ಜಿಲ್ಲಾ ಸುದ್ದಿತಾಜಾ ಸುದ್ದಿ

ರೈತ ವಿರೋಧಿ ೩ ಕೃಷಿ ಕಾಯ್ದೆ ರದ್ದತಿಗೆ ರೈತ ಸಂಘ ಆಗ್ರಹ…

Share Below Link

ಶಿವಮೊಗ್ಗ : ಭದ್ರಾವತಿಯ ನಾಗಸಮುದ್ರದಲ್ಲಿ ಇಂದು ರೈತರ ೪೧ ನೇ ಹುತಾತ್ಮ ದಿನಾಚರಣೆ ಯನ್ನ ಹಮ್ಮಿಕೊಳ್ಳಲಾಗಿದ್ದು ರೈತರು ಹಲವು ಬೇಡಿಕೆಗಳನ್ನ ಈಡೇರಿಸುವಂತೆ ಹೊಸ ಸರ್ಕಾರಕ್ಕೆ ರಾಜ್ಯ ರೈತ ಸಂಘ ರವಾನಿಸಿದೆ.
ರೈತ ವಿರೋಧಿ ೩ ಕೃಷಿ ಕಾಯ್ದೆಗಳನ್ನ ತಕ್ಷಣವೇ ರದ್ದು ಪಡಿಸಬೇಕು, ರೈತನ ಉತ್ಪನ್ನಗಳಿಗೆ ಡಾ. ಸ್ವಾಮಿನಾಥನ್‌ರವರ ವರದಿ ಪ್ರಕಾರ ಬೆಲೆ ನಿಗಧಿ ಪಡಿಸಬೇಕು. ಬಗರ್‌ಹುಕ್ಕುಂ ರೈತರಿಗೆ ಹಕ್ಕು ಪತ್ರ ವಿತರಣೆ ಮಾಡಬೇಕು, ವಿದ್ಯುತ್ ಖಾಸಗೀಕರಣ ಮಾಡಬಾರದು ಎಂಬ ಬೇಡಿಕೆಯನ್ನ ರಾಜ್ಯದ ನೂತನ ಸರ್ಕಾರದ ಮುಂದೆ ಸಂಘ ಬೇಡಿಕೆನಿಟ್ಟಿದೆ.
೧೯೮೨ ಮೇ ೨೫ರಂದು ಭದ್ರಾ ವತಿ ತಾಲ್ಲೂಕಿನ ನಾಗಸಮುದ್ರ ಗ್ರಾಮದಲ್ಲಿ ೩ಜನ ರೈತರು ಗೋಲಿಬಾರ್ ನಲ್ಲಿ ಪೊಲೀಸ್‌ರ ಗುಂಡಿಗೆ ಹುತಾತ್ಮರಾಗಿದ್ದರು. ನಾಗಸಮುದ್ರದ ಹುತಾ ತ್ಮರ ಸ್ಮಾರಕದ ಬಳಿ ೪೧ನೇ ವರ್ಷದ ಹುತಾತ್ಮರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂಧರ್ಭದಲ್ಲಿ ಹಾಜರಿದ್ದ ರೈತರನ್ನು ಉದ್ದೇಶಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜಧ್ಯಕ್ಷರಾದ ಹೆಚ್.ಆರ್ ಬಸವರಾಜಪ್ಪನವರು ಹುತಾತ್ಮರಿಗೆ ಪುಷ್ಪನಮನವನ್ನು ಸಲ್ಲಿಸಿ, ಧ್ವಜರೋಹಣ ನಡೆಸಿ ಮಾತನಾಡಿ ೨೦೨೩ರ ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾ ವಣೆಯಲ್ಲಿ ಕಾಂಗ್ರೇಸ್ ಬಹುಮತ ಪಡೆದು ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿ, ಡಿ.ಕೆ ಶಿವ ಕುಮಾರ್‌ರವರು ಉಪಮುಖ್ಯ ಮಂತ್ರಿಗಳಾಗಿ ಜೊತೆಗೆ ೮ಜನ ಸಚಿ ವರಾಗಿ ಪ್ರಮಾಣವಚನ ಸ್ವೀಕರಿಸಿ ರುವುದನ್ನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಅಭಿನಂದಿಸುತ್ತದೆ ಎಂದರು.
ಕರ್ನಾಟಕದಲ್ಲಿ ವಿಶೇಷವಾಗಿ ರೈತರು, ಕೃಷಿ ಕಾರ್ಮಿಕರು, ದುಡಿಯುವ ವರ್ಗದ ಜನರು, ಬಡವರು ಎ ಜತಿಯ, ಧರ್ಮದ ಜನರು ಸರ್ಕಾರದ ಮೇಲೆ ತುಂಬಾ ಅಕಾಂಕ್ಷೆಗಳನ್ನ ಇಟ್ಟು ಮತವನ್ನು ಹಾಕಿ ಗೆಲ್ಲಿಸಿ zರೆ. ಜನರಿಗೆ ಭರವಸೆ ಕೊಟ್ಟಂತೆ ಗ್ಯಾರಂಟಿ ಯೋಜನೆಗಳು ಜರಿ ಗೊಳಿಸುವುದು, ರೈತ ವಿರೋಧಿ ೩ಕೃಷಿ ಕಾಯ್ದೆಗಳನ್ನು ರದ್ದು ಮಾ ಡುವುದು, ಡಾ. ಸ್ವಾಮಿನಾಥನ್ ವರದಿ ಪ್ರಕಾರ ರೈತ ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ನೀಡುವುದು,
ರೈತರಿಂದ ದವಸ ಧಾನ್ಯಗಳನ್ನ ಖರೀದಿ ಮಾಡಲು ಆವರ್ತನಿಧಿಯನ್ನು ಮೀಸಲಿಡುವುದು, ಬಗರ್‌ಹುಕ್ಕುಂ ರೈತರಿಗೆ ಹಕ್ಕುಪತ್ರ ವಿತರಿಸಬೇಕು, ಮಲೆನಾಡು ಭಾಗದ ಭೂಮಿ ಸಮಸ್ಯೆಯನ್ನ ಪರಿಹರಿಸಬೇಕು, ವಿದ್ಯುತ್ ಖಾಸ ಗೀಕರಣ ಮಾಡದೆ ಇರುವುದು, ಖಾಸಗೀಕರಣದ ಹುನ್ನಾರವಾಗಿ ರುವ ರೈತರ ಐ.ಪಿ ಸೆಟ್‌ಗಳಿಗೆ ಆಧಾರ್‌ಕಾರ್ಡ್ ಜೋಡಣೆ ಯನ್ನು ಮಾಡಬಾರದು, ಏತ ನೀ ರಾವರಿ ಮತ್ತು ಬೃಹತ್ ನೀರಾವರಿ ಯೋಜನೆಗಳಿಗೆ ಹೆಚ್ಚು ಹಣ ಮೀಸಲಿಡುವುದು ಇನ್ನು ಹಲ ವಾರು ಸಮಸ್ಯೆಗಳನ್ನ ಒಳಗೊಂಡ ರೈತರ ಪ್ರಣಾಳಿಕೆಯನ್ನು ಕರ್ನಾ ಟಕ ಸಂಯುಕ್ತ ಕಿಸಾನ್ ಹೋರಾಟ ಸಮಿತಿ ಸಭೆಯಲ್ಲಿ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ಕೊಡಲಾಗಿತ್ತು.


