ಆರ್ಥಿಕ ಸಾಕ್ಷರತೆ – ನಗದು ರಹಿತ ವ್ಯವಹಾರ ಇಂದನ ಅಗತ್ಯ: ಅಮರನಾಥ್
ಶಿಕಾರಿಪುರ : ಮಾನಸಿಕ ಪ್ರೌಢಿಮೆಯನ್ನು ಹೊಂದುತ್ತಿರುವ ವಿದ್ಯಾರ್ಥಿಗಳಿಗೆ ಸಾಮಾನ್ಯ eನ ಅಭಿವೃದ್ಧಿ ಹೊಂದುವ ರೀತಿಯಲ್ಲಿ ಆರ್ಥಿಕ ಸಾಕ್ಷರತೆ ಮತ್ತು ನಗದು ರಹಿತ ವ್ಯವಹಾರದ ಅರಿವು ಇಂದಿನ ದಿನಮಾನದಲ್ಲಿ ಅತೀ ಅಗತ್ಯ ಎಂದು ಜಿ ಮಾರ್ಗದರ್ಶಿ ಬ್ಯಾಂಕಿನ ಪ್ರಬಂಧಕ ಅಮರನಾಥ ಹೇಳಿದರು.
ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಅಮೂಲ್ಯ ಆರ್ಥಿಕ ಸಾಕ್ಷರತ ಕೇಂದ್ರದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಆರ್ಥಿಕ ಸಾಕ್ಷರತೆ ಮತ್ತು ನಗದು ರಹಿತ ವ್ಯವಹಾರ ಬಗ್ಗೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶೈಕ್ಷಣಿಕ ಅವಧಿ ಪೂರ್ಣಗೊಂಡ ಬಳಿಕ ಆರ್ಥಿಕವಾಗಿ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯಬೇಕಾದರೆ ರಾಷ್ಟ್ರೀಕೃತ ಬ್ಯಾಂಕುಗಳ ಸಹಕಾರ ಅತ್ಯಗತ್ಯವಾಗಿದ್ದು ಹಾಗಾಗಿ ಬ್ಯಾಂಕಿನ ಸಂಪೂರ್ಣ ಮಾಹಿತಿ ಯನ್ನು ಈ ಸಂದರ್ಭದಲ್ಲಿಯೇ ಪಡೆಯುವಂತೆ ತಿಳಿಸಿದರು.
ಶ್ರಮವಿಲ್ಲದೆ ಅತೀ ಆಸೆ ನಗದು ರಹಿತ ವ್ಯವಹಾರದಲ್ಲಿ ವಂಚನೆಗೆ ಒಳಗಾಗುವ ಸಂದರ್ಭ ಅಧಿಕ ವಾಗಿರುತ್ತದೆ. ತಂತ್ರeನ ಬೆಳೆದಂತೆ ಬಳಕೆಯು ಅಧಿಕವಾದಾಗ ಮೋಸಗಾರರ ಜಲಕ್ಕೆ ಸಿಲುಕದಂತೆ ಜಣ್ಮೆಯಿಂದ ವ್ಯವಹರಿಸಿದಲ್ಲಿ ಮಾತ್ರ ದುಡಿಮೆಯ ಹಣದಿಂದ ಆರ್ಥಿಕವಾಗಿ ಸದೃಢವಾಗಲು ಸಾಧ್ಯ ಇದನ್ನು ಆರ್ಥಿಕ ಸಾಕ್ಷರತೆ ಎಂದು ಪರಿಗಣಿಸಲಾಗುವುದು ಎಂದು ತಿಳಿಸಿದರು.
