ಕಾನೂನು ನಿಯಮಗಳನ್ನು ಪಾಲಿಸಿ ಲೇವಾದೇವಿ ಮಾಡಿ…
ಶಿವಮೊಗ್ಗ : ದೇಶದ ಆರ್ಥಿಕತೆಗೆ ಫೈನಾನ್ಸಿಯರ್‍ಸ್ ಕೊಡುಗೆ ಅಪಾರ. ಇತ್ತೀಚೆಗೆ ಫೈನಾನ್ಸ್ ನಿರ್ವಹಣೆ ಕಾನೂನಿನಲ್ಲಿ ಸಾಕಷ್ಟು ಬದಲಾವಣೆ ಆಗಿದ್ದು, ಕಾನೂನಿನ ನಿಯಮಗಳನ್ನು ಪಾಲಿಸಿ ವ್ಯವಹಾರ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಹೇಳಿದರು.
ನಗರದ ಕಂಟ್ರಿ ಕ್ಲಬ್‌ನಲ್ಲಿ ಅಖಿಲ ಕರ್ನಾಟಕ ಫೈನಾನ್ಸಿಯರ್‍ಸ್ ಅಸೋಸಿಯೇಷನ್, ಶಿವಮೊಗ್ಗ ಫೈನಾನ್ಸಿಯರ್‍ಸ್ ಅಸೋಸಿಯೇ ಷನ್ ನಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಫೈನಾನ್ಸಿಯರ್ ಸೆಮಿನಾರ್, ತೆರಿಗೆ, ಕಾನೂನು, ಲೇವಾದೇವಿ, ಚಿಟ್ಸ್ ಬಗ್ಗೆ ಮಾಹಿತಿ ಕಾರ್ಯಾಗಾರ, ಹಿರಿಯ ಲೇವಾದೇವಿಗಾರರಿಗೆ ಸನ್ಮಾನ ಮತ್ತು ಸನ್ಮಾನ ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬದಲಾಗುತ್ತಿರುವ ಕಾನೂನುಗಳ ಬಗ್ಗೆ ನಿರಂತರವಾಗಿ ಮಾಹಿತಿ ಹೊಂದಿರಬೇಕು. ಅದಕ್ಕೆ ಅನುಗುಣ ವಾಗಿ ಲೇವಾದೇವಿ ವ್ಯವಹಾರ ಗಳನ್ನು ಮಾಡಬೇಕು. ಹಣಕಾಸು ಸಂಘ ಸಂಸ್ಥೆಗಳಿಂದ ಸಾಲ ತೆಗೆದುಕೊಳ್ಳುವವರು ಸರಿಯಾದ ಉzಶಗಳಿಗೆ ಬಳಸಿಕೊಂಡು ಸಕಾಲದಲ್ಲಿ ಮರುಪಾವತಿ ಮಾಡಬೇಕು. ಇಂತಹ ಫೈನಾನ್ಸ್ ಸಂಸ್ಥೆಗಳು ಇಲ್ಲದಿದ್ದರೆ ಆರ್ಥಿಕ ವ್ಯವಹಾರ ತುಂಬಾ ಸಮಸ್ಯೆ ಆಗುತ್ತದೆ ಎಂದು ತಿಳಿಸಿದರು.
ಪೊಲೀಸ್ ಹೆಚ್ಚುವರಿ ಅಧೀಕ್ಷಕ ರಮೇಶ್ ಅವರು ಮಾತನಾಡಿ, ಪರವಾನಗಿ ಪಡೆಯದೆ ಲೇವಾ ದೇವಿ ಮಾಡಬೇಡಿ, ಕಾನೂನು ಗಳನ್ನು ಪಾಲಿಸಬೇಕು. ಸಾಲ ತೆಗೆದುಕೊಂಡವರಿಗೆ ತೊಂದರೆ ಕೊಡಬೇಡಿ, ಸಾಲ ಕೊಡುವಾಗ ಮರುಪಾವತಿ ಶಕ್ತಿ ಇದೆಯೇ ಎಂಬುದನ್ನು ಗಮನಿಸಿ ವ್ಯವಹಾರ ನಡೆಸಬೇಕು ಎಂದು ಹೇಳಿದರು.
ಸಹಕಾರಿ ಸಂಘಗಳ ಉಪ ವಿಭಾಗ ಸಹಾಯಕ ನಿಬಂಧಕ ಶ್ರೀನಿವಾಸ್ ಅವರು ಮಾತನಾಡಿ, ಕಾಲಕಾಲಕ್ಕೆ ಪರವಾನಗಿ ನವೀಕರಿಸಿ ಪುಸ್ತಕ ತಪಾಸಣೆ ಮಾಡಬೇಕು. ಖಾಲಿ ದಾಖಲಾತಿಗಳನ್ನು ತೆಗೆದು ಕೊಳ್ಳಬೇಡಿ, ಅಧಿಕ ಬಡ್ಡಿ ಪಡೆಯ ಬೇಡಿ ಎಂದರು.
ಸಂಸ್ಥೆಯ ರಾಜ್ಯಾಧ್ಯಕ್ಷ ಸಿ.ಕೆ. ಮೂರ್ತಿ ಮಾತನಾಡಿ, ಪ್ರತಿ ವರ್ಷ ವಿವಿಧ ಜಿಗಳಲ್ಲಿ ಇಂತಹ ಕಾರ್ಯಾಗಾರ ಹಮ್ಮಿಕೊಳ್ಳುವುದರ ಮೂಲಕ ಸಂಘಟನೆ ಬಲಪಡಿಸ ಲಾಗುತ್ತದೆ. ಇನ್ನೂ ಹೆಚ್ಚಿನ ಹೊಸ ಸದಸ್ಯರು ಸಂಸ್ಥೆಗೆ ಸೇರ್ಪಡೆ ಯಾಗಬೇಕು ಎಂದು ತಿಳಿಸಿದರು.
ಅಸೋಸಿಯೇಷನ್‌ನ ಜಿಲ್ಲಾಧ್ಯಕ್ಷ ಜಿ.ವಿಜಯಕುಮಾರ್ ಇನ್ನಿತರರಿದ್ದರು.