ಈ ಸಭೆಯಲ್ಲಿ ಬಿ.ಜೆ.ಪಿ ಪಕ್ಷ ದಿಂದ ಯಾರು ಭಾಗವಹಿಸಿರ ಲಿಲ್ಲ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್, ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷರಾದ ಪ್ರೋ. ರಾಧಕೃಷ್ಣ, ಕರ್ನಾಟಕದ ಉಸ್ತು ವಾರಿ ಆನಂದಶರ್ಮಾ ಭಾಗವ ಹಿಸಿ ರೈತರ ಸಮಸ್ಯೆಗಳಿರುವ ಈ ಪ್ರಣಾಳಿಕೆಯನ್ನ ಒಪ್ಪಿ ಈಡೇರಿ ಸುವುದಾಗಿ ಗ್ಯಾರಂಟಿ ಪತ್ರಕ್ಕೆ ಪಕ್ಷದ ಪರವಾಗಿ ಪ್ರೋ. ರಾಧ ಕೃಷ್ಣರವರು ಸಹಿ ಹಾಕಿzರೆ.
ಮತ್ತು ಜೆ.ಡಿ.ಎಸ್ ಪಕ್ಷದಿಂದ ತಿಪ್ಪೇಸ್ವಾಮಿಯವರು ಪ್ರಣಾಳಿಕೆ ಯನ್ನ ಒಪ್ಪಿ ಸಹಿ ಹಾಕಿzರೆ. ನಮ್ಮ ಪ್ರಣಾಳಿಕೆಯಲ್ಲಿರುವ ಬೇಡಿಕೆ ಗಳನ್ನ ತಕ್ಷಣವೇ ಈಡೇರಿಸಬೇಕು. ಜೊತೆಗೆ ಈ ಮುಂಗಾರು ಮಳೆಗೆ ಮನೆ ಹಾನಿ, ಬೆಳೆ ಹಾನಿ, ಜನ- ಜನುವಾರು ಸಾವನಪ್ಪಿzರೆ. ಇದಕ್ಕೆ ತಕ್ಷಣ ಪರಿಹಾರ ನೀಡ ಬೇಕೆಂದು ಸರ್ಕಾರಕ್ಕೆ ಒತ್ತಾಯಿ ಸಬೇಕೆಂದು ತಿಳಿಸಿದರು.
ಈ ಸಂಧರ್ಭದಲ್ಲಿ ರೈತ ಸಂಘದ ಜಿಧ್ಯಕ್ಷರಾದ ಎಸ್. ಶಿವಮೂರ್ತಿ, ಜಿ ಕಾರ್ಯಾ ಧ್ಯಕ್ಷರಾದ ರಾಘವೇಂದ್ರ.ಕೆ, ಜಿ ಕಾರ್ಯದರ್ಶಿ ಗುರು ಶಾಂತ,ಜಿ ಹಸಿರುಸೇನೆ ಸಂಚಾ ಲಕರಾದ ಎಂ.ಡಿ ನಾಗರಾಜ್, ತಾ.ಗೌರವಾಧ್ಯಕ್ಷರಾದ ಎಂ.ಹೆಚ್ ತಿಮ್ಮಪ್ಪ,ತಾ.ಅಧ್ಯಕ್ಷರಾದ ಜಿ.ಎನ್ ಪಂಚಾಕ್ಷರಿ, ತಾ. ಕಾರ್ಯದರ್ಶಿ ಜಿ.ಬಿ ರವಿ,ರೈತ ಮುಖಂಡರಾದ ನಾಗರಾಜ್, ಎನ್.ಡಿ ಮಶಪ್ಪ, ಶಿವರಾಜ್, ವೀರೇಶ್, ಇದ್ದರು.