ಫೆ.೨೧: ಭದ್ರಾವತಿಯಲ್ಲಿ ಕಲಾವಿದರ ಸಭೆ…
ಭದ್ರಾವತಿ: ಒಂದು ಕಾಲದಲ್ಲಿ ರಂಗಭೂಮಿ ಕಲಾವಿದರ ನೆಲೆಯಾಗಿದ್ದ, ಸಾವಿರಾರು ಕಲಾವಿದರು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಲು ಕಾರಣವಾಗಿರುವ ಉಕ್ಕಿನ ನಗರದಲ್ಲಿ ಇದುವರೆಗೂ ರಂಗಕಲಾವಿದರು ತಮ್ಮ ಚಟುವಟಿಕೆಗಳನ್ನು ನಡೆಸಲು ತಮ್ಮದೇ ಆದ ಸೂಕ್ತ ಸ್ಥಳವಾಗಲಿ, ರಂಗಮಂದಿರವಾಗಲಿ ಇಲ್ಲದಿರು ವುದು ವಿಷಾದನೀಯ ಸಂಗತಿ ಯಾಗಿದೆ. ಇದೀಗ ರಂಗಮಂದಿರ ನಿರ್ಮಿಸುವಂತೆ ಒತ್ತಾಯಿಸುವ ಉzಶದಿಂದ ಸಮಾನ ಮನಸ್ಸಿನ ರಂಗಭೂಮಿ ಹಾಗು ಎ ಪ್ರಕಾರಗಳ ಕಲಾವಿದರು ಒಗ್ಗಟ್ಟಾಗಿ ಅಭಿಯಾನ ನಡೆಸಲು ಮುಂದಾಗಿ zರೆ. ಈ ಹಿನ್ನಲೆಯಲ್ಲಿ ಅಭಿಯಾನದ ಮೊದಲ ಸಭೆ ಫೆ.೨೧ರ ಶನಿವಾರ ಬೆಳಿಗ್ಗೆ ೧೦.೩೦ಕ್ಕೆ ನ್ಯೂಟೌನ್ ಮಹಾತ್ಮಗಾಂಧಿ ಉದ್ಯಾನವನದಲ್ಲಿ ಸಭೆ ಕರೆಯಲಾಗಿದೆ.
ಈ ಹಿಂದೆ ಸುಮಾರು ೫೦ ರಿಂದ ೬೦ ರಂಗ ತಂಡಗಳು ಹಾಗು ೫೦ಕ್ಕೂ ಹೆಚ್ಚು ಜನಪದ ಕಲಾ ತಂಡಗಳು ಸಕ್ರಿಯವಾಗಿದ್ದವು. ಆದರೆ ಕಾಲಾನಂತರದಲ್ಲಿ ಒಂದೊಂದೇ ಕಲಾ ತಂಡಗಳು ಕಣ್ಮರೆಯಾಗಿವೆ. ಇದಕ್ಕೆ ಪೂರಕ ವೆಂಬಂತೆ ರಂಗಮಂದಿರ ಇಲ್ಲದಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಜನರಲ್ಲಿ ಕಲೆಯಲ್ಲಿ ಆಸಕ್ತಿ ಇಲ್ಲದಿರುವುದು ವಿಷಾದನೀಯ ಸಂಗತಿಯಾಗಿದೆ. ಈ ನಡುವೆ ಇದೀಗ ಇಂದಿನ ತಲೆಮಾರಿಗೆ ರಂಗ ಚಟುವಟಿಕೆ ಗಳನ್ನು ಪರಿಚಯಿಸುವ ಹಾಗು ರಂಗಭೂಮಿ ತನ್ನ ಹಳೆಯ ವೈಭವ ಮರಳಿ ಪಡೆಯುವ ಉzಶದಿಂದ ಸುಸಜ್ಜಿತ ರಂಗಮಂದಿರ ನಿರ್ಮಾ ಣಕ್ಕೆ ಅಭಿಯಾನ ಆರಂಭಿಸಲಾಗಿದೆ.
ಎ ಪ್ರಕಾರದ ಕಲಾವಿದರು, ರಂಗ ತಂಡಗಳು ಮೊದಲ ಸಭೆಗೆ ಆಗಮಿಸಿ ಸಲಹೆ, ಸೂಚನೆ ಹಾಗು ಮಾರ್ಗದರ್ಶನ ನೀಡುವ ಮೂಲಕ ಸಹಕರಿಸುವಂತೆ ಜನಪದ ಕಲಾವಿದರಾದ ತಮಟೆ ಜಗದೀಶ್ ಹಾಗು ದಿವಾಕರ್ ಕೋರಿzರೆ.
ಹೆಚ್ಚಿನ ಮಾಹಿತಿಗಾಗಿ ತಮಟೆ ಜಗದೀಶ್-೯೯೪೫೨೫೫೭೫೪ ಅಥವಾ ಕೆ.ಎಸ್ ರವಿಕುಮಾರ್- ೮೪೯೬೯೦೧೩೫೫ ಅಥವಾ ಜಿ. ದಿವಾಕರ-೯೦೩೬೬೮೧೦೯೨ ಸಂಪರ್ಕಿಸಬಹುದಾಗಿದೆ.


