ಇತರೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಪರ್ಯಾಯ ಇಂಧನ ಮೂಲಗಳ ಹುಡುಕುವಿಕೆ – ಬಳಕೆ ಇಂದಿನ ಕಾಲಮಾನದಲ್ಲಿ ಅನಿವಾರ್ಯ: ಡಾ| ಸುರೇಶ್

Share Below Link

ಶಿವಮೊಗ್ಗ: ಪರ್ಯಾಯ ಇಂಧನ ಮೂಲಗಳನ್ನು ಹುಡುಕು ವುದು ಮತ್ತು ಬಳಸಿಕೊಳ್ಳುವುದು ಇಂದು ಅನಿವಾರ್ಯ ಮತ್ತು ಅಗತ್ಯವಾಗಿದೆ ಎಂದು ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ಡಾ. ಹೆಚ್.ಬಿ. ಸುರೇಶ್ ಹೇಳಿದರು.
ಅವರು ಇಂದು ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಭಾರತ ಸರ್ಕಾರದ ಇಂಧನ ಮಂತ್ರಾಲಯದ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಯಮಿತ, ರಚನಾ ಎನ್ವರ್ ಕೇರ್, ಸಹ್ಯಾದ್ರಿ ಕಲಾ ಕಾಲೇಜು ಆಶ್ರಯದಲ್ಲಿ ಆಯೋಜಿ ಸಿದ್ದ ಇಂಧನ ದಕ್ಷತೆ ಮತ್ತು ಇಂಧನ ಉಳಿತಾಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಪ್ರದಾಯಿಕ ಇಂಧನ ಉತ್ಪಾದನೆಯಿಂದ ಪರಿಸರಕ್ಕೆ ಸಾಕಷ್ಟು ಹಾನಿ ಆಗುತ್ತಿದೆ. ಜೊತೆಗೆ ಸಂಕಷ್ಟವೂ ಆಗುತ್ತಿದೆ. ಜಲ, ಕಲ್ಲಿದ್ದಲು, ನ್ಯೂಕ್ಲಿಯರ್ ಹೀಗೆ ವಿವಿಧ ರೀತಿಯ ಇಂಧನಗಳಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮವಾಗಿ ಜಗತಿಕ ತಾಪಮಾನ ಹೆಚ್ಚುತ್ತದೆ. ಆದ್ದರಿಂದ ಪರಿಸರಕ್ಕೆ ಪೂರಕವಲ್ಲದ ಇಂತಹ ಇಂಧನ ಉತ್ಪಾದನೆಯ ಬದಲಿಗೆ ನವೀಕರಿಸಬಹುದಾದ ಇಂಧನ ಅಭಿವೃದ್ಧಿಯನ್ನು ಮಾಡುವುದು ಇಂದಿನ ತುರ್ತಾಗಿದೆ ಎಂದರು.
ಸೂರ್ಯ, ಗಾಳಿ, ಸಮುದ್ರದ ಅಲೆ, ಜೈವಿಕ ಬಳಕೆ, ಕಿರು ವಿದ್ಯುತ್ ಯೋಜನೆಗಳು, ಜಿಯೋ ಥರ್ಮಲ್ ಮುಂತಾದ ಹಲವು ನವೀಕರಿಸಬಹುದಾದ ಇಂಧನ ಉತ್ಪಾದನೆ ಮಾಡುವುದರಿಂದ ಶಕ್ತಿ ಉಳಿತಾಯದ ಜೊತೆಗೆ ಖರ್ಚು ಉಳಿಯುತ್ತದೆ. ಪರಿಸರಕ್ಕೆ ಧಕ್ಕೆ ಆಗುವುದೂ ತಪ್ಪುತ್ತದೆ ಎಂದರು.
