ಚೌಡೇಶ್ವರಿ ದೇವಳದಲ್ಲಿ ಸಂಭ್ರಮದ ನವರಾತ್ರಿ ಸಂಪನ್ನ
ಶಿವಮೊಗ್ಗ: ಚಾಲುಕ್ಯ ನಗರದ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಅ ೧೫ರಿಂದ ಅ.೨೪ರವರೆಗೆ ಸಂಭ್ರಮದ ನವರಾತ್ರಿ ಸಂಪನ್ನಗೊಂಡಿದೆ.
ಪ್ರತಿನಿತ್ಯ ಸಹ ದೇವಿಗೆ ವಿವಿಧ ಅಲಂಕಾರ, ಬೆಳಿಗ್ಗೆ ೧೦ ರಿಂದ ಹೋಮ ಪ್ರಾರಂಭವಾಗಿ ೧೨.೩೦ಕ್ಕೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಹಾಗೂ ಪ್ರತಿನಿತ್ಯ ಸಂಜೆ ೬.೩೦ ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಉಯ್ಯಾಲೆ ಸೇವೆಯನ್ನು ಏರ್ಪಡಿಸಲಾಗಿತ್ತು.
ಅ.೨೪ ರಂದು ಸಂಜೆ ೬.೩೦ಕ್ಕೆ ಮಂಗಳವಾದ್ಯಗಳೊಂದಿಗೆ ಚಾಲುಕ್ಯನಗರ ಮುಖ್ಯದ್ವಾರದಿಂದ ಮೆರವಣಿಗೆಯೊಂದಿಗೆ ಬನ್ನಿಮಂಟಕ್ಕೆ ತಲುಪಿ, ಅರ್ಚಕ ಚೇತನಭಟ್ ನೇತೃತ್ವದಲ್ಲಿ ಜಯರಾಮ್ ಕಾಮತ್‌ರವರು ಬನ್ನಿ ವೃಕ್ಷಕ್ಕೆ ಪೂಜೆ ಸಲ್ಲಿಸಿದರು, ಈ ಸಂದರ್ಭದಲ್ಲಿ ಸಿಡಿ ಮದ್ದು ಪದರ್ಶನ ನೀಡಲಾಯಿತು.
ತಾಯಿ ಚೌಡೇಶ್ವರಿಗೆ ಬನ್ನಿ ಸಮರ್ಪಿಸಿ ದೇವಿಗೆ ಮಹಾ ಮಂಗಳಾರತಿ, ಬಂದಂತಹ ಭಕ್ತರಿಗೆ ಬನ್ನಿ ವಿತರಣೆ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಯಿತು.
ಈ ಸಂದರ್ಭದಲ್ಲಿ ಅಡಳಿತ ಮಂಡಳಿ, ಅರ್ಚಕವೃಂದ, ಚಾಲುಕ್ಯನಗರ ಸೇರಿದಂತೆ ದೇವಿಯ ಸಾವಿರದ ಐನ್ನೂರುಕ್ಕೂ ಹೆಚ್ಚು ಭಕ್ತಾದಿಗಳು ಪಾಲ್ಗೊಂಡಿದ್ದರು. ಸಂಭ್ರಮದ ನವರಾತ್ರಿಉತ್ಸವಕ್ಕೆ ಸಹಕರಿಸಿದ ಎಲ್ಲರಿಗೂ ಶ್ರೀ ಚೌಡೇಶ್ವರಿ ಅಮ್ಮನವರ ಆಡಳಿತ ಮಂಡಳಿ ಧನ್ಯವಾದ ತಿಳಿಸಿzರೆ.