ಜಿಲ್ಲೆಯಲ್ಲಿ ಮಾನವಹಕ್ಕುಗಳ ಪರಿಷತ್ ಅಸ್ಥಿತ್ವಕ್ಕೆ
ಶಿವಮೊಗ್ಗ: ಮಾನವ ಹಕ್ಕುಗಳ ರಕ್ಷಣೆಗಾಗಿ ಶಿವಮೊಗ್ಗದಲ್ಲಿ ರಾಷ್ಟ್ರೀಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್‌ನ ಜಿಲ್ಲಾ ಶಾಖೆ ಅಸ್ತಿತ್ವಕ್ಕೆ ಬಂದಿದೆ ಎಂದು ರಾಜ್ಯ ಉಪಾಧ್ಯಕ್ಷ ಶಶಿ ಕುಮಾರ್ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಈಗಾಗಲೇ ೨೦೧೯ ರಿಂದ ದೇಶದ ೧೦ ರಾಜ್ಯಗಳಲ್ಲಿ ಮಾನವ ಹಕ್ಕುಗಳ ಪರಿಷತ್ ಅಸ್ತಿತ್ವದಲ್ಲಿದೆ. ಅದರ ಜಿಲ್ಲಾ ಶಾಖೆಯನ್ನು ಅಬ್ದು ಲ್ ರಹೀಂ ಅವರ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ಸ್ಥಾಪಿಸಲಾಗಿದೆ. ಇಂದೇ ಪದಾಧಿಕಾರಿ ಗಳ ಆಯ್ಕೆ ನಡೆಯಲಿದೆ ಎಂದರು.
ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕು ಇದೆ. ಹಾಗೆಯೇ ಸಮಾನತೆ, ಶೋಷಣೆ ವಿರುದ್ಧ ಆರೋಗ್ಯ, ಧರ್ಮದ ಸ್ವಾತಂತ್ರ್ಯ ಮುಂತಾದ ಹಕ್ಕುಗಳ ರಕ್ಷಣೆಗಾಗಿ, ಬಡಜನರ ಕಂಬನಿ ಒರೆಸಲು, ಸರ್ಕಾರದ ಯೋಜನೆಗಳು ಸಮರ್ಥವಾಗಿ ತಲುಪಿಸಲು ಬಡವರಿಗೆ ನ್ಯಾಯ ಒದಗಿಸಲು ನಮ್ಮ ಸಂಘಟನೆ ಕೆಲಸ ಮಾಡುತ್ತದೆ ಎಂದರು.
ಯಾರು ಬೇಕಾದರೂ ತಮ್ಮ ಸಮಸ್ಯೆಗಳನ್ನು ನಮ್ಮ ಹತ್ತಿರ ಹೇಳಿಕೊಳ್ಳಬಹುದು. ಅವರ ಸಮಸ್ಯೆಗಳಿಗೆ ನಮ್ಮ ಸಂಘಟನೆ ಸ್ಪಂದಿಸುತ್ತದೆ. ಸೂಕ್ತ ರಕ್ಷಣೆ ಮತ್ತು ನೆರವು ನೀಡುತ್ತದೆ ಎಂದರು.
ಪೊಲೀಸ್ ಇಲಾಖೆಗಳಿಂದ ಆಗುವ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆಯೂ ನಾವು ಧ್ವನಿ ಎತ್ತುತ್ತೇವೆ ಗಮನಹರಿ ಸುತ್ತೇವೆ ಎಂದರು.
ನಿಯೋಜಿತ ಜಿಲ್ಲಾಧ್ಯಕ್ಷ ಅಬ್ದುಲ್ ರಹೀಂ, ಪ್ರಮುಖರಾದ ಗೋಪಿ ನಾಥ್, ರಾಘವೇಂದ್ರ, ಚೇತನ್, ಕವಿತಾ, ಕೌಸರ್ ಬಾನು, ಹುಲಗಿ ಕೃಷ್ಣ, ಅಖಿಲೇಶ್ ಇದ್ದರು.