ಫೆ. ೨೮: ಶಿವಮೊಗ್ಗದಲ್ಲಿ ಐಟಿ ಬಿಯಾಂಡ್ ಬೆಂಗಳೂರು ವಿಶೇಷ ಕಾರ್ಯಕ್ರಮ…
ಶಿವಮೊಗ್ಗ (ಹೊಸನಾವಿಕ) : ಬೆಂಗಳೂರಿನಾಚೆಗೆ ಮಾಹಿತಿ ತಂತ್ರeನ ಅಭಿವೃದ್ಧಿಗೆ ಉತ್ತೇಜನ ನೀಡುವ ಉzಶದಿಂದ ಫೆ.೨೮ ರಂದು ನಗರದ ಜೆಎನ್‌ಎನ್‌ಸಿಇ ಕಾಲೇಜಿನ ಎಂಬಿಎ ಸಭಾಂಗಣದಲ್ಲಿ ಐಟಿ ಬಿಯಾಂಡ್ ಬೆಂಗಳೂರು ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ. ಗೋಪಿನಾಥ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿ ವಾಣಿಜ್ಯ ಸಂಘದ ವತಿಯಿಂದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘಗಳ ಒಕ್ಕೂಟ (ಎಫ್‌ಕೆಸಿಸಿಐ), ಬೆಂಗಳೂರು ಹಾಗೂ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದರು.
ಅಂದು ಬೆಳಗ್ಗೆ ೧೦.೩೦ಕ್ಕೆ ಸಂಸದ ಬಿ.ವೈ. ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಂಘದ ಅಧ್ಯಕ್ಷ ಬಿ. ಗೋಪಿನಾಥ್ ಅಧ್ಯಕ್ಷತೆ ವಹಿಸುವರು. ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ, ಉಪಾಧ್ಯಕ್ಷ ಸಾಯಿರಾಮ್ ಪ್ರಸಾದ್, ಮಾಹಿತಿ ತಂತ್ರeನ ಚೇರ್ಮನ್ ಎಚ್.ಎ. ಕಿರಣ್ ಹಾಗೂ ಕೆಡಿಇಎಂ ಉಪಾಧ್ಯಕ್ಷ ಚೇತನ್ ದೀಕ್ಷಿತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿzರೆ ಎಂದರು.

ಮಧ್ಯಾಹ್ನ ೨ರಿಂದ ೪.೩೦ರವರೆಗೆ ಮಂಥನ್ ೨೦೨೬ ನವೋದಯ ಕೃತಕ ಬುದ್ಧಿಮತ್ತೆ ಕುರಿತು ಉಪನ್ಯಾಸ, ಚರ್ಚೆ ಮತ್ತು ಪ್ರಶ್ನೋತ್ತರ ಕಾರ್ಯಕ್ರಮ ನಡೆಯಲಿದ್ದು, ವಿದ್ಯಾರ್ಥಿ ಗಳೊಂದಿಗೆ ಸಂವಾದಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದರು.
ಬೆಂಗಳೂರು ಮೇಲಿನ ಅವಲಂಬನೆ ಕಡಿಮೆ ಮಾಡಿ ಶಿವಮೊಗ್ಗವನ್ನು ಸ್ವಾವಲಂಬಿ ಐಟಿ ಕೇಂದ್ರವಾಗಿ ಅಭಿವೃದ್ಧಿಪಡಿಸುವುದು ಕಾರ್ಯಕ್ರಮದ ಪ್ರಮುಖ ಗುರಿಯಾಗಿದೆ ಎಂದ ಅವರು, ಐಟಿ/ಐಟಿಇಎಸ್, ಬಿಪಿಒ, ಇಎಸ್ಡಿಎಂ, ಜೈವಿಕ ತಂತ್ರeನ ಹಾಗೂ ಟೆಲಿಕಾಂ ಕ್ಷೇತ್ರಗಳಲ್ಲಿ ಸ್ಥಳೀಯ ಹೂಡಿಕೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವತ್ತ ಗಮನಹರಿಸಲಾಗಿದೆ ಎಂದು ವಿವರಿಸಿದರು.
ಶಿವಮೊಗ್ಗದಲ್ಲಿ ಲಭ್ಯವಿರುವ ತಾಂತ್ರಿಕ ಶಿಕ್ಷಣ ಸಂಸ್ಥೆಗಳು, ಇಂಜಿನಿಯರಿಂಗ್ ಹಾಗೂ ನಿರ್ವಹಣಾ ಕಾಲೇಜುಗಳು, ಐಟಿ ಎಸ್‌ಇಝಡ್ ಮತ್ತು ಸ್ಟಾರ್ಟ್ ಅಪ್ ವಾತಾವರಣವು ಐಟಿ ಅಭಿವೃದ್ಧಿಗೆ ಅನುಕೂಲಕರವಾಗಿದೆ. ಸರ್ಕಾರದ ಗಮನ ಸೆಳೆದು ಶಿವಮೊಗ್ಗವನ್ನು ಪ್ರಾದೇಶಿಕ ಮಾಹಿತಿ ತಂತ್ರeನ ಕೇಂದ್ರವನ್ನಾಗಿ ರೂಪಿಸುವ ಅಗತ್ಯವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಜಿ. ವಿಜಯಕುಮಾರ್, ಕಾರ್ಯದರ್ಶಿ ಎ.ಎಂ. ಸುರೇಶ್, ಖಜಂಜಿ ಆರ್. ಮನೋಹರ್, ನಿರ್ದೇಶಕರಾದ ಎಸ್.ಎಸ್. ಉದಯ್ ಕುಮಾರ್, ಗಣೇಶ್ ಎಂ. ಅಂಗಡಿ, ಕಿರಣ್ ಕುಮಾರ್ ಜಿ.ವಿ. ಹಾಗೂ ರವಿಪ್ರಕಾಶ್ ಜನ್ನಿ ಉಪಸ್ಥಿತರಿದ್ದರು.

