ರೈತರ ಬಾಕಿ ಹಣ ಪಾವತಿಗೆ ಆಗ್ರಹಿಸಿ ಸರಣಿ ಉಪವಾಸ
ಅಥಣಿ: ಕಳೆದ ಎರಡು ದಿನಗಳಿಂದ ಕೃಷ್ಣಾ ಸಹಕಾರಿ ಸಕ್ಕರೆ ೨೦೧೮-೧೯ ಸಾಲಿನ ಬಾಕಿ ಹಣ ರೂ. ೩೨೦ ನೀಡುವಂತೆ ಒತ್ತಾಯಿಸಿ ರೈತರು ಸರಣಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾತ ನಾಡಿದ ರೈತ ಮುಖಂಡ ಅಣ್ಣಪ್ಪ ಹಳ್ಳೂರ ಅವರು, ಕಳೆದ ನಾಲ್ಕು ವರ್ಷಗಳಿಂದ ಕಾರ್ಖಾನೆಯ ಆಡಳಿತ ಮಂಡಳಿ ಕುಂಟು ನೆಪ ಹೇಳಿಕೊಂಡು ಬರುತ್ತಿದ್ದು ತಾಲೂಕಿನ ಸುಮಾರು ೧೭ ಸಾವಿರ ರೈತರ ಸುಮಾರು ೨೩ ಕೋಟಿ ರೂ. ಬಾಕಿ ಉಳಿದಿದ್ದು ರೈತನ ಉಳಿವಿ ಗಾಗಿ ಈ ಭೀಕರ ಬರಗಾಲದಲ್ಲಿ ನೆರವಿಗೆ ಬರುತ್ತಾರೆ ಎಂಬ ನಂಬಿಕೆ ನಮ್ಮದಾಗಿತ್ತು. ಆದರೆ ಇವರುಗಳ ಸುಳ್ಳ ಭರವಸೆಯನ್ನು ಎಷ್ಟು ದಿನ ಸಹಿಸಿಕೊಳ್ಳಲು ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ಹಂಗಾಮಿನಲ್ಲಿ ಉತ್ತಮ ಗುಣಮಟ್ಟದ ಕಬ್ಬನ್ನೆ ಇಲ್ಲಿಯ ರೈತರು ಕೊಡುತ್ತಾ ಬಂದಿದ್ದಾರೆ, ಒಳ್ಳೆಯ ರಿಕವರಿನೂ ಇದೆ. ಸಕ್ಕರೆಗೂ ಉತ್ತಮ ಬೆಲೆ ಬಂದಿದೆ. ಇಷ್ಟಾಗಿಯೂ ಯಾಕೆ ರೈತರ ಕಷ್ಟ ಅರ್ಥ ಮಾಡಿಕೊಳ್ಳುತ್ತಿಲ್ಲಾ ಎಂದು ಪ್ರಶ್ನಿಸಿದರು.
ಮತ್ತೋರ್ವ ರೈತ ಮುಖಂಡ ಶಿವಾನಂದ ಖೋತ ಮಾತನಾಡಿ, ಇಷ್ಟು ದಿನಗಳ ಒಳಗಡೆ ರೈತನಿಗೆ ಹಣ ಸಂದಾಯ ಮಾಡಲಾಗು ವುದು ಎಂಬುದನ್ನು ಲಿಖಿತವಾಗಿ ಕೊಟ್ಟಲ್ಲಿ ನಾವು ಹೋರಾಟದಿಂದ ಹಿಂದೆ ಸರಿಯಲು ತಯಾರಾಗಿ ದ್ದೇವೆ ಎಂದರು.ನೂರಾರು ಸಂಖ್ಯೆ ಯಲ್ಲಿ ರೈತರು ಸರಣಿ ಸತ್ಯಾಗ್ರಹ ದಲ್ಲಿ ಭಾಗವಹಿಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.