ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ಪ್ರತಿಷ್ಠಿತ ಎನ್‌ಯು ಆಸ್ಪತ್ರೆಯಿಂದ ಪ್ರಥಮ ಬಾರಿಗೆ ಯಶಸ್ವಿ ಕಿಡ್ನಿ ಟ್ರಾನ್ಸ್‌ಪ್ಲಾಂಟ್: ಡಾ| ಪ್ರವೀಣ್

Share Below Link

ಶಿವಮೊಗ್ಗ: ಎನ್.ಯು. ಆಸ್ಪತ್ರೆ ಸಮೂಹವು ಮಲೆನಾ ಡು ಭಾಗದಲ್ಲಿ ಮೊಟ್ಟ ಮೊದಲ ಬಾರಿಗೆ ಕಿಡ್ನಿ ಟ್ರಾನ್ಸ್ ಪ್ಲಾಂಟ್ (ಕಸಿ) ಶಸ್ತ್ರಚಿಕಿತ್ಸೆಯನ್ನು ಯಶಸ್ವಿ ಯಾಗಿ ನಡೆಸಿದ್ದು, ಈ ಭಾಗದ ರೋಗಿಗಳಲ್ಲಿ ಹೊಸ ಆಶಾಕಿರಣ ಮೂಡಿಸಿದೆ ಎಂದು ಆಸ್ಪತ್ರೆಯ ಕಿಡ್ನಿ ಟ್ರಾನ್ಸ್ ಪ್ಲಾಂಟ್ ತಜ್ಞ ವೈದ್ಯ ಹಾಗೂ ಸಹಾಯಕ ವೈದ್ಯ ಕೀಯ ನಿರ್ದೇಶಕ ಡಾ. ಪ್ರವೀ ಣ್ ಮಾಳವಧೆ ಹೇಳಿದರು.
ಅವರು ಇಂದು ಮಾಚೇನ ಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ರುವ ಎನ್.ಯು. ಆಸ್ಪತ್ರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಸ್ತ್ರಚಿಕಿತ್ಸೆಯ ಕುರಿತು ವಿವರಣೆ ನೀಡಿ ಎನ್.ಯು. ಆಸ್ಪತ್ರೆ ಮೂತ್ರ ರೋಗಕ್ಕೆ ಸಂಬಂಧಿಸಿದಂತೆ ವಿವಿಧ ಅತ್ಯಾಧುನಿಕ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆ ನೀಡು ತ್ತಾ ಬಂದಿದ್ದು, ಈಗ ಮೊದಲ ಬಾರಿ ಮೂತ್ರ ಪಿಂಡ ಟ್ರಾನ್ಸ್ ಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡಿ ಇತಿಹಾಸ ನಿರ್ಮಾಣ ಮಾಡಿದೆ ಎಂದರು.


ಈ ಶಸ್ತ್ರ ಚಿಕಿತ್ಸೆಗೆ ಒಳಗಾದ ವರು ಭದ್ರಾವತಿ ಮೂಲದ ೨೩ ವರ್ಷದ ಯುವತಿಯಾಗಿದ್ದಾರೆ, ನಮ್ಮ ಆಸ್ಪತ್ರೆಗೆ ದಾಖಲಾದ ಸಂದ ರ್ಭದಲ್ಲಿ ಮೂತ್ರ ವೈಫಲ್ಯವಾಗಿ ರುವುದು ಕಂಡು ಬಂದಿತು, ಯುವ ತಿಯ ಕುಟುಂಬಕ್ಕೆ ಮೂತ್ರಪಿಂಡ ದಾನ ಮಾಡಿದರೆ ಟ್ರಾನ್ಸ್ ಪ್ಲಾಂಟ್ ಶಸ್ತ್ರ ಚಿಕಿತ್ಸೆಯ ಮೂಲಕ ಗುಣ ಪಡಿಸಬಹುದು ಎಂದು ಹೇಳಿ ದೆವು. ಅದರಂತೆ ಅವರ ತಂದೆಯೇ ತಮ್ಮ ಮೂತ್ರಪಿಂಡ ದಾನ ಮಾಡಿ ದ್ದಾರೆ ಎಂದು ಡಾ. ಪ್ರವೀಣ್ ಮಾಳವಧೆ ತಿಳಿಸಿದರು.
ಏ.೨೬ ನಮಗೆ ಮಹತ್ವದ ದಿನ. ಆ ದಿನ ಅತ್ಯಾಧುನಿಕ ರೀತಿ ಯಲ್ಲಿ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಶಸ್ತ್ರ ಚಿಕಿತ್ಸೆಗೆ ನಮ್ಮ ಇಡೀ ಆಸ್ಪತ್ರೆಯ ವೈದ್ಯರು ಸಿದ್ಧರಾದರು. ಯಶಸ್ವಿ ಯಾಗಿ ಶಸ್ತ್ರ ಚಿಕಿತ್ಸೆಯನ್ನು ನೆರವೇ ರಿಸಿದೆವು. ಈಗ ದಾನ ಮಾಡಿದ ತಂದೆ, ದಾನ ಪಡೆದ ಮಗಳು ಇಬ್ಬರೂ ಆರೋಗ್ಯವಾಗಿದ್ದಾರೆ. ಕೆಲವೇ ದಿನಗಳಲ್ಲಿ ಮೊದಲ ಸ್ಥಿತಿಗೆ ತಲುಪಿದ್ದಾರೆ. ಇದು ನಮ್ಮ ಆಸ್ಪತ್ರೆಯ ಹೆಮ್ಮೆ ಎಂದರು.


