ಜಿಲ್ಲಾ ಸುದ್ದಿತಾಜಾ ಸುದ್ದಿ

ಕರ್ನಾಟಕ ಸುವರ್ಣ ಮಹೋತ್ಸವ ಕಾರ್ಯಕ್ರಮ ಪಠ್ಯದಲ್ಲಿ ಜನಪದ ಸಾಹಿತ್ಯ ಅಳವಡಿಸಬೇಕು

Share Below Link

ಹೊನ್ನಾಳಿ: ಜನಪದ ಸಾಹಿತ್ಯ ಕಲಾ ಪ್ರಕಾರಗಳನ್ನು ಪಠ್ಯದಲ್ಲಿ ಅಳವಡಿಸಿ ನಮ್ಮದೇಶಿ ಸಂಸ್ಕೃತಿ ಯನ್ನು ಮಕ್ಕಳಲ್ಲಿ ರೂಢಿಸಲು ಅನುವು ಮಾಡಿಕೊಡಬೇಕು ಎಂದು ಚೀಲೂರಿನ ರಾಷ್ಟ್ರೀಯ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕ ಎಲ್ಲಪ್ಪ ದೊಡ್ಡಕವಿ ಅವರು ಹೇಳಿದರು.


ಹೊನ್ನಾಳಿ ತಾಲೂಕು ಹೊಸಳ್ಳಿ ಗ್ರಾಮದಲ್ಲಿ ಕರ್ನಾಟಕ ನಾಮ ಕರಣ ೫೦ ವರ್ಷಗಳ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಹೊಸಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊನ್ನುಡಿ ಕನ್ನಡ ವೇದಿಕೆ ಆಯೋಜಿಸಿದ್ದ ಕಾರ್‍ಯಕ್ರಮದಲ್ಲಿ ಮುಖ್ಯ ಉಪನ್ಯಾ ಸಕರಾಗಿ ಮಾತನಾಡುತ್ತಾ, ನಮ್ಮ ಪೂರ್ವಜರ ಆಚಾರ ವಿಚಾರ ಜನಪದ ಸಾಹಿತ್ಯ ಕಲೆಗಳ ಕುರಿತು ಹಾಡು ಅಭಿನಯ ಮಾಡಿ ಮಾತ ನಾಡಿದರು ಜನಪದ ಪ್ರಕಾರಗ ಳಾದ ಜನಪದ ಗೀತೆ ಸೋಬಾನೆ ಪದ, ಒಗಟು, ಗಾದೆ,ವೀರಗಾಸೆ, ನೃತ್ಯ, ಮತ್ತು ದೇವರ ಪದಗಳು ಬೀಸೋ ಪದಗಳು ವೇದ ಪ್ರಕಾರದ ಜನಪದ ಕಲೆಗಳನ್ನು ಪ್ರಾಥಮಿಕ ಹಾಗೂ ಪ್ರೌಢ ಹಂತದ ವಿದ್ಯಾರ್ಥಿಗಳಿಗೆ ಪಠ್ಯ ದ ಅಳವಡಿಸಿ ಓದಿಸುವುದ ರಿಂದ ನಮ್ಮ ಪರಂಪರೆ ಉಳಿಯುತ್ತದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕ ರಾಜಶೇಖರಯ್ಯ ಕಾರ್ಯಕ್ರಮ ಉದ್ಘಾಟಿಸಿದರು ಕಾರ್ಯಕ್ರಮ ದಲ್ಲಿ ಪ್ರಾಸ್ತಾವಿಕವಾಗಿ ಮಾತನಾ ಡಿದ ಹೊನ್ನುಡಿ ಕನ್ನಡವೇದಿಕೆಯ ಸಂಘಟನಾ ಕಾರ್ಯದರ್ಶಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿವೃತ್ತ ಅಧಿಕಾರಿ ಮಂಜಪ್ಪ ಅವರು ಶಾಲಾ ಮಕ್ಕಳಿಗೆ ಸ್ಥಳೀಯ ಜನಪದ ಕಲಾವಿದರನ್ನು ಕರೆದು ಶಾಲೆಯಲ್ಲಿ ಜನಪದ ಗೀತೆ ಹಮ್ಮಿಕೊಂಡರೆ ಮಕ್ಕಳು ನಮ್ಮ ಪೂರ್ವಜರಲ್ಲಿದ್ದ ಜನಪರ ಸಾಹಿತ್ಯವನ್ನು ಅರಿವರು ಎಂದು ಹೇಳಿದರು ಕಾರ್ಯಕ್ರಮ ದಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ಗಿರಿಜಮ್ಮ, ಸದಸ್ಯರುಗಳಾದ ಚಂದ್ರಪ್ಪ ನಾಗರಾಜಪ್ಪ,ಹೊನ್ನುಡಿ ಕನ್ನಡ ವೇದಿಕೆ ಅಧ್ಯಕ್ಷ ಎಂಪಿಎಂ ಷಣ್ಮುಖಯ್ಯ,ಸಲಹಾ ಸಮಿತಿ ಸದಸ್ಯ ಎಂಎಸ್ ರೇವಣಪ್ಪ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ್ ಕಾರ್ಯದರ್ಶಿ ಪಾಲಾಕ್ಷಪ್ಪ ಮತ್ತು ಸಿಬ್ಬಂದಿ ವರ್ಗದವರು ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.