ಜಿಲ್ಲಾ ಸುದ್ದಿತಾಜಾ ಸುದ್ದಿ

ಫ್ರೆಂಡ್ಸ್ ಸೆಂಟರ್‌ನಿಂದ ಐದು ದಶಕಗಳ ಸಾರ್ಥಕ ಸಮಾಜಮುಖಿ ಸೇವೆ…

Share Below Link

ಶಿವಮೊಗ್ಗ : ಐದು ದಶಕಗಳಿಂದ ಸಮಾಜಮುಖಿ ಯಾಗಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆ ಫ್ರೆಂಡ್ಸ್ ಸೆಂಟರ್ ಆಗಿದ್ದು, ವೈವಿಧ್ಯ ಸೇವಾ ಕಾರ್ಯಗಳನ್ನು ನಿರಂತರ ವಾಗಿ ಹಮ್ಮಿಕೊಂಡು ಬರುತ್ತಿದೆ ಎಂದು ಫ್ರೆಂಡ್ಸ್ ಸೆಂಟರ್ ಸಂಸ್ಥಾಪಕ ಅಧ್ಯಕ್ಷ ಉಮಾಶಂಕರ್ ಹೇಳಿದರು.
ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಫ್ರೆಂಡ್ಸ್ ಸೆಂಟರ್ ವತಿಯಿಂದ ಆಯೋಜಿಸಿದ್ದ ಪ್ರವರ್ತಕರ ಸನ್ಮಾನ ಸಭೆ ಉzಶಿಸಿ ಮಾತನಾಡಿದ ಅವರು, ನಾಲ್ಕು ಜನರು ಸೇರಿ ಸ್ಥಾಪಿಸಿದ ಸಂಸ್ಥೆ ಇಂದು ರಾಜ್ಯದಲ್ಲಿ ಮಾದರಿಯಾಗಿ ಬೆಳೆದಿದೆ ಎಂದು ತಿಳಿಸಿದರು.
ಐದು ದಶಕಗಳಲ್ಲಿ ರಾಜ್ಯ ಮಟ್ಟದ ಚರ್ಚಾ ಸ್ಪರ್ಧೆ, ನೇತ್ರದಾನ, ರಕ್ತದಾನ ಶಿಬಿರ ಹಾಗೂ ಸಮಾಜಮುಖಿ ಕಾರ್ಯ ಗಳನ್ನು ಆಯೋಜಿಸಿ ಸಾರ್ವಜನಿಕರಿಗೆ ಉತ್ತಮ ಸೇವೆ ಮಾಡುತ್ತಿದೆ. ಇಂತಹ ಸಂಸ್ಥೆಯಲ್ಲಿ ನಗರದ ಗಣ್ಯರು ಸೇವೆ ಸಲ್ಲಿಸಿರು ವುದು ವಿಶೇಷ ಎಂದು ಅಭಿಪ್ರಾಯಪಟ್ಟರು.
ಫ್ರೆಂಡ್ಸ್ ಸೆಂಟರ್ ತುಂಬಾ ವಿಶೇಷವಾದ ಸಂಸ್ಥೆಯಾಗಿದ್ದು, ಬರುವ ದಿನಗಳಲ್ಲಿ ಇನ್ನೂ ಅನೇಕ ಸೇವಾ ಕಾರ್ಯಗಳನ್ನು ನಡೆಸಲಾ ಗುವುದು. ಇಂದಿಗೂ ಸಂಸ್ಥೆಯು ಉತ್ತಮ ಕಾರ್ಯ ಚಟುವಟಿಕೆ ಗಳಿಂದ ಕೂಡಿರುವುದು ಶ್ಲಾಘನೀಯ ಎಂದರು.
ಸ್ಥಾಪಕ ಪದಾಧಿಕಾರಿಗಳಾದ ಕೆ. ನರಸಿಂಹಮೂರ್ತಿ, ಬಿ. ಭಾರ್ಗವ ರಾವ್, ಸಿ.ಕೆ.ಶ್ರೀನಿವಾಸ್, ಧೃವಕುಮಾರ್ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಸನ್ಮಾನಿತರು ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವಗಳನ್ನು ಹಂಚಿಕೊಂಡರು.
ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಲೋಕೇಶ್ ಮಾತನಾಡಿ, ಎಲ್ಲ ಸಂಸ್ಥೆಗಳಿಗಿಂತ ಫ್ರೆಂಡ್ಸ್ ಸೆಂಟರ್ ವಿಶೇಷವಾದ ಸಂಸ್ಥೆಯಾಗಿ ಸಮಾಜ ದಲ್ಲಿ ಕೆಲಸ ಮಾಡುತ್ತಿದ್ದು, ಸೇವೆ ಹಾಗೂ ಸಾಹಿತ್ಯ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದೆ ಎಂದರು.
ಮಾಜಿ ಅಧ್ಯಕ್ಷರಾದ ಎಸ್. ದತ್ತಾತ್ರಿ, ಜಿ. ವಿಜಯಕುಮಾರ್, ವಿ. ನಾಗರಾಜ, ಜಿ. ಸತ್ಯನಾರಾಯಣ, ಟಿ.ಎನ್. ಲಕ್ಷ್ಮೀಕಾಂತ್, ಡಾ. ದೀಪಕ್, ಎಸ್. ವೆಂಕಟರಾಮ್, ವಿ.ಆರ್.ಅಡಿಗ, ಕಾರ್ಯದರ್ಶಿ ಮಲ್ಲಿಕಾರ್ಜುನ ಕಾನೂರು, ಮೋಹನಕುಮಾರ್ ಹಾಗೂ ಸದಸ್ಯರು ಭಾಗವಹಿಸಿದ್ದರು.

This image has an empty alt attribute; its file name is Arya-coll.gif