ಫೆ.28: ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಕಾರ್ಮೆಲ್ ಮಾತೆಯ ವಿಶೇಷ ಭಕ್ತಿ ಪ್ರಾರ್ಥನೆ
ಶಿವಮೊಗ್ಗ: ನಗರದ ಬಿ.ಹೆಚ್. ರಸ್ತೆಯ ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಫೆ.೨೮ರ ನಾಳೆ (ಶನಿವಾರ) ಸಂಜೆ ಚರಿತ್ರಾರ್ಹ ಕಾರ್ಮೆಲ್ ಮಾತೆಯ ತಿಂಗಳ ಕೊನೆಯ ಶನಿವಾರದ ಭಕ್ತಿ ಪ್ರಾರ್ಥನೆ ಹಮ್ಮಿಕೊಳ್ಳಲಾಗಿದೆ ಎಂದು ಧರ್ಮ ಕೇಂದ್ರ ಗುರುಗಳಾದ ರೆ|ಫಾ| ಸ್ಟ್ಯಾನಿ ಡಿಸೋಜ ತಿಳಿಸಿದ್ದಾರೆ.
ಅಂದು ಸಂಜೆ ೫.೩೦ಕ್ಕೆ ಪವಿತ್ರ ಬಲಿಪೂಜೆ, ೬.೨೦ಕ್ಕೆ ಚರ್ಚ್ ಆವರಣದಲ್ಲಿ ಮೇಣದ ಬತ್ತಿಗಳ ಬೆಳಕಿನಲ್ಲಿ ಕಾರ್ಮೆಲ್ ಮಾತೆಯ ನಿದರ್ಶನ ಕುರಿತ ವಿಶೇಷ ಧ್ಯಾನ ಹಾಗೂ ಪಲ್ಲಕ್ಕಿ ಉತ್ಸವ, ೭.೧೦ಕ್ಕೆ ಕಾರ್ಮೆಲ್ ಮಾತೆಯ ನವೇನ ಪ್ರಾರ್ಥನೆ ಮತ್ತು ೭.೨೦ಕ್ಕೆ ಪವಿತ್ರ ಪರಮ ಪ್ರಸಾದದ ಆಶೀರ್ವಚನ ಹಾಗೂ ಪವಿತ್ರ ತೀರ್ಥ ಪ್ರೋಕ್ಷಣೆ ಜರುಗಲಿದ್ದು, ರಾತ್ರಿ ೭.೩೫ಕ್ಕೆ ಭಕ್ತರಿಗೆ ವಿಶೇಷ ಅನ್ನಪ್ರಸಾದ ವಿತರಣೆ ಇರುತ್ತದೆ.
ಕ್ರೈಸ್ತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಎಲ್ಲಾ ದೇವತಾ ಕಾರ್ಯಗಳಲ್ಲಿ ಭಕ್ತಿಯಿಂದ ಪಾಲ್ಗೊಳ್ಳುವ ಮೂಲಕ ದೇವತಾಯಿ ಕಾರ್ಮೆಲ್ ಮಾತೆಯ ಕೃಪೆಗೆ ಪಾತ್ರರಾಗುವಂತೆ ಧರ್ಮಕೇಂದ್ರ ಗುರುಗಳ ಪರವಾಗಿ ಪಾಲನಾ ಪರಿಷತ್ ಕಾರ್ಯದರ್ಶಿಗಳು ಸದಸ್ಯರು ಕೋರಿದ್ದಾರೆ.

