ಜಿಲ್ಲಾ ಸುದ್ದಿತಾಜಾ ಸುದ್ದಿ

ಗಾಂಧೀಜಿಯವರ ಆದರ್ಶಗಳನ್ನು ಎಲ್ಲರೂ ಪಾಲಿಸಿ ..

Share Below Link

ಶಿವಮೊಗ್ಗ: ಗಾಂಧೀಜಿಯ ವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಭಾರತ ಸೇವಾದಳದ ಜಿಧ್ಯಕ್ಷ ವೈ.ಹೆಚ್. ನಾಗರಾಜ್ ಹೇಳಿದರು.
ಅವರು ಇಂದು ಭಾರತ ಸೇವಾ ದಳದ ಸಹಯೋಗದೊಂದಿಗೆ ಭೂಪಾಳಂ ಸರ್ಕಾರಿ ಶಾಲೆಯಲ್ಲಿ ಅಯೋಜಿಸಿದ್ದ ಗಾಂದಿಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದರು.
ಗಾಂಧೀಜಿಯನ್ನು ಇಡಿ ವಿಶ್ವವೇ ಮೆಚ್ಚಿದೆ. ಅವರ ಸತ್ಯ, ಅಹಿಂಸಾ ತತ್ವಗಳನ್ನು ನಾವು ಪಾಲಿಸಬೇಕಾಗಿದೆ. ನಡೆದಾಡುವ ದೇವರೇ ಅವರಾಗಿದ್ದರು. ಆದರೆ ಇತ್ತೀಚೆಗೆ ಗಾಂಧೀಜಿಯ ಬಗ್ಗೆ ಸಲ್ಲದ ವಿಚಾರಗಳು ಮೂಡುತ್ತಿವೆ. ಅದು ತಪ್ಪು. ಗಾಂಧಿ ಎಂದಿಗೂ ಸತ್ಯ. ಗಾಂಧೀಜಿಯಂತೆ ಲಾಲ್ ಬಹಾದ್ದೂರ್ ಶಾಸ್ತ್ರಿಗಳು ಕೂಡ ಈ ದೇಶದ ಕಣ್ಮಣಿಯಾಗಿzರೆ. ಅವರ ಹುಟ್ಟುಹಬ್ಬವೂ ಇಂದೇ ಆಗಿದೆ. ಇಬ್ಬರ ಆದರ್ಶಗಳನ್ನೂ ನಾವು ಪಾಲಿಸೋಣ ಎಂದ ಅವರು, ಭಾರತ ಸೇವಾದಳವು ಮಹಾಪುರುಷರ ಆದರ್ಶಗಳ ಕಾರ್ಯಕ್ರಗಳನ್ನು ನಡೆಸುತ್ತಾ ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶರಾವತಿ, ಶಿಕ್ಷಕರಾದ ಜಯಶ್ರೀ, ಸ್ನೇಹಾ, ಸೇವಾದಳದ ಕಾರ್ಯದರ್ಶಿ ಪ್ರಸನ್ನ, ಮುತ್ತು ನಾಯಕ್ ಸೇರಿದಂತೆ ಹಲವರಿ ದ್ದರು.