃಷ್ಣ…

Share Below Link

ಚನ್ನರಾಯಪಟ್ಟಣ : ದೇಶದಲ್ಲಿ ಅರಣ್ಯದ ಪ್ರಮಾಣ ಕಡಿಮೆಯಾಗುತ್ತಿದ್ದು, ಪ್ರಕೃತಿ ಸಮತೋಲನದ ರಕ್ಷಣೆ ಎಲ್ಲರ ಕರ್ತವ್ಯ ಎಂದು ಶಾಸಕ ಸಿ ಎನ್ ಬಾಲಕೃಷ್ಣ ಹೇಳಿzರೆ.
ಅವರು ಪಟ್ಟಣದ ಬೆಳಸಿಂದ ಶ್ರೀ ವನದಲ್ಲಿ ಅರಣ್ಯ ಇಲಾಖೆ ಆಯೋಜಿಸಿದ್ದ ಚಿನ್ನರ ವನದರ್ಶನ ಕಾರ್ಯಕ್ರಮದ ಪ್ರವಾಸಕ್ಕೆ ಹೊರಟ ಬಾಗೂರು ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಪರಿಸರ ಕುರಿತಾದ ಕಿಟ್ ವಿತರಿಸಿ ಮಾತನಾಡಿದರು.
ಅರಣ್ಯವಿದ್ದರೆ ಉತ್ತಮ ಗಾಳಿ ಮಳೆ ಆಗುತ್ತದೆ. ಮನುಷ್ಯ ಹಾಗೂ ಪ್ರಾಣಿಗಳ ನಡುವೆ ಸಂಘರ್ಷ ಆಗಬಾರದು. ಮರ-ಗಿಡಗಳ ಹಾಗೂ ಪ್ರಾಣಿಗಳ ಸಂಕುಲನ ಉಳಿಸಬೇಕು. ಕಾಡಂಚಿನ ಪ್ರದೇಶಗಳಲ್ಲಿ ಭೂಕಬಳಿಕೆ ಮಾನವ ಪ್ರಾಣಿ ಸಂಘರ್ಷವಾಗುತ್ತಿದೆ, ಇದು ನಿಲ್ಲಬೇಕು, ಭವಿಷ್ಯದ ದೃಷ್ಟಿಯಿಂದ ಮಕ್ಕಳಿಗೆ ಈ ರೀತಿಯ ವನದರ್ಶನ ಕಾರ್ಯಕ್ರಮ ಅರಣ್ಯ ಇಲಾಖೆ ಹಮ್ಮಿಕೊಂಡಿದೆ, ಮಕ್ಕಳಲ್ಲಿ ಪರಿಸರದ ಬಗ್ಗೆ ಜಗೃತಿ ಉಂಟು ಮಾಡುತ್ತಿದೆ ಎಂದರು.
ಅರಣ್ಯ ಇಲಾಖೆಯ ಅಧಿಕಾರಿ ಎಸಿ ಎಫ್ ಖಲಂದರ್, ಮಕ್ಕಳಿಗೆ ಪರಿಸರ ರಕ್ಷಣೆಯ ಬಗ್ಗೆ ಮಾಹಿತಿ ನೀಡಿ ತಾಲೂಕಿನಲ್ಲಿ ಶೇ.೪ರಷ್ಟು ಮಾತ್ರ ಅರಣ್ಯ ರಾಜ್ಯದಲ್ಲಿ ಶೇ. ೧೯ ರಷ್ಟು ಮಾತ್ರವಿದೆ, ಕಾಡನ್ನು ಉಳಿಸಬೇಕು ಮರ-ಗಿಡಗಳನ್ನು ರಕ್ಷಿಸಬೇಕು ಮಕ್ಕಳಲ್ಲಿ ಪರಿಸರ eನ ಬೆಳೆಸಲು ಈ ರೀತಿಯ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.