ಜಿಲ್ಲಾ ಸುದ್ದಿತಾಜಾ ಸುದ್ದಿ

ಜನಪದ ಸಾಹಿತ್ಯ ಭವಿಷ್ಯದ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿ …

Share Below Link

ಭದ್ರಾವತಿ : ಜನಪದ ಸಾಹಿತ್ಯ ಎಂಬುದು ಹೊಸದಾಗಿ ಯಾರಿಂದಲೂ ಸೃಷ್ಟಿಯಾಗಿಲ್ಲ. ಜನರಿಂದ ಜನರಿಗೆ ಹರಿದು ಬಂದಿರುವ ಸಾಹಿತ್ಯ ಇದಾಗಿದೆ. ಇಂತಹ ಸಾಹಿತ್ಯವನ್ನು ಇಂದಿನ ವರಿಗೆ ತಿಳಿಯಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜಧ್ಯಕ್ಷ ಬಿ. ಸಿದ್ದಬಸಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
ಹಳೇನಗರದ ಮಹಿಳಾ ಸೇವಾ ಸಮಾಜದ ಸಹಯೋಗದೊಂದಿಗೆ ಕರ್ನಾಟಕ ಜನಪದ ಪರಿಷತ್ ತಾಲೂಕು ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೨ ದಿನಗಳ ಜನಪದ ಗೀತೆಗಳ ಕಲಿಕಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದಿನನಿತ್ಯದ ಬದುಕಿನ ಚಟುವಟಿಕೆಗಳು ಸಾಹಿತ್ಯ ರೂಪವಾಗಿ ಹರಿದು ಬಂದಿವೆ. ಜನರಿಂದ ಜನರಿಗೆ ಹರಿದು ಬಂದಿರುವ ಈ ಸಾಹಿತ್ಯ ಭವಿಷ್ಯದ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿದೆ ಎಂದರು.
ಭದ್ರಾವತಿ ನಗರದ ಸಾಂಸ್ಕೃತಿಕ ವೈಭವ ಮರಳಿ ಪಡೆಯು ವಂತಾಗಬೇಕು. ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚಾಗಿ ನಡೆಯುವಂತಾಬೇಕು. ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್, ಜನಪದ ಪರಿಷತ್‌ಹಾಗು ಮಹಿಳಾ ಸೇವಾ ಸಮಾಜಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ರಂಗಕಲಾವಿದ ಹಾಗೂ ಭದ್ರಾವತಿ ಘಟಕದ ಅಧ್ಯಕ್ಷ ಬಿ. ಕಮಲಾಕರ್, ಮಹಿಳಾ ಸೇವಾ ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ್, ರಂಗಕಲಾವಿದರಾದ ವೈಕೆ ಹನುಮಂತಯ್ಯ, ಶಿವರಾಜ್, ಮೋಹನ್, ಜಯಲಕ್ಷ್ಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕರ್ನಾಟಕ ಜನಪದ ಪರಿಷತ್ ತಾಲೂಕು ಅಧ್ಯಕ್ಷ ಎಂ. ಆರ್ ರೇವಣಪ್ಪ ಅಧ್ಯಕ್ಷತೆ ವಹಿಸಿದ್ದರು. ಜನಪದ ಪರಿಷತ್ ಸದಸ್ಯ ದಿವಾಕರ್‌ಸ್ವಾಗತಿಸಿದರು. ಪ್ರಿಯಾಂಕ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಚಂದ್ರಶೇಖರಪ್ಪ ಚಕ್ರಸಾಲಿ ಆಶಯ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು.
ಮಹಿಳಾ ಸೇವಾ ಸಮಾಜದ ಪ್ರಮುಖರಾದ ಜಯಂತಿ ನಾಗರಾಜ್‌ಶೇಟ್, ಶೋಭಾ ಗಂಗಾರಾಜ್, ತಮಟೆ ಜಗದೀಶ್, ರವಿಕುಮಾರ್‌ಹಾಗು ವಿವಿಧ ಶಾಲೆಗಳ ಮಕ್ಕಳು ಉಪಸ್ಥಿತರಿದ್ದರು.