ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ಫೆ.೪: ಮಾತೃ ವಾತ್ಸಲ್ಯ ಆಸ್ಪತ್ರೆ ಉದ್ಘಾಟನೆ; ಉಚಿತ ಒಪಿಡಿ: ಡಾ| ಪೃಥ್ವಿ …

Share Below Link

ಶಿವಮೊಗ್ಗ: ಪಾರ್ಕ್ ಬಡಾವಣೆಯಲ್ಲಿ ಆರಂಭಗೊಳ್ಳುತ್ತಿ ರುವ ಮಾತೃ ವಾತ್ಸಲ್ಯ-ಮದರ್ ಮತ್ತು ಬೇಬಿಕೇರ್ ಆಸ್ಪತ್ರೆಯ ಉದ್ಘಾಟನೆಯನ್ನು ಫೆ.೪ರ ಬೆಳಿಗ್ಗೆ ೧೧ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ. ಪೃಥ್ವಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ತಾಯಿ ಮತ್ತು ಮಕ್ಕಳಿಗಾಗಿ ಪ್ರತ್ಯೇಕ ಆಸ್ಪತ್ರೆ ಇದಾಗಿದ್ದು, ೨೪/೭ ತುರ್ತುಸೇವೆ ಲಭ್ಯವಿದೆ. ಮಕ್ಕಳ ತೀವ್ರ ನಿಗಾ ಘಟಕ, ನಾರ್ಮಲ್ ಡೆಲಿವರಿ, ಸಿಸೇರಿಯನ್ ಡೆಲಿವರಿ, ಗರ್ಭೀಣಿಯರ ಆಯ್ಕೆ, ನೋವು ರಹಿತ ಡೆಲಿವರಿ ಹಾಗೂ ಸುಸಜ್ಜಿತ ಆಫರೇಷನ್ ಥಿಯೆಟರ್, ಲೇಬರ್ ಥಿಯೇಟರ್, ಮಕ್ಕಳ ಶಸ್ತ್ರ ಚಿಕಿತ್ಸೆ, ಲ್ಯಾಪ್ರೋ ಸರ್ಜರಿ, ವ್ಯಾಕ್ಸಿನೇಷನ್ ವ್ಯವಸ್ಥೆ, ಸೂಟ್ ಡೆಲಿವರಿ ವ್ಯವಸ್ಥೆ, ಡಿಲಕ್ಸ್ ಮತ್ತು ಸ್ಪೆಷಲ್ ವಾರ್ಡ್‌ಗಳ ವ್ಯವಸ್ಥೆ ಇರುತ್ತದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಆಸ್ಪತ್ರೆ ಉದ್ಘಾ ಟಿಸಲಿದ್ದು, ಮುಖ್ಯ ಅತಿಥಿಯಾಗಿ ಮಾಜಿ ಸಿಎಂ ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಎಸ್.ಎಂ.ಚನ್ನಬಸಪ್ಪ, ಶಾರದ ಪೂರ್‍ಯನಾಯ್ಕ್, ಆರಗ ಜನೇಂದ್ರ, ಬಿ.ಕೆ. ಸಂಗಮೇಶ್ವರ್, ಗೋಪಾಲ್‌ಕೃಷ್ಣ ಬೇಳೂರು, ಬಿ.ವೈ. ವಿಜಯೇಂದ್ರ, ಎಸ್. ರುದ್ರೇಗೌಡ, ಡಿ.ಎಸ್.ಅರುಣ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಇನ್ನಿತರರು ಆಗಮಿಸಲಿ ದ್ದಾರೆ ಎಂದರು.
ಇಂದಿನಿಂದಲೇ ಉಚಿತ ಓಪಿಡಿ ಇರುತ್ತದೆ. ನುರಿತ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರ , ಮಕ್ಕಳ ವೈದ್ಯರ ತಂಡ ಲಭ್ಯವಿರುತ್ತದೆ ಎಂದ ಅವರು, ಫೆ.೪ರಂದು ಬೆಳಿಗ್ಗೆ ೧೦ ರಿಂದ ಸಂಜೆ ೫ರವರೆಗೆ ಸಹದ್ಯೋಗಿ ವೈದ್ಯ ಮಿತ್ರರು, ಹಿತೈಷಿಗಳು ಭೇಟಿ ಮಾಡಿ ನಮ್ಮ ಆತಿಥ್ಯವನ್ನು ಸ್ವೀಕರಿಸುವಂತೆ ಮನವಿ ಮಾಡಿ ಕೊಂಡರು.
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಮಾತನಾಡಿ, ಈ ಆಸ್ಪತ್ರೆಯಲ್ಲಿ ಹೊರ ರೋಗಿ ಗಳಿಗೆ ಉಚಿತ ಸೇವೆ ಇದ್ದು, ಬಡವರಿಗೆ ವಿಶೇಷವಾದ ಸೇವೆ ಸಲ್ಲಿಸಲು ಸೂಚಿಸಿದ್ದು, ಜಿಲ್ಲೆಯ ಜನತೆ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿಕೊಂಡರು.
ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರಾದ ಡಾ.ಸುಮ ಕೆ.ಎಂ. ಮಾತನಾಡಿ, ಚಾರಿಟಿ ಆಸ್ಪತ್ರೆಯ ಲ್ಲಿರುವ ಈ ಆಸ್ಪತ್ರೆಯನ್ನು ಸೇವಾ ಮನೋಭಾವುಳ್ಳ ಹಾಗೂ ಹೃದ ಯವಂತ ವೈದ್ಯರ ತಂಡ ದಿನದ ೨೪ ಗಂಟೆಗಳ ಕಾಲ ಸೇವೆ ಸಲ್ಲಿಸಲು ಸಿದ್ದವಿದೆ. ಬೇರೆ ಆಸ್ಪತ್ರೆಗಳಿಗೆ ಹೋಲಿಕೆ ಮಾಡಿದರೆ, ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ವೆಚ್ಚ ಕಡಿಮೆ ಇದೆ ಎಂದರು.
ಆಸ್ಪತ್ರೆಯ ನಿರ್ದೇಶಕರಾದ ಕೆ.ಈ. ಕಾಂತೇಶ್, ಡಾ. ಲಕ್ಷ್ಮೀನಾ ರಾಯಣ್ ಆಚಾರ್, ಡಾ. ತೇಜಸ್ವಿ ಟಿ.ಎಸ್., ಡಾ.ವಾಮನ ಶಾನಭಾಗ್, ವೈದ್ಯರಾದ ಡಾ. ವೆಂಕಟೇಶ್ ಮೂರ್ತಿ, ಡಾ. ನಾಗಮಣಿ ಎಂ.ಸಿ., ಡಾ.ಶ್ವೇತ ಸುದ್ದಿಗೋಷ್ಟಿಯಲ್ಲಿ ಮೊದಲಾದವರು ಉಪಸ್ಥಿತರಿ ದ್ದರು.