ಮತ್ತೋರ್ವ ತಜ್ಞ ಹಾಗೂ ಆಸ್ಪತ್ರೆಯ ಮುಖ್ಯಸ್ಥ ಡಾ. ಪ್ರದೀಪ್ ಮಾತನಾಡಿ, ನಮ್ಮ ಆಸ್ಪತ್ರೆ ಮೂತ್ರ ಶಾಸ್ತ್ರದ ಆರೈ ಕೆಯಲ್ಲಿ ಮುಂಚೂಣಿಯಲ್ಲಿದೆ. ಇದೇ ಮೊದಲ ಬಾರಿಗೆ ಮಲೆ ನಾಡು ಭಾಗದಲ್ಲಿ ಮೂತ್ರಪಿಂಡ ಟ್ರಾನ್ಸ್ ಪ್ಲಾಂಟ್ ಮಾಡಿ ಯಶಸ್ವಿಯಾಗಿದ್ದೇವೆ. ಇದರಿಂದ ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲಿ ಚಿಕಿತ್ಸೆ ಪಡೆಯುವುದು ತಪ್ಪಿದಂತಾಗುತ್ತದೆ. ಆರ್ಥಿಕವಾಗಿ ಯೂ ಇದು ಉಳಿತಾಯವಾಗು ತ್ತದೆ. ಮತ್ತು ದೂರದ ಊರು ಗಳಿಗೆ ಹೋಗುವುದು ತಪ್ಪುತ್ತದೆ ಎಂದರು.
ಮೊದಲು ಮೂತ್ರ ಪಿಂಡ ಟ್ರಾನ್ಸ್ ಪ್ಲಾಂಟ್ ಎಂದರೆ ಅತ್ಯಂತ ಕಷ್ಟಕರವಾಗಿತ್ತು. ಯಶಸ್ವ ರೇಟ್ ಕೂಡ ಕಡಿಮೆ ಇತ್ತು. ಆದರೆ ಈಗ ಹೊಸ ತಂತ್ರಜನಗಳು ವೈದ್ಯಕೀಯ ಕ್ಷೇತ್ರಕ್ಕೆ ಬಂದಿವೆ. ಲ್ಯಾಪರೋಸ್ಕೋಪಿಕ್ ವಿಧಾನ ದ ಮೂಲಕ ಈ ಯಶಸ್ವಿ ಶಸ್ತ್ರ ಚಿಕಿತ್ಸೆ ನೀಡಲಾಗಿದೆ. ನಮ್ಮ ತಂಡದಲ್ಲಿ ಡಾ. ಕಿರಣ್ ಚಂದ್ರ ಪಾತ್ರೋ, ಡಾ. ಪ್ರಸನ್ನ, ಡಾ. ವೆಂಕಟೇಶ್, ಡಾ, ಕೃಷ್ಣ ಪ್ರಸಾದ್, ಡಾ. ಪ್ರಮೋದ್ ಕೃಷ್ಣಪ್ಪ, ಡಾ. ಆಲ್ಕಾಡಿಯೋ, ಡಾ. ಕಾರ್ತಿಕ್ ಇದ್ದರು. ಇವ ರಿಗೆ ಮತ್ತು ನಮ್ಮ ಆಸ್ಪತ್ರೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿಫಾರಸು ಮಾಡಿದ ಭದ್ರಾವತಿಯ ನಿರ್ಮಲಾ ಆಸ್ಪತ್ರೆ ವೈದ್ಯರನ್ನು ನಾವು ಶ್ಲಾಘಿಸುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಕಾರ್ತಿಕ್, ಪಿ.ಆರ್.ಒ. ಶ್ರುತಿ ವಿ. ಇದ್ದರು.