ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಜನಪದ ಕಲೆಗಳು ಆದಿಮರ ಜೀವದ್ರವ್ಯಗಳು : ಡಾ.ಚಂದ್ರಗುತ್ತಿ

Share Below Link

(ಹೊಸ ನಾವಿಕ)
ಶಿವಮೊಗ್ಗ : ಶಿವಮೊಗ್ಗದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಸಮಾಜಕಾರ್ಯ ವಿಭಾಗದಿಂದ ನಾಲ್ಕು ದಿನಗಳ ಕಾಲ ನಡೆದ ಹಸೆ ಚಿತ್ತಾರ ಕಲಿಕಾ ಶಿಬಿರದ ಸಮಾರೋಪ ನುಡಿಗಳನ್ನಾಡಿದ ಸಹ್ಯಾದ್ರಿ ಕಲಾ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ. ಮೋಹನ್ ಚಂದ್ರಗುತ್ತಿಯವರು ಹಸೆ ಚಿತ್ತಾರವು ಜನಪದ ಕಲಾ ಪ್ರಕಾರವಾಗಿದ್ದು ಸುಮಾರು ಹತ್ತು ಸಾವಿರ ವರ್ಷಗಳಷ್ಟು ಚರಿತ್ರೆಯನ್ನು ಹೊಂದಿದೆ. ಆದಿಮ ಸಮುದಾಯಗಳ ಜೀವ ದ್ರವ್ಯದಂತೆ ಇರುವ ಈ ಎ ಕಲೆಗಳು ಅಂದಿನ ಹಸಿವು – ಹರುಷ ಇವುಗಳ ಸಂಘರ್ಷದ ಮೂಲಕ ಮೂಡಿ ಬಂದ ಭಾವನಾ ಅಭಿವ್ಯಕ್ತಿಗಳು. ಪ್ರತಿಯೊಂದು ಹಸೆಗೂ ಅದರದ್ದೇ ಆದ ಶೈಲಿ, ಅರ್ಥ, ವ್ಯಾಖ್ಯಾನ ಹಾಗೂ ಸಾಮಾಜಿಕ ಮತ್ತು ಆರ್ಥಿಕ ಸಂದೇಶಗಳು ಇವೆ. ಇಂತಹ ಕಲೆಯ ಶಿಬಿರವನ್ನು ವಿದ್ಯಾರ್ಥಿ ಗಳಿಗೆ ಏರ್ಪಡಿಸಿರುವುದು ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಸಾಮಾಜೀಕರಣದ ಮುಖ್ಯ ಆಯಾಮವಾಗಿದೆ ಎಂದರು.
ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಹೆಗ್ಗೋಡಿನ ಚರಕ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಗೌರಮ್ಮನವರು ಹಸೆ ಕಲಿಕಾ ಶಿಬಿರವನ್ನು ಆಯೋಜಿಸಿರುವ ಮೊತ್ತ ಮೊದಲ ಕಾಲೇಜು ಎಂದು ಮೆಚ್ಚುಗೆ ಸೂಚಿಸಿದರು ಹಾಗೂ ವಿದ್ಯಾರ್ಥಿಗಳ ಕಲಿಕೆಯ ಆಸಕ್ತಿ ಮತ್ತು ಶ್ರಮವನ್ನು ಪ್ರಶಂಸಿಸಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ|ಸಂಧ್ಯಾ ಕಾವೇರಿ ವಹಿಸಿದ್ದರು. ಸಮಾರೋ ಪದಲ್ಲಿ ಶ್ರೀಮತಿ ಗೌರಮ್ಮ, ಎಂಸಿಸಿಎಸ್ ನಿರ್ದೇಶಕ ಡಾ. ರಾಜೇಂದ್ರ ಚೆನ್ನಿ, ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಮಂಜು ನಾಥ್ ಸ್ವಾಮಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಅಜಯ್ ನಿರೂಪಿಸಿ, ತನ್ಮಯಿ ಪ್ರಾರ್ಥಿಸಿ, ಮಮತಾ ಸ್ವಾಗತಿಸಿ, ಗೀತಾ ವಂದನಾರ್ಪಣೆ ಮಾಡಿದರು.