ಜಿಲ್ಲಾ ಸುದ್ದಿತಾಜಾ ಸುದ್ದಿ

ಮಾರಿಕಾಂಬ ಜಾತ್ರಾ ಮಹೋತ್ಸವದಲ್ಲಿ ಅನ್ನದಾಸೋಹ…

Share Below Link

ಸಾಗರ : ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಶ್ರೀ ಮಾರಿಕಾಂಬಾ ಸಮಿತಿ ವತಿಯಿಂದ ಜಾತ್ರೆ ಅಂಗವಾಗಿ ಏರ್ಪಡಿಸಿರುವ ಪ್ರತಿದಿನದ ಅನ್ನದಾಸೋಹ ಭಕ್ತರಿಗೆ ಖುಷಿ ನೀಡಿದೆ.
ಭಕ್ತರಿಗೆ ಪ್ರತಿದಿನ ಸಿಹಿ, ಅನ್ನ ಸಾಂಬಾರು, ತಿಳಿಸಾರು, ಮೊಸರು, ಉಪ್ಪಿನಕಾಯಿ ಒದಗಿಸುತ್ತಿದ್ದು, ರಾತ್ರಿ ಹಾಗೂ ಬೆಳಿಗ್ಗೆ ತಿಂಡಿಯನ್ನೂ ನೀಡಲಾಗುತ್ತಿದೆ. ಪ್ರತಿದಿನ ಸುಮಾರು ೧೫ ಸಾವಿರ ಭಕ್ತರು ಅನ್ನದಾಸೋಹದಲ್ಲಿ ತಮ್ಮ ಹಸಿವನ್ನು ನೀಗಿಸಿಕೊಳ್ಳುತ್ತಿzರೆ. ಊಟಕ್ಕೆ ಕ್ಯೂನಲ್ಲಿ ಬಂದು ಒಂದು ಕಡೆಯಿಂದ ಬಂದು ಮತ್ತೊಂದು ಕಡೆಯಿಂದ ಹೋಗುವ ಉತ್ತಮ ವ್ಯವಸ್ಥೆ ಮಾಡಿzವೆ ಎಂದು ದಾಸೋಹ ಸಮಿತಿಯ ಕೆ.ವಿ.ಜಯರಾಮ್ ತಿಳಿಸಿದರು.
ಚಾರೋಡಿ ಕೊಂಕಣಿ ಆಚಾರ್ ಸಮಾಜದ ಪ್ರಮುಖರಾದ ಕೃಷ್ಣಮೂರ್ತಿ ವಾಮನಾಚಾರ್ ಕೂಡ ದಾಸೋಹದ ವ್ಯವಸ್ಥೆಯಲ್ಲಿ ತೊಡಗಿಕೊಂಡಿದ್ದು, ಸಾಮಾನ್ಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿ zರೆ. ಮಧ್ಯಾಹ್ನ ೪ ಗಂಟೆವರೆಗೂ ಊಟ ನೀಡಲಾಗುತ್ತದೆ. ಪೊಲೀಸರು, ಕಾರ್ಯಕರ್ತರು, ಸಾರ್ವಜನಿಕರು ಬರುತ್ತಿzರೆ ಎಂದರು.