ಅಮೂಲ್ಯ ಆರ್ಥಿಕ ಸಾಕ್ಷರತ ಕೇಂದ್ರದ ಸಮಾಲೋಚಕ ಗುಡದಯ್ಯ ಉಡುಗಣಿ ಮಾತನಾಡಿ, ಶ್ರz ಮತ್ತು ಶ್ರಮದಿಂದ ಇಷ್ಟಪಟ್ಟು ವಿದ್ಯಾರ್ಥಿ ಜೀವನದಲ್ಲಿ ಅಭ್ಯಾಸಿಸಿದರೆ ಭವಿಷ್ಯದ ಬದುಕು ನೆಮ್ಮದಿ, ಸುಖ, ಸಂತೋಷದಿಂದ ಇರಬಹುದು. ಬ್ಯಾಂಕಿನಲ್ಲಿ ಒಳ್ಳೆಯ ಸಂಬಂಧ ಹೊಂದಿ ವ್ಯವಹರಿಸಿದಲ್ಲಿ ಆರ್ಥಿಕ ಪರಿeನ ಗಳಿಸಿದಂತೆ ಎಂದು ತಿಳಿಸಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಶಿಕ್ಷಣವನ್ನು ಪೊರೈಸಿ ಉದ್ಯೋಗ ಕ್ಕಾಗಿ ನಗರ ಪ್ರದೇಶಗಳಿಗೆ ಅಲೆಯುವ ಬದಲು ಕೌಶಲ್ಯವನ್ನು ಬಳಸಿಕೊಂಡು ಸರ್ಕಾರ ಮತ್ತು ವಾಣಿಜ್ಯ ಬ್ಯಾಂಕುಗಳಲ್ಲಿ ದೊರೆಯುವ ಆರ್ಥಿಕ ಸೌಲಭ್ಯ ಸದುಪಯೋಗಪಡಿಸಿಕೊಂಡು ಸ್ವಂತ ಕೈಗಾರಿಕಾ ಘಟಕವನ್ನು ಮುದ್ರಾ ಯೋಜನೆಯಲ್ಲಿ ಪ್ರಾರಂಭಿಸಿದಲ್ಲಿ ಉದ್ಯಮಿಗಳಾ ಗುವ ಸಾಧ್ಯತೆ ಹೆಚ್ಚಾಗಿದೆ.ಈ ದೆಸೆಯಲ್ಲಿ ಬ್ಯಾಂಕ್ ಜೊತೆಗೆ ಉತ್ತಮ ರೀತಿಯಲ್ಲಿ ವ್ಯವಹರಿಸಲು ಆರ್ಥಿಕ ಸಾಕ್ಷರತೆಯ ಪ್ರe ಅತ್ಯಗತ್ಯ ಹಾಗೂ ಉಳಿತಾಯದ ಮನೋಭಾವನೆಯನ್ನು ಬೆಳೆಸಿಕೊಳ್ಳುವಂತೆ ತಿಳಿಸಿದರು.
ಜಿ ಮಾರ್ಗದರ್ಶಿ ಬ್ಯಾಂಕಿನ ಅಧಿಕಾರಿ ನೆಲ್ಸನ್ ಮಾತನಾಡಿ, ೨೫ ವರ್ಷದವರೆಗೆ ಉತ್ತಮವಾಗಿ ಶ್ರzಯಿಂದ ಶಿಕ್ಷಣ ಮುಗಿಸಿದರೆ ಮುಂದಿನ ಜೀವನ ಉತ್ತಮವಾಗಿ ರುತ್ತದೆ. ಬಾಲ್ಯದಿಂದಲೆ ಉಳಿತಾಯ ಮಾಡಿ ಬ್ಯಾಂಕಿನಲ್ಲಿ ಉಳಿತಾಯ ಖಾತೆ, ಆರ್‌ಡಿ, ಎಫ್‌ಡಿ ರೂಪದಲ್ಲಿ ತೊಡಗಿಸಿದರೆ ಹಣಕ್ಕೆ ಬಡ್ಡಿ ಬರುತ್ತದೆ ಹಾಗೂ ಬ್ಯಾಂಕಿನ ಇತರೆ ಸೇವೆಗಳನ್ನು ಪಡೆಯಬಹುದು. ಭವಿಷ್ಯದ ಉನ್ನತ ಶಿಕ್ಷಣಕ್ಕೆ ಸಾಲ ಹಾಗೂ ಸ್ವಂತ ಘಟಕ ಪ್ರಾರಂಭಿಸಲು ಮುದ್ರಾ ಯೋಜನೆಯಲ್ಲಿ ರೂ.೫೦ ಸಾವಿರದಿಂದ ರೂ.೧೦ ಲಕ್ಷದವರೆಗೆ ಪಡೆದು ಆರ್ಥಿಕವಾಗಿ ಅಭಿವೃದ್ದಿಯಾಗಬಹುದು ಆದರೆ ಸಿಬಿಲ್ ರೆಕಾರ್ಡ್‌ನ್ನು ಉತ್ತಮ ವಾಗಿ ನಿರ್ವಹಿಸುವಂತೆ ಕಿವಿಮಾತು ಹೇಳಿದ ಅವರು, ಬ್ಯಾಂಕು ಪ್ರತಿಯೊಬ್ಬರಿಗೂ ಪ್ರತಿಯೊಂದು ಘಟಕಕ್ಕೆ ಸಾಲ ಸೌಲಭ್ಯ ನೀಡುತ್ತದೆ ಭವಿಷ್ಯದಲ್ಲಿ ಸದುಪಯೋಗಪಡಿಸಿ ಕೊಳ್ಳಿ ಎಂದು ತಿಳಿಸಿದರು. ತರಬೇತಿ ಅಧಿಕಾರಿ ನರಸಿಂಹಮೂರ್ತಿ, ಮಹೇಶಪ್ಪ, ಕರಿಯಪ್ಪ, ನಾಗರಾಜ ಕರಿಗಾರ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.