ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಉದ್ಯಮದ ಯಶಸ್ಸಿಗೆ ಕುಟುಂಬದ ಸಹಕಾರ ಅಗತ್ಯ….

Share Below Link

ಶಿವಮೊಗ್ಗ: ಉದ್ಯಮದ ಯಶಸಿಗೆ ಕುಟುಂಬದ ಸಹಕಾರ ತುಂಬಾ ಅಗತ್ಯ. ಕುಟಂಬದಲ್ಲಿ ಪ್ರೀತಿ, ನಂಬಿಕೆ ಹಾಗೂ ವಿಶ್ವಾಸ ಮುಖ್ಯ ಪ್ರತಿಯೊಬ್ಬ ಸದಸ್ಯ ರಲ್ಲಿಯ ಒಳ್ಳೆಯ ಭಾವನೆ ಇರ ಬೇಕು ಎಂದು ವಿದ್ವಾಂಸ, ವಾಗ್ಮಿ ರಾಯಚೂರು ಕೃಷ್ಣಾಚಾರ್ ಹೇಳಿ ದರು.


ನಗರದ ಮಥುರಾ ಪಾರಾ ಡೈಸ್ ನಲ್ಲಿ ಹೊಟೇಲ್ ಮಾಲೀ ಕರ ಸಂಘದಿಂದ ಆಯೋಜಿಸಿದ್ದ ಹೊಟೇಲ್ ಉದ್ಯಮದ ಕುರಿತು ಚರ್ಚೆ ಕಾರ್ಯಕ್ರಮದಲ್ಲಿ ಉದ್ಯಮ ಹಾಗೂ ಕುಟುಂಬದ ಸಮತೋಲನ ವಿಷಯ ಬಗ್ಗೆ ಮಾತನಾಡಿದರು.
ಯಾಂತ್ರಿಕ ಯುಗದಲ್ಲಿ ಕುಟುಂಬದವರೊಂದಿಗೆ ಮಕ್ಕ ಳೊಂದಿಗೆ ಸರಿಯಾಗಿ ಸಮಯ ಕೊಡಲು ಸಾಧ್ಯ ಆಗುತ್ತಿಲ್ಲ. ಅವ ರಿಗೆ ಪ್ರೀತಿ ಭಾವದಿಂದ ಮಾತ ನಾಡಿಸಲು, ಕುಟಂಬದ ಸದಸ್ಯರ ಕಷ್ಟ ಸುಖ ಹಂಚಿಕೊಳ್ಳಲು ಸಮಯ ಆಗುತ್ತಿಲ್ಲ. ಎಷ್ಟೋ ಕುಟುಂಬಗಳು ಸಮಸ್ಯೆ ಎದು ರಿಸುತ್ತಿವೆ. ಇಂತಹ ಕಾರ್ಯ ಕ್ರಮಗಳು ಆತ್ಮವಿಶ್ವಾಸ ಬಾಂಧವ್ಯ ವೃದ್ಧಿಸುವಲ್ಲಿ ಸಹಕಾರಿಯಾಗು ತ್ತವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಯೋಗ ಶಿಕ್ಷಕ ಬಾ.ಸು.ಅರವಿಂದ ಅವರು ಯೋಗ ಪ್ರಾತ್ಯಕ್ಷಿಕೆ ನಡೆಸಿಕೊ ಟ್ಟರು. ಯೋಗದ ಕುರಿತು ಮಾv ನಾಡಿ, ಯೋಗವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ಒತ್ತಡ ನಿವಾರಣೆಗೆ ಯೋಗದಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಪ್ರಾಣಾಯಾಮ ನಮ್ಮ ಮಾನಸಿಕ ಒತ್‌ತಡ ಕಡಿಮೆ ಮಾಡುವುದರ ಜತೆಯಲ್ಲಿ ದೇಹ ಹಾಗೂ ಮನಸ್ಸನ್ನು ಸದೃಢವಾ ಗಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಯು.ಎಂ.ಶಂಕರ ನಾರಾಯಣ ಹೊಳ್ಳ ಮಾತನಾಡಿ, ವೃತ್ತಿ ಜತೆಯಲ್ಲಿ ಕುಟುಂಬದ ಜತೆಯಲ್ಲಿ ಸಮಯ ಕಳೆಯು ವುದು ಅತ್ಯಂತ ಮುಖ್ಯ. ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚು ನಡೆಯಬೇಕು ಎಂದು ತಿಳಿಸಿದರು.
ವಿಜೇಂದ್ರರಾವ್ ಮತ್ತು ಸಂಗಡಿಗರು ಅವರು ಮನೋ ರಂಜನಾ ಕಾರ್ಯಕ್ರಮ ನಡೆಸಿಕೊ ಟ್ಟರು. ಹೊಟೇಲ್ ಮಾಲೀಕರ ಸಂಘದ ಕಾರ್ಯದರ್ಶಿ ಎನ್. ಗೋಪಿನಾಥ್, ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ದ ಸಹ ಕಾರ್‍ಯದರ್ಶಿ ಜಿ. ವಿಜಯ್ ಕುಮಾರ್, ಲಕ್ಷ್ಮೀದೇವಿ ಗೋಪಿ ನಾಥ್, ಹೊಟೇಲ್ ಮಾಲಿ ಕರ ಸಂಘದ ಸದಸ್ಯರು, ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.