ವಿದ್ಯಾರ್ಥಿಗಳಿಗೆ ಜನ ದೊಂದಿಗೆ ಕ್ರಿಯೆಯೂ ಇರಬೇಕು. ಪರಿಸರ ಪ್ರe ಬೆಳೆಯಬೇಕು. ತಂದೆ-ತಾಯಿಗಳಿಗೆ ಗೌರವ ಕೊಡಬೇಕು. ವಿದ್ಯುತ್ ಮತ್ತು ಪೆಟ್ರೋಲ್ ಬಳಕೆ ಬಗ್ಗೆ ಎಚ್ಚರಿಕೆ ವಹಿಸಬೇಕು. ಎಲ್ಲಿ ಸಾಧ್ಯವೋ ಅಲ್ಲಿ ಇಂಧನ ಉಳಿಸಬೇಕು. ಮುಂದಿನ ಪೀಳಿಗೆಗೂ ನಾವು ಇಂದನವನ್ನು ಬಿಟ್ಟುಕೊಡ ಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಕೆ.ಬಿ. ಧನಂಜಯ ಅವರು ಮಾತನಾಡಿ, ಮನುಷ್ಯನ ದುರಾಸೆಗೆ ಪ್ರಕೃತಿ ನಾಶವಾಗುತ್ತಿದೆ. ಪ್ರಕೃತಿ ಎಚ್ಚರಿಸಿ ದರೂ ನಾವು ಎಚ್ಚೆತ್ತುಕೊಳ್ಳುತ್ತಿಲ್ಲ. ನಿಸರ್ಗದ ವಿಷಾದದ ಚಕ್ರಕ್ಕೆ ಸಿಕ್ಕು ಮಾನವ ತಲ್ಲಣಗೊಂಡಿದ್ದಾನೆ. ಹಾಗಾಗಿ ನಮ್ಮ ಮುಂದಿನ ಎಲ್ಲಾ ಯೋಚನೆಗಳು, ಯೋಜನೆಗಳು ಪರಿಸರಕ್ಕೆ ಧಕ್ಕೆ ಆಗದಂತೆ ಇರಬೇಕು ಎಂದರು.
ಪ್ರಾಧ್ಯಾಪಕ ಹಾಗೂ ಯುವ ರೆಡ್‌ಕ್ರಾಸ್ ಘಟಕದ ಸಂಚಾಲಕ ಡಾ.ಕೆ.ಎನ್. ಮಂಜುನಾಥ್ ಮಾತನಾಡಿ, ಭಾರತ ಸರ್ಕಾರದ ಇಂಧನ ಮಂತ್ರಾಲಯ ಇಲಾಖೆ ನವೀಕರಿಸಬಹುದಾದ ಇಂಧನದ ಅಭಿವೃದ್ಧಿಗೆ ಒತ್ತುಕೊಡುತ್ತಿದೆ. ಕಾಲೇಜುಗಳಲ್ಲಿಯೂ ಮಳೆ ಕೊಯ್ಲು, ಸೋಲಾರ್, ಮುಂತಾದ ಪರ್ಯಾಯ ವ್ಯವಸ್ಥೆಯ ಮೂಲಕ ನೀರನ್ನು ಸಂಗ್ರಹಿಸಿ, ಇಂಧನ ಉತ್ಪಾದನೆ ಮಾಡಬಹುದು ಎಂದರು.
ಕಾರ್ಯಕ್ರಮದಲ್ಲಿ ಐ.ಒ.ಟಿ. ವಿಶೇಷ ತಜ್ಞ ರಾಜೀವ್ ಪಿ. ನಾಡಿಗ್, ಸೋಲಾರ್ ಎನರ್ಜಿ ಪ್ರಾಜೆಕ್ಟಿನ ಹೆಚ್.ಎಸ್. ಮೋಹನ್, ಹೆಚ್.ಎನ್. ದಯಾನಂದ ಸಾಗರ್, ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಇಂಧನ ದಕ್ಷತೆ ಮತ್ತು ಇಂಧನ ಉಳಿತಾಯದ ಬಗ್ಗೆ ಪ್ರಾತ್ಯಕ್ಷತೆ ಮೂಲಕ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಡಾ. ಹೆಚ್.ಎಸ್. ಕೃಪಾಲಿನಿ, ಪ್ರಾಧ್ಯಾ ಪಕರಾದ ಸಿಂಚನ, ಮಹದೇವ ಸ್ವಾಮಿ, ಇತಿಹಾಸ ವಿಭಾಗದ ಮುಖ್ಯಸ್ಥ ಕೆ. ಶಫಿವುಲ್ಲಾ ಮುಂತಾ ದವರಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲೆ ಮತ್ತು ಪೋಸ್ಟರ್ ವಿನ್ಯಾಸವನ್ನು ಆಯೋಜಿಸಲಾಗಿತ್ತು.