ಜ.೯ರಿಂದ ಬೆಂಗಳೂರಿನಲ್ಲಿ ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಎಕ್ಸ್‌ಪೋ…
ಶಿವಮೊಗ್ಗ: ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ಗ್ರ್ಯಾಂಡ್ ಮತ್ತು ಗಾಯತ್ರಿ ವೃಕ್ಷದ ಐದು ಸಭಾಂಗಣ ದಲ್ಲಿ ಜ.೯, ೧೦ ಹಾಗೂ ೧೧ ರಂದು ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಎಕ್ಸ್‌ಪೋ-೨೦೨೬ನ್ನು ಹಮ್ಮಿಕೊಳ್ಳ ಲಾಗಿದೆ ಎಂದು ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗರ ಜಿಧ್ಯಕ್ಷ ಎಂ.ಎ.g ಮೇಶ್ ಹೆಗಡೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೂರು ದಿನಗಳ ಎಕ್ಸ್‌ಪೋದಲ್ಲಿ ಕೃಷಿ, ಆರೋಗ್ಯ, ಶಿಕ್ಷಣ, ಎಂಎಸ್‌ಎಂಇ, ಆಹಾರ-ಆತಿಥ್ಯ, ಮಾಧ್ಯಮ -ಮನರಂಜನೆ, ಸ್ಪಾರ್ಟ್ ಆಫ್ ಸೆಕ್ಟರ್ ಮತ್ತಿತರ ವಿಷಯಗಳ ಬಗ್ಗೆ ಸುಧೀರ್ಘ ಚರ್ಚೆ ಹಾಗೂ ಸಂವಾದ ನಡೆಯಲಿದೆ ಎಂದರು.
ಅದೇ ರೀತಿ ಶಿವಮೊಗ್ಗ, ಮಂಡ್ಯ, ಮೈಸೂರು, ಹಾಸನ, ಚಿಕ್ಕಮಗಳೂರು, ದಕ್ಷಿಣಕನ್ನಡ, ಕೊಡಗು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನಲ್ಲಿ ಜಿ ಸಮ್ಮೇಳನ ಗಳು ನಡೆಯಲಿವೆ ಎಂದರು.
ಈಗಾಗಲೇ ೨೦೦ಕ್ಕೂ ಹೆಚ್ಚು ಪ್ರದರ್ಶನಕಾರರು ತಮ್ಮ ಮಳಿಗೆಗಳನ್ನು ತೆರೆಯಲು ಅವಕಾಶ ಪಡೆದಿzರೆ. ಈ ಬಾರಿ ರೈತ ಸಂತೆಯಲ್ಲಿ ೫೦ಕ್ಕೂ ಹೆಚ್ಚು ರೈತರು ತಮ್ಮ ಪದಾರ್ಥಗಳನ್ನು ಮಾರಾಟ ಮಾಡಲಿzರೆ ಎಂದರು.
ಎಕ್ಸ್‌ಪೋನಲ್ಲಿ ಒಕ್ಕಲಿಗ ಸಮುದಾಯದ ನಿರುದ್ಯೋಗಿಗಳಿಗೆ ಈ ಮೂರು ದಿನಗಳ ಎಕ್ಸ್‌ಪೋ ಪ್ರಯೋಜನವಾಗಲಿದ್ದು, ನಿರುದ್ಯೋಗಿಗಳಿಗೆ ಮೂರು ತಿಂಗಳ ತರಬೇತಿಯನ್ನು ನೀಡುವುದರ ಜೊತೆಗೆ ೧೦ ಸಾವಿರ ರೂ. ಮಾಸಿಕ ಸ್ಟೈಫಂಡ್ ಹಾಗೂ ಉಳಿದು ಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಜ.೯ರಂದು ಸಂಜೆ ಸ್ಯಾಂಡಲ್ ವುಡ್ ನೈಟ್, ಜ.೧೦ರಂದು ಸಂಜೆ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರಿಂದ ಸತ್ಸಂಗ ಏರ್ಪಡಿಸ ಲಾಗಿದೆ. ಜ.೯ರಂದು ಬೆಳಿಗ್ಗೆ ೧೦.೩೦ಕ್ಕೆ ರೈತ ಸಂತೆಯನ್ನು ಕೃಷಿ ಸಚಿವ ಎನ್. ಚೆಲುವ ರಾಯಸ್ವಾಮಿ, ಸ್ಟಾಲ್‌ಗಳನ್ನು ಶಾಸಕ ಎಂ.ಕೃಷ್ಣಪ್ಪ ಉದ್ಘಾಟಿಸಲಿzರೆ ಎಂದರು.
ಮೂರು ದಿನಗಳ ಈ ಸಮಾವೇಶದಲ್ಲಿ ಸಮಾಜದ ಎ ಸ್ವಾಮೀಜಿಗಳು, ಉಪ ಮುಖ್ಯಮಂತ್ರಿ, ಎ ಒಕ್ಕಲಿಗ ಮಂತ್ರಿಗಳು, ಮಾಜಿ ಮಂತ್ರಿಗಳು, ಸಂಸದರು, ಶಾಸಕರು, ಒಕ್ಕಲಿಗರ ಸಂಘದ ಎ ಪದಾಧಿಕಾರಿಗಳು ಭಾಗವಹಿಸಲಿದ್ದು, ರಾಜದ್ಯಂತ ಎ ಜಿಗಳಿಂದ ೬೦ ಸಾವಿರಕ್ಕೂ ಹೆಚ್ಚು ಉದ್ಯಮಿಗಳು ಹಾಗೂ ಹಿತೈಷಿಗಳು ಭಾಗವಹಿಸಲಿzರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಎ. ರಮೇಶ್ ಹೆಗಡೆ, ಜಿ ಪ್ರಧಾನ ಕಾರ್ಯದರ್ಶಿ ರಾಕೇಶ್‌ಗೌಡ, ರವಿ ಹಾಜರಿದ್ದರು.
